Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನ ಈ ಅಗ್ಗದ ಫೋನ್‌ಗೆ ಭರ್ಜರಿ ಆಫರ್! ಕ್ವಾಡ್‌ ರಿಯರ್‌ ಕ್ಯಾಮೆರಾ

ಸ್ಯಾಮ್‌ಸಂಗ್‌ (Samsung) ಭಿನ್ನ ಶ್ರೇಣಿಯ ಫೋನ್‌ಗಳನ್ನು ಅನಾವರಣ ಮಾಡಿದೆ. ಅಂದರೆ ಅಗ್ಗದ ಬೆಲೆಯಿಂದ ಬಹಳ ದುಬಾರಿ ಎನಿಸುವ ಫೋನ್‌ಗಳನ್ನು ಸ್ಯಾಮ್‌ಸಂಗ್‌ ನಲ್ಲಿ ಕಾಣಬಹುದು. ಅದರಂತೆ ಈಗ ಅಗ್ಗದ ಬೆಲೆಯ ಫೋನ್‌ಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಉತ್ತಮ ಆಫರ್ ನೀಡಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್‌ (Samsung Galaxy A21s smartphone) ಇದೀಗ ಆಫರ್ ಬೆಲೆಗೆ ಲಭ್ಯ ಇದೆ. ಈ ಸ್ಮಾರ್ಟ್‌ಫೋನ್ 64GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಎಕ್ಸಿನೋಸ್‌ 850 (8nm) ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗೆ ಇರುವ ಆಫರ್ ಬೆಲೆ ವಿವರ ಹಾಗೂ ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ನ ಈ ಅಗ್ಗದ ಫೋನ್‌ಗೆ ಭರ್ಜರಿ ಆಫರ್! ಕ್ವಾಡ್‌ ರಿಯರ್‌ ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಫೋನ್ 19,999ರೂ.ಗಳ ಆಫರ್ ಬೆಲೆ ಪಡೆದಿದ್ದು, ನೀವೀಗ ಇದನ್ನು 12,149 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಅಮೆಜಾನ್‌ನಲ್ಲಿ (Amazon) ಈ ಫೋನ್‌ಗೆ 39% ರಿಯಾಯಿತಿ ನೀಡಲಾಗಿದೆ. ಅದಾಗ್ಯೂ ನೀವು ಕೆಲವು ವಿಶೇಷ ಕೊಡುಗೆಗಳನ್ನೂ ಸಹ ಈ ಫೋನ್‌ ಮೇಲೆ ಪಡೆಯಬಹುದು.

ಇಷ್ಟು ಹಣ ಪಾವತಿ ಮಾಡಿ ಖರೀದಿ ಮಾಡಲು ಆಗುವುದಿಲ್ಲ ಎಂದರೆ ನೀವು ಇಎಮ್‌ಐ ಆಯ್ಕೆ ಮೂಲಕವೂ ಖರೀದಿ ಮಾಡಬಹುದಾಗಿದೆ. ಈ ಇಎಮ್‌ಐ 589 ರೂ.ಗಳಿಂದ ಆರಂಭವಾಗಲಿದೆ. ಇದರೊಂದಿಗೆ ಎಕ್ಸ್‌ಚೇಂಜ್‌ ಆಫರ್ ಸಹ ಇದ್ದು, ನಿಮ್ಮ ಹಳೆಯ ಫೋನ್‌ ಉತ್ತಮ ಸ್ಥಿತಿಯಲ್ಲಿ ಇದ್ದರೆ 11 ಸಾವಿರಕ್ಕೂ ಅಧಿಕ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸೋಣ ಬನ್ನಿ.

ಸ್ಯಾಮ್‌ಸಂಗ್‌ನ ಈ ಅಗ್ಗದ ಫೋನ್‌ಗೆ ಭರ್ಜರಿ ಆಫರ್! ಕ್ವಾಡ್‌ ರಿಯರ್‌ ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.5 ಇಂಚಿನ PLS LCD ಡಿಸ್‌ಪ್ಲೇ ಹೊಂದಿದ್ದು, ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 82.8% ಸ್ಕ್ರೀನ್-ಟು-ಬಾಡಿ ಅನುಪಾತ, 270 ppi ಸಾಂದ್ರತೆಯೊಂದಿಗೆ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಈ ಫೋನ್ ಎಕ್ಸಿನೋಸ್‌ 850 (8nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 10 ಓಎಸ್‌ನಲ್ಲಿ ರನ್‌ ಆಗಲಿದೆ. ಅದಾಗ್ಯೂ ನೀವು ಆಂಡ್ರಾಯ್ಡ್ 12 ಗೆ ಅಪ್‌ಗ್ರೇಡ್‌ ಪಡೆಯಬಹುದು. ಇದರೊಂದಿಗೆ ಮಾಲಿ-G52 ಗ್ರಾಫಿಕ್ಸ್ ಕಾರ್ಡ್‌ ಬಲ ಪಡೆದಿದ್ದು, ಉತ್ತಮವಾಗಿ ಕೆಲಸ ಮಾಡಲಿದೆ. ಇನ್ನು ಆಫರ್ ಬೆಲೆಗೆ ಲಭ್ಯ ಇರುವ ಫೋನ್ 6GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಬಜೆಟ್‌ ಬೆಲೆಯ ಫೋನ್‌ ಕ್ವಾಡ್ ರಿಯರ್‌ ಕ್ಯಾಮೆರಾ ಹೊಂದಿದೆ. ಅದರಲ್ಲಿ 48 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್, 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಹಾಗೂ ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸರ್‌ ಹೊಂದಿದೆ. ಈ ಸೆನ್ಸರ್‌ಗಳು ಎಲ್‌ಇಡಿ ಫ್ಲ್ಯಾಶ್‌, ಪನೋರಮಾ, ಎಚ್‌ಡಿಆರ್ ಫೀಚರ್ಸ್‌ ಬೆಂಬಲ ಪಡೆದಿವೆ. ಇದರೊಂದಿಗೆ 13 ಮೆಗಾಪಿಕ್ಸೆಲ್ ಸಿಂಗಲ್ ಕ್ಯಾಮೆರಾವನ್ನು ನೋಡಬಹುದು.

ಸ್ಯಾಮ್‌ಸಂಗ್‌ನ ಈ ಅಗ್ಗದ ಫೋನ್‌ಗೆ ಭರ್ಜರಿ ಆಫರ್! ಕ್ವಾಡ್‌ ರಿಯರ್‌ ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 15W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ 3.5ಎಂಎಂ ಜ್ಯಾಕ್, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.0, A2DP, LE, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬಿಡಿಎಸ್ ಸ್ಥಾನೀಕರಣ ಮತ್ತು ಎಫ್‌ಎಮ್‌ ರೇಡಿಯೋ ಸೌಲಭ್ಯ ಲಭ್ಯ ಇದೆ.

Best Mobiles in India

English summary
Samsung Galaxy A21s smartphone is now available at an offer price. This smartphone has got 64GB internal storage option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+