Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G ಲಾಂಚ್‌ಗೆ ದಿನಾಂಕ ಫಿಕ್ಸ್! ಫೀಚರ್ಸ್ ನಿರೀಕ್ಷೆ ಏನು?
ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು (Samsung Galaxy Smartphone) ಈಗಾಗಲೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿವೆ. ಇದರ ಜೊತೆಗೆ ಈಗ ಮತ್ತೆರಡು ಹೊಸ ಸ್ಮಾರ್ಟ್‌ಫೋನ್‌ಗಳ ಅನಾವರಣಕ್ಕೆ ವೇದಿಕೆ ಸಿದ್ಧವಾಗಿದ್ದು, ಈ ಮೂಲಕ ಸ್ಯಾಮ್‌ಸಂಗ್ ಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಹೌದು, ಟೆಕ್ ದೈತ್ಯ ಸ್ಯಾಮ್‌ಸಂಗ್ ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್‌ಗಳನ್ನು (Samsung Galaxy A15 5G, Samsung Galaxy A25 5G) ಭಾರತದಲ್ಲಿ ಲಾಂಚ್ ಮಾಡುವ ದಿನಾಂಕವನ್ನು ಘೋಷಣೆ ಮಾಡಿದೆ. ಟೀಸರ್‌ನಲ್ಲಿ ಕಂಡುಬಂದಂತೆ ಈ ಫೋನ್‌ಗಳು ನೀಲಿ ಹಾಗೂ ಹಳದಿ ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ. ಹಾಗಿದ್ರೆ, ಈ ಫೋನ್ ಯಾವಾಗ ಲಾಂಚ್ ಆಗಲಿದೆ?, ನಿರೀಕ್ಷಿತ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G ಲಾಂಚ್ ದಿನಾಂಕ ಘೋಷಣೆ: ಈ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಇದೇ ತಿಂಗಳ 26 ರಂದು ಅನಾವರಣ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಹಾಗೆಯೇ ಗ್ಯಾಲಕ್ಸಿ A15 5G ಸ್ಯಾಮ್‌ಸಂಗ್ ಗ್ಯಾಲಕ್ಸಿಯನ್ನು ಸ್ಯಾಮ್‌ಸಂಗ್‌ನ ಸಿಗ್ನೇಚರ್ ವಿನ್ಯಾಸದ ಭಾಷೆಯೊಂದಿಗೆ ಪ್ರೀಮಿಯಂ ಭಾವನೆಯನ್ನು ಒದಗಿಸುವ ಮೂಲಕ ಪ್ರದರ್ಶಿಸುತ್ತದೆ ಎಂದು ಕಂಪೆನಿ ತಿಳಿಸಿದೆ.
ಇನ್ನು ಈ ಫೋನ್‌ಗಳು ಸೂಪರ್ ಅಮೋಲೆಡ್ ಡಿಸ್‌ಪ್ಲೇ ಅಯ್ಕೆ ಪಡೆದುಕೊಂಡಿದ್ದು, ಅದರಲ್ಲಿ ಪ್ರಮುಖವಾಗಿ ಗ್ಯಾಲಕ್ಸಿ A15 5G ವಿಡಿಯೋಗಳಲ್ಲಿ ಮಸುಕು ಅಥವಾ ಅಸ್ಪಷ್ಟತೆಯನ್ನು ಕಡಿಮೆ ಮಾಡಲು VDIS ಫೀಚರ್ಸ್‌ನೊಂದಿಗೆ 50 ಮೆಗಾಪಿಕ್ಸೆಲ್ ನೊಂದಿಗೆ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿರಲಿದೆ. ಇದರೊಂದಿಗೆ ಬಳಕೆದಾರರ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಸ್ಟೋರೇಜ್ ಆಯ್ಕೆ ಹಾಗೂ RAM ವೇರಿಯಂಟ್ ಆಯ್ಕೆಯಲ್ಲಿ ಬರಲಿದೆ ಎಂದು ಇದೇ ವೇಳೆ ಕಂಪೆನಿ ಮಾಹಿತಿ ಬಹಿರಂಗಪಡಿಸಿದೆ.

