Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಮೊಬೈಲ್‌ ಬೆಲೆಯಲ್ಲಿ ಶಾಶ್ವತ ಇಳಿಕೆ!

ಸ್ಯಾಮ್‌ಸಂಗ್‌ ಸಂಸ್ಥೆಯ ಜನಪ್ರಿಯ ಫೋನ್‌ಗಳಲ್ಲಿ ಒಂದಾದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಬೊಂಬಾಟ್‌ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಇನ್ನು ಈ ಫೋನ್‌ ಖರೀದಿಸುವ ಗ್ರಾಹಕರಿಗೆ ಸ್ಯಾಮ್‌ಸಂಗ್‌ ಸಂಸ್ಥೆಯು ಈಗ ಭರ್ಜರಿ ಸಿಹಿಸುದ್ದಿ ನೀಡಿದೆ. ಸಂಸ್ಥೆಯುಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಫೋನ್‌ ಬೆಲೆಯಲ್ಲಿ ಇದೀಗ ಸಖತ್‌ ಬೆಲೆ ಇಳಿಕೆ ಘೋಷಿಸಿದೆ.

ಹೌದು, ಸ್ಯಾಮ್‌ಸಂಗ್‌ ಸಂಸ್ಥೆ ತನ್ನ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ ತಿಳಿಸಿದೆ. ಈ ಫೋನಿನ 8GB+128GB ಮಾಡೆಲ್‌ 30,999ರೂ. ಪ್ರೈಸ್‌ ಟ್ಯಾಗ್‌ನಲ್ಲಿ ಲಾಂಚ್ ಆಗಿತ್ತು. ಆದ್ರೆ ಈಗ 6,550ರೂ. ಗಳ ವರೆಗಿನ ಬೆಲೆ ಇಳಿಕೆಯಿಂದಾಗಿ 24,499ರೂ. ಗಳಿಗೆ ಖರೀದಿಗೆ ಲಭ್ಯ. ಅಧಿಕೃತ ಸ್ಯಾಮ್‌ಸಂಗ್‌ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯ ಇದೆ.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಮೊಬೈಲ್‌ ಬೆಲೆಯಲ್ಲಿ ಶಾಶ್ವತ ಇಳಿಕೆ!

ಹಾಗೆಯೇ ಈ ಫೋನ್‌ 8 GB + 128 GB ಮತ್ತು 8 GB + 256 GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದ್ದು, ಜೊತೆಗೆ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಕೂಡಾ ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G - ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಫೋನ್‌ 1080 × 2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಪಡೆದಿದ್ದು, 1000 nits ಬ್ರೈಟ್ನೆಸ್‌ ಸಾಮರ್ಥ್ಯ ಸಹ ಪಡೆದಿದೆ. ಇದರ ಜೊತೆಗೆ ಗೊರಿಲ್ಲಾ ಗ್ಲಾಸ್‌ 5 ರಕ್ಷಣೆ ಪಡೆದಿದೆ.

ಸ್ಯಾಮ್‌ಸಂಗ್‌ನ ಈ ಜನಪ್ರಿಯ ಮೊಬೈಲ್‌ ಬೆಲೆಯಲ್ಲಿ ಶಾಶ್ವತ ಇಳಿಕೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ಸೌಲಭ್ಯವನ್ನು ಕೂಡಾ ಪಡೆದಿದ್ದು, ಇದರ ಜೊತೆಗೆ ಮಾಲಿ-G68 MC4 GPU ಸಪೋರ್ಟ್ ಅನ್ನು ಪಡೆದಿದೆ. ಹಾಗೆಯೇ ಇದು ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಒಳಗೊಂಡಿರುವ ಜೊತೆಗೆ 8 GB + 128 GB ಮತ್ತು 8 GB + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಮೊದಲ ಕ್ಯಾಮೆರಾವು 48 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಎರಡನೇ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಹಾಗೂ ಮೂರನೇ ಕ್ಯಾಮೆರಾವು 5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿವೆ. ಇನ್ನು ಮುಮಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಆಯ್ಕೆಗಳನ್ನು ಇದು ಪಡೆದಿದೆ.

ಹಾಗೆಯೇ ಈ ಫೋನ್‌ ಧೂಳು ಮತ್ತು ನೀರು ನಿರೋಧಕ (IP67) ಸೌಲಭ್ಯ ಪಡೆದಿದ್ದು, ಬ್ಲೂಟೂತ್ 5.2, ಎನ್‌ಎಫ್‌ಸಿ ಆಯ್ಕೆಗಳ ಸೌಲಭ್ಯ ಸಹ ಇವೆ. ಅಲ್ಲದೇ ಈ ಮೊಬೈಲ್‌ 8 GB + 128 GB ಮತ್ತು 8 GB + 256 GB ಸ್ಟೋರೇಜ್‌ ಆಯ್ಕೆ ಹೊಂದಿದೆ. ಇನ್ನು ಈ ಫೋನ್ ಲೈಮ್‌, ಗ್ರಾಫೈಟ್‌ ಹಾಗೂ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.

Best Mobiles in India

English summary
Samsung Galaxy A34 Phone price has been reduced by up to Rs 6,550 in India. check offer price and specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+