Home
ಸುದ್ದಿಜಾಲ

ಇದೇ ಮಾರ್ಚ್‌ 11 ರಂದು ಮತ್ತೆ ಎರಡು ಹೊಸ ಸ್ಯಾಮ್‌ಸಂಗ್‌ ಫೋನ್‌ ಲಾಂಚ್‌!

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸಂಸ್ಥೆ ಸ್ಯಾಮ್‌ಸಂಗ್ ತನ್ನ ಫೋನ್‌ಗಳ ಲಿಸ್ಟ್‌ಗೆ ಮತ್ತೆ ಎರಡು ಹೊಸ ಫೋನ್‌ ಸೇರ್ಪಡೆ ಮಾಡಲು ತಯಾರಿ ನಡೆಸಿದ್ದು, ಆ ಪೋನ್‌ಗಳೆಂದರೆ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55 5G ಆಗಿವೆ. ಇದೀಗ ಈ ಎರಡು ಫೋನ್‌ಗಳ ಲಾಂಚ್‌ ಡೇಟ್‌ ಬಹಿರಂಗವಾಗಿದೆ.

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯು ಇದೇ ಮಾರ್ಚ್‌ 11 ರಂದು ಮಧ್ಯಾಹ್ನ 2:30 ಗಂಟೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಈ ಬಗ್ಗೆ ಭಾರತೀಯ ಸ್ಯಾಮ್‌ಸಂಗ್‌ ವೆಬ್‌ಸೈಟ್‌ನಲ್ಲಿ ಲಾಂಚ್ ಕುರಿತಾಗಿ ಮೈಕ್ರೋ ಸೈಟ್‌ ಕೂಡಾ ತೆರೆಯಲಾಗಿದೆ.

ಇದೇ ಮಾರ್ಚ್‌ 11 ರಂದು ಮತ್ತೆ ಎರಡು ಹೊಸ ಸ್ಯಾಮ್‌ಸಂಗ್‌ ಫೋನ್‌ ಲಾಂಚ್‌!

ಸ್ಯಾಮ್‌ಸಂಗ್‌ನಿಂದ ಮುಂಬರುವ ಈ ಎರಡು ಸ್ಮಾರ್ಟ್‌ಫೋನ್‌ಗಳು ಐಲ್ಯಾಂಡ್ ವಿನ್ಯಾಸವನ್ನು ಹೊಂದಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ. ಹಾಗೆಯೇ Knox security ಸೌಲಭ್ಯ ಇದರ ಜೊತೆಗೆ ಮಂದ ಬೆಳೆಕಿನಲ್ಲಿಯೂ ಉತ್ತಮ ಕ್ಯಾಮೆರಾ ಸೆರೆಹಿಡಿಯಲು ಪೂರಕವಾದ ಆಯ್ಕೆಗಳು ಇರಲಿವೆ ಎಂದು ಹೇಳಲಾಗಿದೆ. ಹಾಗಾದರೇ ಈ ಎರಡು ಫೋನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಫೋನ್ 6.6 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿದ್ದು, ಇದರ ಡಿಸ್‌ಪ್ಲೇ FHD+ ಮಾದರಿಯಲ್ಲಿ ಇದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್, ಸೆಂಟರ್ಡ್ ಪಂಚ್ ಹೋಲ್ ಕಟೌಟ್ ಸೌಲಭ್ಯ ಸಹ ಪಡೆದಿದೆ. ಇನ್ನು ಗ್ಯಾಲಕ್ಸಿ A55 5G ಫೋನ್‌ 6.5 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಪಡೆದಿದ್ದು, ಇದು FHD+ ಆಗಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಹೊಂದಿದ್ದು, 1000 nits ಬ್ರೈಟ್ನೆಸ್‌ ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮೊಬೈಲ್‌ Exynos 1380 SoC ಪ್ರೊಸೆಸರ್‌ ಪವರ್‌ ಪಡೆದಿದ್ದು, ಜೊತೆಗೆ ಆರ್ಮ್ ಮಾಲಿ G68 GPU ಆಯ್ಕೆ ಒಳಗೊಂಡಿದೆ. ಇನ್ನು ಗ್ಯಾಲಕ್ಸಿ A55 5G ಫೋನ್‌ Exynos 1480 SoC ಪ್ರೊಸೆಸರ್‌ ಬಲವನ್ನು ಒಳಗೊಂಡಿದ್ದು, ಇದರೊಂದಿಗೆ AMD Xclipse 530 GPU ಸೌಲಭ್ಯ ಕೂಡಾ ಲಭ್ಯ.

ಹಾಗೆಯೇ ಈ ಎರಡು ಫೋನ್‌ಗಳು ಇತ್ತೀಚಿನ ಆಂಡ್ರಾಯ್ಡ್‌14 ಓಎಸ್‌ ಸಪೋರ್ಟ್‌ ಪಡೆದಿದ್ದು, ಒನ್‌ UI 6.1 ಸೌಲಭ್ಯ ಕೂಡಾ ಒಳಗೊಂಡಿವೆ. ಇನ್ನು ಗ್ಯಾಲಕ್ಸಿ A35 5G ಫೋನ್
6GB RAM + 128GB ಹಾಗೂ 8GB + 256GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಗ್ಯಾಲಕ್ಸಿ A55 5G ಫೋನ್‌ 8GB RAM + 256GB ಹಾಗೂ 12GB + 256GB ಸ್ಟೋರೇಜ್‌ ವೇರಿಯಂಟ್‌ ಸೌಲಭ್ಯ ಪಡೆದುಕೊಂಡಿದೆ.

ಅದೇ ರೀತಿ ಈ ಫೋನ್‌ಗಳು ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸೌಲಭ್ಯದಲ್ಲಿ ಇವೆ. ಮುಂಭಾಗದಲ್ಲಿ ಗ್ಯಾಲಕ್ಸಿ A35 5G ಫೋನ್‌ 13 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಪಡೆದಿದ್ದರೇ, ಗ್ಯಾಲಕ್ಸಿ A55 5G ಫೋನ್‌ 32 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.

ಇನ್ನು ಗ್ಯಾಲಕ್ಸಿ A35 5G ಹಾಗೂ A55 5G ಈ ಎರಡು ಫೋನ್‌ಗಳು 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿವೆ. ಇದರೊಂದಿಗೆ IP67 ರೇಟಿಂಗ್ ಪಡೆದಿದ್ದು, ನೀರು ಮತ್ತು ಧೂಳಿನ ಪ್ರತಿರೋಧ ಸೌಲಭ್ಯ ಹೊಂದಿವೆ.

Best Mobiles in India

English summary
Samsung Galaxy A35 5G and Galaxy A55 5G will debut on March 11 in India. All details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+