ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್‌ಗೆ ಭರ್ಜರಿ ಡಿಸ್ಕೌಂಟ್!..ಈ ಅವಕಾಶ ಬಿಡ್ತೀರಾ?
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪನಿಯು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್ ಸರಣಿಯನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ಆಕರ್ಷಿಸಿದೆ. ಆ ಪೈಕಿ ಗ್ಯಾಲಕ್ಸಿ A ಸರಣಿಯಲ್ಲಿ ಪರಿಚಯಿಸಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್ ಫೀಚರ್ಸ್‌ಗಳಿಂದ ಫೋನ್ ಪ್ರಿಯರನ್ನು ಸೆಳೆದಿದೆ. ಇದೀಗ ಈ ಸ್ಮಾರ್ಟ್‌ಫೋನ್ ಇದೀಗ ಬೆಲೆ ಇಳಿಕೆ ಕಂಡು ಗ್ರಾಹಕರನ್ನು ಆಕರ್ಷಿಸಿದೆ.
ಹೌದು, ಸ್ಯಾಮ್‌ಸಂಗ್ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್ ಅಮೆಜಾನ್ ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಈಗ 13% ನಷ್ಟು ಡಿಸ್ಕೌಂಟ್ ದರದಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ 128GB ಸ್ಟೋರೇಜ್‌ನ ವೇರಿಯಂಟ್ 35,499ರೂ. ಗಳ ಪ್ರೈಸ್ ಟ್ಯಾಗ್ ಹೊಂದಿದ್ದು, 30,999ರೂ. ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಕೊಡುಗೆ ಹಾಗೂ ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್ ಲೈಮ್, ಗ್ರಾಫೈಟ್ ಹಾಗೂ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಈ ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಡಿಸ್‌ಪ್ಲೇ ರಚನೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್ 1080 × 2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಪ್ಲಸ್ ಸೂಪರ್ ಅಮೊಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿದ್ದು, 1000 nits ಬ್ರೈಟ್ನೆಸ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿದೆ.
ಪ್ರೊಸೆಸರ್ ಪವರ್ : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಜೊತೆಗೆ ಮಾಲಿ-G68 MC4 GPU ಸಪೋರ್ಟ್ ಪಡೆದಿದೆ. ಹಾಗೆಯೇ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದ್ದು, 8 GB + 128 GB ಮತ್ತು 8 GB + 256 GB ಸ್ಟೋರೇಜ್ ಆಯ್ಕೆ ಪಡೆದಿದೆ.

ಕ್ಯಾಮೆರಾ ರಚನೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಹಾಗೂ ತೃತೀಯ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ.
ಬ್ಯಾಟರಿ ಬಲ : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಆಯ್ಕೆಗಳನ್ನು ಇದು ಪಡೆದಿದೆ. ಜೊತೆಗೆ ಧೂಳು ಮತ್ತು ನೀರು ನಿರೋಧಕ (IP67) ಸೌಲಭ್ಯ ಹೊಂದಿದೆ. ಬ್ಲೂಟೂತ್ 5.2, ಎನ್‌ಎಫ್‌ಸಿ ಆಯ್ಕೆಗಳು ಸಹ ಇವೆ.
ಕಲರ್ ಆಯ್ಕೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಫೋನ್ 8GB + 128GB ಮತ್ತು 8GB + 256GB ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯ. ಇನ್ನು ಈ ಫೋನ್ ಲೈಮ್, ಗ್ರಾಫೈಟ್ ಹಾಗೂ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ.


Click it and Unblock the Notifications