ಇದರೊಂದಿಗೆ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್ 120Hz ಸೂಪರ್ ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬರಲಿದ್ದು, 50 ಮೆಗಾಪಿಕ್ಸೆಲ್ (OIS) ನೊಂದಿಗೆ ಟ್ರಿಪಲ್ ಕ್ಯಾಮೆರಾ ರಚನೆ ಹಾಗೂ ಹಲವಾರು ಎಐ ಸಕ್ರಿಯಗೊಳಿಸಿದ ಫೋಟೋ ಎಡಿಟಿಂಗ್ ಫೀಚರ್ಸ್ ಆಯ್ಕೆಯನ್ನು ಈ ಫೋನ್ ಹೊಂದಿರಲಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಈ ಫೋನ್ 5nm ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ತಿಳಿದುಬಂದಿದೆ. ಅಂದರೆ ಎಕ್ಸಿನೋಸ್ 1280 ಪ್ರೊಸೆಸರ್ ಬಲ ಹೊಂದಿರಬಹುದು ಎಂದು ಊಹಿಸಲಾಗಿದೆ.
ಹಾಗೆಯೇ ಗ್ಯಾಲಕ್ಸಿ A15 5G ಮತ್ತು ಗ್ಯಾಲಕ್ಸಿ A25 5G ಎರಡೂ ಫೋನ್‌ಗಳು ಸಹ ನಾಕ್ಸ್ ಸೆಕ್ಯುರಿಟಿ ಪ್ಲಾಟ್‌ಫಾರ್ಮ್‌ನೊಂದಿಗೆ ಕಾಣಿಸಿಕೊಳ್ಳಲಿವೆ ಎನ್ನಲಾಗಿದ್ದು, ಬಳಕೆದಾರರು ತಮ್ಮ ಡೇಟಾದ ಸಂಪೂರ್ಣ ಕಂಟ್ರೋಲ್ ಅನ್ನು ಪಡೆಯಬಹುದಾಗಿದೆಯಂತೆ. ಇದರೊಂದಿಗೆ ಈ ಫೋನ್‌ಗಳಲ್ಲಿ ಆಟೋ ಬ್ಲಾಕರ್, ಸುರಕ್ಷಿತ ಫೋಲ್ಡರ್, ಗೌಪ್ಯತೆ ಡ್ಯಾಶ್‌ಬೋರ್ಡ್, ಸ್ಯಾಮ್‌ಸಂಗ್ ಪಾಸ್‌ಕೀ ಮತ್ತು ಇತರ ಫೀಚರ್ಸ್ ಅನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಉಳಿದಂತೆ ಈ ಫೋನ್‌ಗಳು ಆಂಡ್ರಾಯ್ಡ್ 14 ಆಧಾರಿತ ಒನ್ UI 6.0 ಅನ್ನು ರನ್ ಮಾಡುತ್ತವೆ ಎಂದು ತಿಳಿದುಬಂದಿದ್ದು, ಇದು 4 ಓಎಸ್ ಆವೃತ್ತಿಗಳು ಮತ್ತು 5 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆದುಕೊಂಡಿರಲಿದೆ ಎಂದು ನಂಬಲಾಗಿದೆ.ಅಷ್ಟೇ ಅಲ್ಲದೆ ಈ ಫೋನ್‌ಗಳು 25W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತವೆ ಎಂಬ ಮಾಹಿತಿ ದೃಢವಾಗಿದೆ. ಆದರೆ, ಈ ಫೋನ್‌ಗಳ ಬೆಲೆ ಹಾಗೂ ಮಾರಾಟದ ವಿಷಯ ಮಾತ್ರ ಇನ್ನೂ ಎಲ್ಲೂ ಲೀಕ್ ಆಗಿಲ್ಲ.


Click it and Unblock the Notifications








