Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನ ಈ ಫೋನ್‌ಗೆ 25% ರಿಯಾಯಿತಿ ಅಂದ್ರೆ ನೀವು ನಂಬಲೇಬೇಕು! 8GB RAM..

ಸ್ಯಾಮ್‌ಸಂಗ್‌ ಫೋನ್‌ಗಳು (Samsung phone) ಇತರೆ ಎಲ್ಲಾ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿರುತ್ತವೆ. ಈ ನಡುವೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಸಹ ಅನಾವರಣ ಆಗುತ್ತಿದ್ದು, ಈ ಮೂಲಕ ಸ್ಯಾಮ್‌ಸಂಗ್‌ ಪ್ರಿಯರಿಗೆ ಸಂತಸ ನೀಡಲಾಗುತ್ತಿದೆ. ಈ ನಡುವೆ ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಬರೋಬ್ಬರಿ 25% ರಿಯಾಯಿತಿ ನೀಡಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ A23 5G ಸ್ಮಾರ್ಟ್‌ಫೋನ್‌ಗೆ (Samsung Galaxy A23 5G smartphone) ಇದೀಗ ಭಾರೀ ಆಫರ್ ನೀಡಲಾಗಿದೆ. ಕೈಗೆಟುವ ದರದಲ್ಲಿ ಅತ್ಯುತ್ತಮ ಫೋನ್‌ ಖರೀದಿ ಮಾಡಬೇಕು ಅಂದುಕೊಂಡವರಿಗೆ ಇದು ಬೆಸ್ಟ್‌ ಆಯ್ಕೆ ಆಗಿರಲಿದೆ. ಈ ಫೋನ್ 8GB RAM ಆಯ್ಕೆ ಹಾಗೂ ಕ್ವಾಡ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆಯುವ ಮೂಲಕ ಅತ್ಯುತ್ತಮ ಎನಿಸಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರ ಎಷ್ಟು ಎಂದು ನೋಡೋಣ ಬನ್ನಿ.

ಸ್ಯಾಮ್‌ಸಂಗ್‌ನ ಈ ಫೋನ್‌ಗೆ 25% ರಿಯಾಯಿತಿ ಅಂದ್ರೆ ನೀವು ನಂಬಲೇಬೇಕು! 8GB RAM..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A23 5G ಆಫರ್ ವಿವರ: ಈ ಫೋನ್ ಸಾಮಾನ್ಯ ದರ 25,490ರೂ.ಗಳಾಗಿದೆ. ಆದರೆ ನೀವು ಇದನ್ನು ಕೇವಲ 18,888ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಮೊದಲೇ ತಿಳಿಸಿದಂತೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ ಬರೋಬ್ಬರಿ 25% ಆಫರ್ ನೀಡಿದೆ. ಇಷ್ಟೇ ಅಲ್ಲದೆ ವಿವಿಧ ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಈ ಫೋನ್‌ಖರೀದಿಯಲ್ಲಿ ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್ (Flipkart Axis Bank Card) ಮೇಲೆ 5% ಕ್ಯಾಶ್‌ಬ್ಯಾಕ್, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಲೇಟರ್‌ ಪೇ ಮೂಲಕ ಪಾವತಿಸಿದ್ರೆ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ 1,170ರೂ.ಗಳ ಇಎಮ್ಐ ಆಯ್ಕೆ ಸಹ ಇದ್ದು, ಇದರಿಂದ ಕಡಿಮೆ ಮೊತ್ತ ಪಾವತಿ ಮಾಡಿಯೂ ಈ ಫೋನ್‌ ಅನ್ನು ನೀವು ಖರೀದಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A23 5G ಡಿಸ್‌ಪ್ಲೇ ವಿವರ: ಇನ್ನು ಈ ಫೋನ್‌ನ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸುವುದಾದ್ರೆ ಇದು 6.6 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಇದು 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕೆ ವಾಟರ್ ಡ್ರಾಪ್‌ ವಿನ್ಯಾಸವನ್ನು ಈ ಡಿಸ್‌ಪ್ಲೇ ಹೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A23 5G ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್‌ (Qualcomm Snapdragon 695 processor) ಮೂಲಕ ಕಾರ್ಯನಿರ್ವಹಿಸಲಿದ್ದು, 8GB RAM ನಿಂದ ಚಾಲಿತವಾಗಿದೆ. ಈ ಮೂಲಕ ಗೇಮಿಂಗ್‌ ಹಾಗೂ ವಿಡಿಯೋ ವೀಕ್ಷಣೆಯಲ್ಲಿ ಅತ್ಯುತ್ತಮ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ಗೆ 25% ರಿಯಾಯಿತಿ ಅಂದ್ರೆ ನೀವು ನಂಬಲೇಬೇಕು! 8GB RAM..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A23 5G ಕ್ಯಾಮೆರಾ ಅಚನೆ: ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಕ್ವಾಡ್‌ ರಿಯರ್‌ ಕ್ಯಾಮೆರಾ(Quad rear camera) ಆಯ್ಕೆ ಪಡೆದಿದೆ. ಅದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾದೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಫೋನ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದ ಮೂಲಕ ಕಾಣಿಸಿಕೊಂಡಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ಗೆ 25% ರಿಯಾಯಿತಿ ಅಂದ್ರೆ ನೀವು ನಂಬಲೇಬೇಕು! 8GB RAM..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A23 5G ಬ್ಯಾಟರಿ ಹಾಗೂ ಇತರೆ: ಉಳಿದಂತೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 802.11 a/b/g/n/ac, ಯುಎಸ್‌ಬಿ ಟೈಪ್‌-ಸಿ, ಬ್ಲೂಟೂತ್‌ 5.10, 4G ಮತ್ತು 5G ನೆಟ್‌ವರ್ಕ್‌, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಗೈರೊಸ್ಕೋಪ್ ಸೇರಿದಂತೆ ವಿವಿಧ ಆಕರ್ಷಕ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಲಿದೆ.

Best Mobiles in India

English summary
Samsung Galaxy A23 5G smartphone has been given a huge offer. This will be the best choice for those who want to buy the best phone at an affordable price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+