Home
ಸುದ್ದಿಜಾಲ

ಮತ್ತೆ ಭಾರಿ ಬೆಲೆ ಇಳಿಕೆ ಕಂಡ ಸ್ಯಾಮ್‌ಸಂಗ್ 'ಗ್ಯಾಲಕ್ಸಿ A50s' ಫೋನ್!

ಜನಪ್ರಿಯ ಸ್ಯಾಮ್‌ಸಂಗ್ ಕಂಪನಿಯ ಇತ್ತೀಚಿನ 'ಗ್ಯಾಲಕ್ಸಿ A' ಸರಣಿಯ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಿವೆ. ಅವುಗಳಲ್ಲಿ ಕೆಲವು ಹೈ ಎಂಡ್‌ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿರುವ 'ಗ್ಯಾಲಕ್ಸಿ A50s' ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆ ಹುಟ್ಟುಹಾಕಿತ್ತು. ಆದ್ರೆ ಇದೀಗ ಈ ಸ್ಮಾರ್ಟ್‌ಫೋನ್ ಭಾರಿ ಡಿಸ್ಕೌಂಟ್ ಪಡೆದಿದ್ದು, ಬಜೆಟ್‌ ಬೆಲೆಯಲ್ಲಿ ಗ್ರಾಹಕರ ಕೈ ಸೇರಲಿದೆ.

ಸ್ಯಾಮ್‌ಸಂಗ್ ಸಂಸ್ಥೆಯ 'ಗ್ಯಾಲಕ್ಸಿ A50s'

ಹೌದು, ಸ್ಯಾಮ್‌ಸಂಗ್ ಸಂಸ್ಥೆಯ 'ಗ್ಯಾಲಕ್ಸಿ A50s' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. 4GB+128GB ವೇರಿಯಂಟ್ ಬೆಲೆಯು 17,499ರೂ.ಗೆ ಸಿಗಲಿದೆ ಹಾಗೂ 6GB+128GB ವೇರಿಯಂಟ್‌ ಫೋನ್‌ 19,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್ ಬೆಲೆ ಇಳಿಕೆಗೂ ಮೊದಲು ಆರಂಭಿಕ 4GB+128GB ವೇರಿಯಂಟ್ ಬೆಲೆಯು 19,999ರೂ ಆಗಿತ್ತು. ಹಾಗೆಯೇ 6GB+128GB ವೇರಿಯಂಟ್‌ ಬೆಲೆಯು 21,999ರೂ. ಬೆಲೆ ಹೊಂದಿತ್ತು. ಇನ್ನು ಈ ಫೋನ್ AMOLED ಡಿಸ್‌ಪ್ಲೇ, 48ಎಂಪಿ ಕ್ಯಾಮೆರಾ, 4000mAh ಬ್ಯಾಟರಿ ಫೀಚರ್ಸ್‌ಗಳಿಂದ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿದೆ. ಇನ್ನುಳಿದ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ.

ಗ್ಯಾಲ್ಯಾಕ್ಸಿ A50s ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ A50s ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡ 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. ಫೋನಿನ್ ಬಾಹ್ಯ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರದ ಅನುಪಾತ 91.6 ರಷ್ಟಾಗಿದ್ದು, ಹಾಗೆಯೇ 158.5 mm x 74.5 mm x 7.7 mm ಸುತ್ತಳತೆಯನ್ನು ಪಡೆದಿದೆ.

ಗ್ಯಾಲ್ಯಾಕ್ಸಿ A50s ಪ್ರೊಸೆಸರ್

ಗ್ಯಾಲ್ಯಾಕ್ಸಿ A50s ಪ್ರೊಸೆಸರ್

ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 9611 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 4GB+128GB ಮತ್ತು 6GB+128GB ಸಾಮರ್ಥ್ಯದ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.

ಗ್ಯಾಲ್ಯಾಕ್ಸಿ A50s ಕ್ಯಾಮೆರಾ

ಗ್ಯಾಲ್ಯಾಕ್ಸಿ A50s ಕ್ಯಾಮೆರಾ

ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಅವುಗಳು ಮುಖ್ಯ ಕ್ಯಾಮೆರಾವು 48MP ಸೆನ್ಸಾರ್‌ನಲ್ಲಿದೆ. ಹಾಗೆಯೇ ಉಳಿದೆರಡು ಕ್ಯಾಮೆರಾಗಳು 5MP+8MP ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇನ್ನೂ ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ.

ಗ್ಯಾಲ್ಯಾಕ್ಸಿ A50s ಬ್ಯಾಟರಿ

ಗ್ಯಾಲ್ಯಾಕ್ಸಿ A50s ಬ್ಯಾಟರಿ

ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನಿನಲ್ಲಿ 4,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇನ್ನೂ ಇದರೊಂದಿಗೆ 15W ಫಾಸ್ಟ್‌ ಚಾರ್ಜರ್‌ ಅನ್ನು ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಬೇಗನೇ ಚಾರ್ಜ್‌ ಪಡೆದುಕೊಳ್ಳುತ್ತದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್‌, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ ಇದೀಗ ಬೆಲೆ ಇಳಿಕೆ ಕಂಡಿದ್ದು, 4GB+128GB ವೇರಿಯಂಟ್ ಬೆಲೆಯು 17,499ರೂ.ಗೆ ಸಿಗಲಿದೆ ಹಾಗೂ 6GB+128GB ವೇರಿಯಂಟ್‌ ಫೋನ್‌ 19,999ರೂ.ಗಳಿಗೆ ಲಭ್ಯವಾಗಲಿದೆ. ಗ್ರಾಹಕರು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಅಧಿಕೃತ ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು.

Best Mobiles in India

English summary
The Galaxy A50s now starts at Rs 17,499 in India after the price cut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+