Home
ಸುದ್ದಿಜಾಲ

ಇದೇ ಮಾರ್ಚ್‌ 16 ರಂದು ಸ್ಯಾಮ್‌ಸಂಗ್‌ನ ಈ ಎರಡು ಫೋನ್‌ ಖರೀದಿಗೆ ಲಭ್ಯ!..ಅಚ್ಚರಿಯ ಬೆಲೆ!

ಸ್ಯಾಮ್‌ಸಂಗ್‌ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55 5G ಫೋನ್‌ಗಳ ಭಾರತೀಯ ಬೆಲೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಈ ಎರಡು ಫೋನ್‌ಗಳು ಇದೇ ಮಾರ್ಚ್‌ 16 ರಂದು ಅಮೆಜಾನ್‌ ಹಾಗೂ ಸ್ಯಾಮ್‌ಸಂಗ್‌ ಸ್ಟೋರ್‌ಗಳ ಮೂಲಕ ಮಾರಾಟ ಸಹ ಪ್ರಾರಂಭಿಸಲಿವೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55 5G ಫೋನ್‌ಗಳು ಮಾರ್ಚ್‌ 16 ರಂದು ಖರೀದಿಗೆ ಲಭ್ಯ ಆಗಲಿವೆ. ಈ ಫೋನ್‌ಗಳು ಆಕರ್ಷಕ ಫೀಚರ್ಸ್‌ ಹಾಗೂ ಸ್ಟೈಲಿಶ್‌ ಲುಕ್‌ನಿಂದ ಈಗಾಗಲೇ ಗ್ರಾಹಕರನ್ನು ಸೆಳೆದಿವೆ. ಹಾಗಾದರೇ ಈ ಎರಡು ಫೋನ್‌ಗಳ ಬೆಲೆ ಎಷ್ಟು? ಈ ಫೋನ್‌ಗಳ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬ್ನನಿರಿ.

ಮಾರ್ಚ್‌ 16 ರಂದು ಸ್ಯಾಮ್‌ಸಂಗ್‌ನ ಈ ಎರಡು ಫೋನ್‌ ಖರೀದಿಗೆ ಲಭ್ಯ!..ಅಚ್ಚರಿಯ ಬೆಲೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಫೀಚರ್ಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮೊಬೈಲ್‌ 1080 × 2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಹಾಗೆಯೇ ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮೊಬೈಲ್‌ Exynos 1380 ಚಿಪ್‌ಸೆಟ್‌ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಜೊತೆಗೆ ಮಾಲಿ G68 GPUಸಪೋರ್ಟ್ ಅನ್ನು ಪಡೆದಿದೆ.

ಮಾರ್ಚ್‌ 16 ರಂದು ಸ್ಯಾಮ್‌ಸಂಗ್‌ನ ಈ ಎರಡು ಫೋನ್‌ ಖರೀದಿಗೆ ಲಭ್ಯ!..ಅಚ್ಚರಿಯ ಬೆಲೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮೊಬೈಲ್‌ ತ್ರಿವಳಿ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಹಾಗೂ ಮೂರನೇ ಕ್ಯಾಮೆರಾವು 5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ.

ಅಲ್ಲದೇ ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಇನ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸೌಲಭ್ಯ ಸಹ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55 5G ಫೀಚರ್ಸ್‌

ಈ A55 5G ಸ್ಮಾರ್ಟ್‌ಫೋನ್ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಫೋನ್ ಎಕ್ಸಿನೋಸ್ 1480 SoC ಪ್ರೊಸೆಸರ್‌ ಜೊತೆಗೆ AMD Xclipse 530 GPU ಸಪೋರ್ಟ್‌ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 14 ಓಎಸ್‌ನಲ್ಲಿ ರನ್‌ ಮಾಡಲಿದೆ.

ಹಾಗೆಯೇ ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ದ್ವಿತೀಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಹಾಗೂ ಮೂರನೇ ಕ್ಯಾಮೆರಾವು 5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ.

ಅಲ್ಲದೇ ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55 5G ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಇನ್‌ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸೌಲಭ್ಯ ಸಹ ಪಡೆದುಕೊಂಡಿದೆ.

ಬೆಲೆ ಮಾಹಿತಿ ಹೀಗಿದೆ


ಸ್ಯಾಮ್‌ಸಂಗ್‌ ಗ್ಯಾಲಕ್ಸಿ A35 5G ಫೋನಿನ ಬೆಲೆ ವಿವರ

8GB + 128GB ವೇರಿಯಂಟ್‌ ಬೆಲೆಯು 30,999ರೂ. ಆಗಿದೆ.
8GB + 256GB ವೇರಿಯಂಟ್‌ ಬೆಲೆಯು 33,999ರೂ. ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A55 5G ಫೋನಿನ ಬೆಲೆ ವಿವರ

8GB + 128GB ವೇರಿಯಂಟ್‌ ಬೆಲೆಯು 39,999ರೂ. ಆಗಿದೆ.
8GB + 256GB ವೇರಿಯಂಟ್‌ ಬೆಲೆಯು 42,999ರೂ. ಆಗಿದೆ.
12GB + 256GB ವೇರಿಯಂಟ್‌ ಬೆಲೆಯು 45,999ರೂ. ಆಗಿದೆ.

Best Mobiles in India

English summary
Samsung Galaxy A35 and Galaxy A55 will go sale on March 16 in India. check offers, Price details and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+