ಸ್ಯಾಮ್‌ಸಂಗ್ ಗ್ಯಾಲಕ್ಸಿ A51 ಫೋನಿನ 8GB RAM ವೇರಿಯಂಟ್ ಬಿಡುಗಡೆ!
ಜನಪ್ರಿಯ ಸ್ಮಾರ್ಟ್‌ಫೋನ್ ಸಂಸ್ಥೆ ಸ್ಯಾಮ್‌ಸಂಗ್ ಇತ್ತೀಚಿಗಷ್ಟೆ ಹೊಸದಾಗಿ 'ಗ್ಯಾಲಕ್ಸಿ A51' ಸ್ಮಾರ್ಟ್‌ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಮಾಡಿದೆ. ಈ ಫೋನ್ ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದ್ದು, 6GB RAM + 128GB ವೇರಿಯಂಟ್ ಆಯ್ಕೆಯಲ್ಲಿ ಲಭ್ಯವಾಗಿತ್ತು. ಆದರೆ ಇದೀಗ ಗ್ಯಾಲಕ್ಸಿ A51 ಫೋನ್ ಈಗ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬಿಡುಗಡೆ ಮಾಡಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು 'ಗ್ಯಾಲಕ್ಸಿ A51' ಸ್ಮಾರ್ಟ್‌ಫೋನಿನ 8GB RAM ಮತ್ತು 128GB ವೇರಿಯಂಟ್ ಅನ್ನು ಇದೀಗ ಲಾಂಚ್ ಮಾಡಿದೆ. ಈ ಫೋನ್ ಸೂಪರ್ AMOLED ಇನ್ಫಿನಿಟಿ O ಡಿಸ್‌ಪ್ಲೇ ಮಾದರಿಯನ್ನು ಹೊಂದಿದ್ದು, ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 4,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಹಾಗಾದರೇ ಈ ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ರಚನೆ
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು ಸೂಪರ್ AMOLED ಇನ್‌ಫಿನಿಟಿ-O ಮಾದರಿಯಲ್ಲಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಪಡೆದಿದೆ.

ಪ್ರೊಸೆಸರ್ ಕಾರ್ಯ
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನಲ್ಲಿ 2.3GHz ವೇಗದಲ್ಲಿ Exynos 9611 ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್ 6GB RAM + 128GB ಮತ್ತು 8GB RAM+128GB ಆಯ್ಕೆಯ ಎರಡು ವೇರಿಯಂಟ್ ಮಾದರಿಗಳನ್ನು ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಕ್ವಾಡ್ ಕ್ಯಾಮೆರಾ
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಇದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಹೊಂದಿದ್ದು, ಉಳಿದಂತೆ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 5ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಇದರೊಂದಿಗೆ 32ಎಂಪಿ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಲೈಫ್
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನ ಬ್ಯಾಟರಿ ಸಾಮರ್ಥ್ಯವು 4,000mAh ಆಗಿದ್ದು, ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದರೊಂದಿಗೆ ಯುಎಸ್‌ಬಿ ಸಿ ಪೋರ್ಟ್, ವೈಫೈ, ಬ್ಲೂಟೂತ್, ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಎಷ್ಟು
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನ 8GB RAM+128GB ವೇರಿಯಂಟ್ ಲಾಂಚ್ ಆಗಿದೆ. ಈ ವೇರಿಯಂಟ್ ಬೆಲೆಯು 27,999ರೂ. ಆಗಿದ್ದು, 6GB RAM + 128GB ವೇರಿಯಂಟ್ ಬೆಲೆಯು 23,999ರೂ. ಆಗಿದೆ. ಆನ್‌ಲೈನ್ ಹಾಗೂ ಆಫ್‌ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿದೆ.


Click it and Unblock the Notifications








