Home
ಸುದ್ದಿಜಾಲ

Samsung: ಭಾರೀ ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್‌! 8GB RAM...48MP ಕ್ಯಾಮೆರಾ

ಸ್ಯಾಮ್‌ಸಂಗ್‌ (Samsung) ಫೋನ್‌ಗಳಿಗೆ ಬೇಡಿಕೆ ಹೆಚ್ಚಿರುವಂತೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ಎಲ್ಲಾ ರೀತಿಯ ಸ್ಯಾಮ್‌ಸಂಗ್‌ ಫೋನ್‌ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗುತ್ತಿದೆ. ಅದರಂತೆ ಈಗ 8GB RAM ಆಯ್ಕೆಯ ಈ ಫೋನ್‌ಗೆ 26% ರಿಯಾಯಿತಿ ನೀಡಲಾಗಿದೆ.

ಹೌದು, ದೀಪಾವಳಿ ಹಿನ್ನೆಲೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ವಿಶೇಷ ಸೇಲ್‌ ಆಯೋಜನೆ ಮಾಡಲಾಗಿದೆ. ಅದರಂತೆ ಸ್ಮಾರ್ಟ್‌ಫೋನ್‌ಗಳಿಗೆ ಈ ಸೇಲ್‌ನಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಲಾಗಿದ್ದು, ಈ ವಿಭಾಗದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A33 5G (Samsung Galaxy A33 5G) ಅನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 48MP ವೈಡ್-ಆಂಗಲ್ ಮುಖ್ಯ ಕ್ಯಾಮೆರಾ ಹಾಗೂ ಎಕ್ಸಿನೋಸ್‌ 1280 CPU ಬಲ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ ಬನ್ನಿ.

ಭಾರೀ ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A33 5G ಆಫರ್‌ ವಿವರ: ಈ ಸ್ಮಾರ್ಟ್‌ಫೋನ್‌ ಅನ್ನು ನೀವು ಇದೀಗ ಹಬ್ಬದ ಆಫರ್ ಭಾಗವಾಗಿ 24,990ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ನ ಸಾಮಾನ್ಯ ದರ 33,990ರೂ.ಗಳಾಗಿದೆ. ಆದರೆ, ಫ್ಲಿಪ್‌ಕಾರ್ಟ್‌(Flipkart) ಈ ಫೋನ್‌ಗೆ 26% ರಷ್ಟು ರಿಯಾಯಿತಿ ನೀಡುವ ಮೂಲಕ ಭಾರೀ ಹಣ ಉಳಿತಾಯ ಆಗುವಂತೆ ಮಾಡಿದೆ. ಅಷ್ಟೇ ಅಲ್ಲದೆ ವಿನಿಮಯ ಆಫರ್ ಹಾಗೂ ಬ್ಯಾಂಕ್‌ ಆಫರ್ ಸಹ ಇದ್ದು ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ ಖರೀದಿ ಮಾಡಬಹುದು.

ನೀವು ತಿಂಗಳಿಗೆ 1548 ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಫೋನ್‌ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಪ್ರಮುಖ ಬ್ಯಾಂಕ್‌ ಕಾರ್ಡ್‌ಗಳನ್ನು ಬಳಕೆ ಮಾಡಿ ಖರೀದಿ ಮಾಡಿದ್ರೆ 10% ತ್ವರಿತ ರಿಯಾಯಿತಿ ಸಹ ಸಿಗಲಿದೆ. ಜೊತೆಗೆ ಕ್ಯಶ್‌ ಬ್ಯಾಕ್‌ ಆಯ್ಕೆ ಸಹ ಲಭ್ಯ ಇದೆ. ಹಾಗಿದ್ರೆ, ಈ ಫೋನ್‌ ಅನ್ನು ಈ ಬೆಲೆಗೆ ಖರೀದಿ ಮಾಡಲು ಯೋಗ್ಯವೇ ಎಂಬುದನ್ನು ಕಂಡುಕೊಳ್ಳುವುದು ಅಗತ್ಯವಾಗಿದ್ದು, ಬನ್ನಿ ಅದರ ಬಗ್ಗೆ ಮಾಹಿತಿ ತಿಳಿಯೋಣ.

ಭಾರೀ ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A33 5G ಡಿಸ್‌ಪ್ಲೇ ವಿವರ : ಈ ಫೋನ್ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಮತ್ತು 411ppi ಪಿಕ್ಸೆಲ್ ಸಾಂದ್ರತೆಯೊಂದಿಗೆ 6.4 ಇಂಚಿನ ಸೂಪರ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು. ಸ್ಮಾರ್ಟ್‌ಫೋನ್‌ನ ಬೆಜೆಲ್-ಫ್ರೀ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್ ಸ್ಕ್ರೀನ್-ಟು-ಬಾಡಿ ಅನುಪಾತ 83.68% ಮತ್ತು 20:9 ರ ಆಕಾರ ಅನುಪಾತವನ್ನು ಹೊಂದಿದೆ. ಈ ಮೂಲಕ ಬಳಕೆದಾರರು ಅತ್ಯುತ್ತಮ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A33 5G ಪ್ರೊಸೆಸರ್‌ ಮಾಹಿತಿ: ಇನ್ನು ಎಕ್ಸಿನೋಸ್‌ 1280 ಪ್ರೊಸೆಸರ್ (Exynos 1280 processor) ಬಲ ಪಡೆದುಕೊಂಡಿದೆ. ಈ ಸಿಪಿಯು ಕಾರ್ಟೆಕ್ಸ್ A76 ಮತ್ತು ಕಾರ್ಟೆಕ್ಸ್ A55 ಆರ್ಕಿಟೆಕ್ಚರ್‌ನೊಂದಿಗೆ ಪ್ರಬಲವಾದ ಆಕ್ಟಾ-ಕೋರ್ ಸಿಪಿಯು ಆಗಿದೆ. ಉಳಿದಂತೆ ಈ ಫೋನ್ 8GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆ ನೀಡಲಿದೆ.

ಭಾರೀ ಸದ್ದು ಮಾಡುತ್ತಿರುವ ಸ್ಯಾಮ್‌ಸಂಗ್‌ನ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್‌!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A33 5G ಕ್ಯಾಮೆರಾ ರಚನೆ: ಈ ಫೋನ್‌ ಕ್ಯಾಮೆರಾ ವಿಚಾರಕ್ಕೆ ಬಂದರೆ ಕ್ವಾಡ್ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿರುವ ಈ ಫೋನ್ f/1.8 ನ 48 ಮೆಗಾಪಿಕ್ಸೆಲ್‌ ವೈಡ್-ಆಂಗಲ್ ಮುಖ್ಯ ಕ್ಯಾಮೆರಾ, f/2.2 ನ 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ, f/2.4 ನ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಮತ್ತು f/2.4 ನ 2 ಮೆಗಾಪಿಕ್ಸೆಲ್‌ಡೆಪ್ತ್ ಕ್ಯಾಮೆರಾದೊಂದಿಗೆ ಬರುತ್ತದೆ. ಸೆಲ್ಫಿಗಾಗಿ 13 ಮೆಗಾಪಿಕ್ಸೆಲ್‌ ಸೆನ್ಸರ್ ಆಯ್ಕೆ ನೀಡಲಾಗಿದೆ. ಜತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಈ ಫೋನ್‌ನಲ್ಲಿದೆ.

Best Mobiles in India

English summary
Samsung Galaxy A33 5G can be bought at a low price. The smartphone is powered by a 48MP wide-angle main camera and Exynos 1280 CPU.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+