ಸ್ಯಾಮ್‌ಸಂಗ್ ಗ್ಯಾಲಕ್ಸಿ A3 ಕೋರ್ ಸ್ಮಾರ್ಟ್‌ಫೋನ್ ಲಾಂಚ್!
ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯು ಈಗಾಗಲೇ ಗ್ಯಾಲಕ್ಸಿ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ A3 ಕೋರ್ ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಮಾಡೆಲ್ ಆಗೊಇದ್ದು, ಆಂಡ್ರಾಯ್ಡ್ ಗೋ ಓಎಸ್ ಅನ್ನು ಒಳಗೊಂಡಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ ಗ್ಯಾಲಕ್ಸಿ A3 ಕೋರ್ ಸ್ಮಾರ್ಟ್‌ಫೋನ್ ಅನ್ನು ಆಫ್ರಿಕಾದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ಕೋರ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾವನ್ನು ಪಡೆದಿದೆ. ಇನ್ನುಳಿದಂತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A3 ಕೋರ್ ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ವಿನ್ಯಾಸ
ಗ್ಯಾಲಕ್ಸಿ A3 ಕೋರ್ ಸ್ಮಾರ್ಟ್‌ಫೋನ್ 720x1,480 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 5.3 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಫೋನಿನ ಡಿಸ್‌ಪ್ಲೇ ಅನುಪಾತವು 16:9 ಆಗಿದ್ದು, ದಪ್ಪ ಬೆಜಲ್ ರಚನೆ ಇದೆ.

ಪ್ರೊಸೆಸರ್ ದಕ್ಷತೆ
ಗ್ಯಾಲಕ್ಸಿ A3 ಕೋರ್ ಸ್ಮಾರ್ಟ್‌ಫೋನ್ ಕ್ವಾಡ್ ಕೋರ್ SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಗೋ ಎಡಿಷನ್ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್ 1GB RAM ಮತ್ತು 16GB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ.

ಕ್ಯಾಮೆರಾ ಸೆನ್ಸಾರ್
ಗ್ಯಾಲಕ್ಸಿ A3 ಕೋರ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, 8ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 5ಎಂಪಿ ಇದರೊಂದಿಗೆ 4x, ಹೆಚ್‌ಡಿ ವಿಡಿಯೊ ಸಪೋರ್ಟ್ ಹಾಗೂ LED ಫ್ಲ್ಯಾಶ್ ಸಹ ಒದಗಿಸಲಾಗಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಗ್ಯಾಲಕ್ಸಿ A3 ಕೋರ್ ಸ್ಮಾರ್ಟ್‌ಫೋನ್ 3,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಈ ಫೋನ್ ವೈ-ಫೈ (2.4GHz), 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಜಿಪಿಎಸ್, ಎಲ್‌ಟಿಇ ಮತ್ತು ಬ್ಲೂಟೂತ್ 5.0 ಫೀಚರ್ಸ್‌ಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ
ಗ್ಯಾಲಕ್ಸಿ A3 ಕೋರ್ ಸ್ಮಾರ್ಟ್‌ಫೋನ್ ಬೆಲೆ NGN 32,500 ಆಗಿದೆ. (ಭಾರತದಲ್ಲಿ ಅಂದಾಜು 6,200ರೂ ಎಂದು ಊಹಿಸಲಾಗಿದೆ.) ಇನ್ನು ಈ ಫೋನ್ ಬ್ಲೂ, ಬ್ಲ್ಯಾಕ್ ಹಾಗೂ ರೆಡ್ ಬಣ್ಣಗಳ ಆಯ್ಕೆ ಹೊಂದಿದೆ.


Click it and Unblock the Notifications








