ಮತ್ತೆ ಭಾರಿ ಬೆಲೆ ಇಳಿಕೆ ಕಂಡ 'ಸ್ಯಾಮ್‌ಸಂಗ್ ಗ್ಯಾಲಕ್ಸಿ A50s' ಸ್ಮಾರ್ಟ್‌ಫೋನ್!
ಇತ್ತೀಚಿಗೆ ಸ್ಯಾಮ್‌ಸಂಗ್ ಕಂಪನಿಯು ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರಿ ಗಮನ ಸೆಳೆದ ಫೋನ್‌ಗಳ ಪೈಕಿ ಗ್ಯಾಲಕ್ಸಿ A50s ಸ್ಮಾರ್ಟ್‌ಫೋನ್ ಸಹ ಒಂದಾಗಿದೆ. ಈ ಫೋನ್ ಈಗಾಗಲೇ ಎರಡು ಬಾರಿ ಬೆಲೆ ಕಡಿತ ಕಂಡಿರುವ ಈ ಫೋನ್ ಇದೀಗ ಮತ್ತೆ ಭರ್ಜರಿ ದರ ಇಳಿಕೆ ಕಂಡಿದೆ. ತ್ರಿವಳಿ ಕ್ಯಾಮೆರಾ ಸೆಟ್‌ಅಪ್, ವೇಗದ ಪ್ರೊಸೆಸರ್, ಅಧಿಕ ಬ್ಯಾಟರಿ ಲೈಫ್ ಈ ಫೋನಿನ ಪ್ರಮುಖ ಆಕರ್ಷಣೆ ಆಗಿವೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯ 'ಗ್ಯಾಲಕ್ಸಿ A50s' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಮತ್ತೆ ಭರ್ಜರಿ ಇಳಿಕೆ ಆಗಿದೆ. ಬೆಲೆ ಇಳಿಕೆ ನಂತರ ಗ್ಯಾಲಕ್ಸಿ A50s 4GB ವೇರಿಯಂಟ್ ಬೆಲೆಯು 18,599ರೂ. ಆಗಿದೆ. ಹಾಗೂ 6GB+128GB ವೇರಿಯಂಟ್ ಫೋನ್ 20,561ರೂ. ಪ್ರೈಸ್‌ಟ್ಯಾಗ್‌ನಲ್ಲಿ ಗುರುತಿಸಿಕೊಂಡಿದೆ. ಇನ್ನು ಈ ಫೋನ್ AMOLED ಡಿಸ್‌ಪ್ಲೇ, 48ಎಂಪಿ ಕ್ಯಾಮೆರಾ, 4000mAh ಬ್ಯಾಟರಿ ಫೀಚರ್ಸ್‌ಗಳಿಂದ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಿದೆ. ಇನ್ನುಳಿದ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ.

ಗ್ಯಾಲ್ಯಾಕ್ಸಿ A50s ಡಿಸ್‌ಪ್ಲೇ
ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡ 6.4 ಇಂಚಿನ ಫುಲ್ ಹೆಚ್‌ಡಿ ಸೂಪರ್ AMOLED ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. ಫೋನಿನ್ ಬಾಹ್ಯ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರದ ಅನುಪಾತ 91.6 ರಷ್ಟಾಗಿದ್ದು, ಹಾಗೆಯೇ 158.5 mm x 74.5 mm x 7.7 mm ಸುತ್ತಳತೆಯನ್ನು ಪಡೆದಿದೆ.

ಗ್ಯಾಲ್ಯಾಕ್ಸಿ A50s ಪ್ರೊಸೆಸರ್
ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ ಆಕ್ಟಾಕೋರ್ Exynos 9611 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದೆ. ಇದರೊಂದಿಗೆ 4GB+128GB ಮತ್ತು 6GB+128GB ಸಾಮರ್ಥ್ಯದ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.

ಗ್ಯಾಲ್ಯಾಕ್ಸಿ A50s ಕ್ಯಾಮೆರಾ
ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಅವುಗಳು ಮುಖ್ಯ ಕ್ಯಾಮೆರಾವು 48MP ಸೆನ್ಸಾರ್‌ನಲ್ಲಿದೆ. ಹಾಗೆಯೇ ಉಳಿದೆರಡು ಕ್ಯಾಮೆರಾಗಳು 5MP+8MP ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಇನ್ನೂ ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ.

ಗ್ಯಾಲ್ಯಾಕ್ಸಿ A50s ಬ್ಯಾಟರಿ
ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನಿನಲ್ಲಿ 4,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇನ್ನೂ ಇದರೊಂದಿಗೆ 15W ಫಾಸ್ಟ್ ಚಾರ್ಜರ್ ಅನ್ನು ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಬೇಗನೇ ಚಾರ್ಜ್ ಪಡೆದುಕೊಳ್ಳುತ್ತದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








