Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್‌ ಲಾಂಚ್! 128GB ಸ್ಟೋರೇಜ್‌ ಆಯ್ಕೆ, ಬೆಲೆ ಎಷ್ಟು?

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳು (Samsung Galaxy Phone) ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ವಿಶೇಷವಾದ ಸ್ಥಾನ ಮಾನ ಪಡೆದುಕೊಂಡಿವೆ. ಯಾಕೆಂದರೆ ಇವುಗಳ ದೀರ್ಘ ಬಾಳಿಕೆ ಹಾಗೂ ಉತ್ತಮ ಕಾರ್ಯಕ್ಷಮತೆ. ಅದರಂತೆ ಈಗ ಸ್ಯಾಮ್‌ಸಂಗ್‌ ಹೊಸ ಫೋನ್‌ ಅನ್ನು ಅನಾವರಣ ಮಾಡಿದ್ದು, ಈ ಫೋನ್ 128GB ಸ್ಟೋರೇಜ್‌ ಆಯ್ಕೆ ಪಡೆದಿದೆ.

ಹೌದು, ಸ್ಯಾಮ್‌ಸಂಗ್ ಇದೀಗ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G (Samsung Galaxy A25 5G) ಅನ್ನು ಲಾಂಚ್‌ ಮಾಡಿದೆ. ಈ ವೇಳೆ ಗ್ಯಾಲಕ್ಸಿ A15 ಸ್ಮಾರ್ಟ್‌ಫೋನ್‌ (Galaxy A15 smartphone) ಅನ್ನೂ ಸಹ ಅನಾವರಣ ಮಾಡಿದೆ. ಇನ್ನು ಈ ಹೊಸ ಫೋನ್ ವರ್ಧಿತ ಕ್ಯಾಮೆರಾ ಫೀಚರ್ಸ್‌ ಮತ್ತು ಎಕ್ಸಿನೋಸ್‌ 1280 ಚಿಪ್‌ಸೆಟ್ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್‌ ಲಾಂಚ್! 128GB ಸ್ಟೋರೇಜ್‌ ...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಡಿಸ್‌ಪ್ಲೇ ವಿವರ: ಈ ಫೋನ್ 6.5 ಇಂಚಿನ FHD+ ಇನ್ಫಿನಿಟಿ U ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಇದು 120Hz ರಿಫ್ರೆಶ್‌ ರೇಟ್‌ ಹಾಗೂ 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಮೂಲಕ ಕಾಣಿಸಿಕೊಂಡಿದೆ. ಪರಿಣಾಮ ವಿಡಿಯೋ ವೀಕ್ಷಣೆಯಲ್ಲಿ ಅಥವಾ ಗೇಮಿಂಗ್‌ ಸಮಯದಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಪ್ರೊಸೆಸರ್‌ ಮಾಹಿತಿ: ಈ ಫೋನ್ ಎಕ್ಸಿನೋಸ್ 1280 ಪ್ರೊಸೆಸರ್‌ ಬಲ ಪಡೆದಿದ್ದು, ಇದು 6/8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಹೆಚ್ಚುವರಿ ಸ್ಟೋರೇಜ್‌ಗೆ ಎಸ್‌ಡಿ ಕಾರ್ಡ್‌ ಆಯ್ಕೆ ಸಹ ನೀಡಲಾಗಿದೆ. ಜೊತೆಗೆ ಗೇಮಿಂಗ್‌ನಲ್ಲಿ ಅತ್ಯುತ್ತಮ ಅನುಭವ ನೀಡಲು ಮಾಲಿ G68 MP4 GPU ಆಯ್ಕೆ ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್‌ ಲಾಂಚ್! 128GB ಸ್ಟೋರೇಜ್‌ ...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಕ್ಯಾಮೆರಾ ರಚನೆ : ಈ ಫೋನ್ OIS, F1.8, AF ಜೊತೆಗೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾದೊಂದಿಗೆ ಕ್ಯಾಮೆರಾ ಪ್ರಿಯರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 25W ಫಾಸ್ಟ್‌ ಚಾರ್ಜಿಂಗ್‌ ಬೆಂಬಲದೊಂದಿಗೆ ಟೈಪ್-ಸಿ ಚಾರ್ಜರ್‌ ಪಡೆದಿದೆ. ಆದರೆ, ಚಾರ್ಜರ್‌ಗಳೊಂದಿಗೆ ಫೋನ್ ಲಭ್ಯವಾಗದ ಕಾರಣ ಗ್ರಾಹಕರು ಅಡಾಪ್ಟರ್ ಅನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಉಳಿದಂತೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌, ಡ್ಯುಯಲ್ ಸ್ಪೀಕರ್‌ ಸೇರಿದಂತೆ ಅನೇಕ ಅಗತ್ಯ ಫೀಚರ್ಸ್‌ ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A25 5G ಸ್ಮಾರ್ಟ್‌ಫೋನ್‌ ಲಾಂಚ್! 128GB ಸ್ಟೋರೇಜ್‌ ...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A25 5G ಬೆಲೆ ಹಾಗೂ ಲಭ್ಯತೆ: ಈ ಫೋನ್‌ ಅನ್ನು ಸದ್ಯಕ್ಕೆ ವಿಯೆಟ್ನಾಂನಲ್ಲಿ ಮಾತ್ರ ಲಾಂಚ್‌ ಮಾಡಲಾಗಿದೆ. ಡಿಸೆಂಬರ್ 16, 2023 ರಿಂದ ವಿಯೆಟ್ನಾಂನಲ್ಲಿ ಈ ಫೋನ್‌ ಸೇಲ್‌ ಆಗಲಿದ್ದು, ಪರ್ಸನಾಲಿಟಿ ಯೆಲ್ಲೋ, ಫ್ಯಾಂಟಸಿ ಬ್ಲೂ, ಆಪ್ಟಿಮಿಸ್ಟಿಕ್ ಬ್ಲೂ ಮತ್ತು ಬ್ಯಾನ್ ಲಿನ್ಹ್ ಬ್ಲಾಕ್ ಸೇರಿದಂತೆ ವಿವಿಧ ಬಣ್ಣದ ಆಯ್ಕೆಯಲ್ಲಿ ಈ ಫೋನ್ ಲಭ್ಯ ಇದೆ. ಇದರ ಬೆಲೆ 6,590,000 VND (ಭಾರತದಲ್ಲಿ ಅಂದಾಜು 22,650 ರೂ.ಗಳು.) ಗಳಾಗಿದೆ.

ಈ ಫೋನ್‌ನ ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A15 ಸ್ಮಾರ್ಟ್‌ಫೋನ್‌ ಅನ್ನೂ ಸಹ ಲಾಂಚ್‌ ಮಾಡಲಾಗಿದ್ದು, ಈ ಫೋನ್‌ನ 4G ಆವೃತ್ತಿ ಮೀಡಿಯಾಟೆಕ್‌ ಹಿಲಿಯೊ G99SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 5G ಆವೃತ್ತಿಯು ಡೈಮೆನ್ಸಿಟಿ 6100 ಪ್ಲಸ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ. ಈ ಫೋನ್‌ ಸಹ 25W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Samsung has just launched the Samsung Galaxy A25 5G. At this time, Galaxy A15 smartphone has also been unveiled. This new phone is powered by enhanced camera features and have Exynos 1280 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+