ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಲಾಂಚ್!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಈಗಾಗಲೇ ಗ್ಯಾಲಕ್ಸಿ A ಸರಣಿಯಲ್ಲಿ ಹಲವು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ರಚನೆ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.

ಹೌದು, ಸ್ಯಾಮ್‌ಸಂಗ್ ಹೊಸದಾಗಿ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಅನ್ನು ಲಂಡನ್‌ನಲ್ಲಿ ಲಾಂಚ್ ಮಾಡಿದೆ. ಆಂಡ್ರಾಯ್ಡ್ 10 ಓಎಸ್ ಸಫೋರ್ಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿರುವ ಈ ಫೋನ್ 3GB RAM, 4GB RAM, ಮತ್ತು 6GB RAM ಸಾಮರ್ಥ್ಯದ ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಉಳಿದಂತೆ ಗ್ಯಾಲಕ್ಸಿ A21s ಫೋನ್ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಗ್ಯಾಲ್ಯಾಕ್ಸಿ A21s ಡಿಸ್‌ಪ್ಲೇ
ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದ್ದು, 6.5 ಇಂಚಿನ ಫುಲ್ ಹೆಚ್‌ಡಿ ಪ್ಲಸ್ IPS ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 263 ppi ಆಗಿದ್ದು, 20:9 ಅನುಪಾತವನ್ನು ಪಡೆದಿದೆ. ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಪೂರಕವಾಗಿದೆ.

ಗ್ಯಾಲ್ಯಾಕ್ಸಿ A21s ಪ್ರೊಸೆಸರ್
ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನ್ ಆಕ್ಟಾಕೋರ್ Exynos 7904 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಮೂರು ವೇರಿಯಂಟ್ ಮಾದರಿಗಳಿರಲಿದ್ದು, ಅವುಗಳು ಕ್ರಮವಾಗಿ 3GB+32GB, 4GB+64GB, ಮತ್ತು 6GB+64GB ಸಾಮರ್ಥ್ಯವನ್ನು ಒಳಗೊಂಡಿವೆ. ಇದರೊಂದಿಗೆ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹವನ್ನು ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಗ್ಯಾಲ್ಯಾಕ್ಸಿ A21s ಕ್ಯಾಮೆರಾ
ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸಲ್‌ನಲ್ಲಿದೆ. ಅದೇ ರಿತಿ ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಮುಂಭಾಗದಲ್ಲಿ 13 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಗ್ಯಾಲ್ಯಾಕ್ಸಿ A21s ಬ್ಯಾಟರಿ
ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನಿನಲ್ಲಿ 5,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಒದಗಿಸಲಾಗಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜರ್ ಸೌಲಭ್ಯ ಸಹ ಪಡೆದುಕೊಂಡಿದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳು ಸಹ ಇವೆ.

ಬೆಲೆ ಎಷ್ಟು
ಗ್ಯಾಲ್ಯಾಕ್ಸಿ A21s ಸ್ಮಾರ್ಟ್‌ಫೋನ್ ಲಂಡನ್‌ನಲ್ಲಿ ಬಿಡುಗಡೆ ಆಗಿದೆ. ಈ ಫೋನ್ ಬೆಲೆಯು €200 ಆಗಿದ್ದು, ಭಾರತದಲ್ಲಿ ಅಂದಾಜು 16,400ರೂ.ಗಳು ಎಂದು ಅಂದಾಜಿಸಲಾಗಿದೆ. ಜೂನ್ 19ರ ನಂತರ ಸೇಲ್ ಶುರುವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications








