ಇಂದಿನಿಂದ ಸ್ಯಾಮ್‌ಸಂಗ್ 'ಗ್ಯಾಲಕ್ಸಿ A51' ಫೋನ್ ಸೇಲ್ ಶುರು!..ಬೆಲೆ ಎಷ್ಟು?
ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಹೊಸ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ A51 ಫೋನ್ ಇಂದಿನಿಂದ ಮಾರಾಟ ಆರಂಭಿಸಲಿದೆ. ಸಂಸ್ಥೆಯು ಈ ಫೋನ್ ಅನ್ನು ಇದೇ ಜ. 29ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇನ್ನು ಈ ಸ್ಮಾರ್ಟ್‌ಫೋನ್ 48ಎಂಪಿ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಸೆನ್ಸಾರ್, 4,000mAh ಬ್ಯಾಟರಿ ಫೀಚರ್ಸ್‌ಗಳಿಂದ ಗ್ರಾಹಕರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಹೌದು, ಸ್ಯಾಮಸಂಗ್ ಸಂಸ್ಥೆಯ ಗ್ಯಾಲಕ್ಸಿ A51 ಸ್ಮಾರ್ಟ್‌ಫೋನ್ ಇಂದಿನಿಂದ (ಜನೆವರಿ 31) ಸೇಲ್ ಆರಂಭಿಸಲಿದೆ. ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ, ಅಧಿಕೃತ ಸ್ಯಾಮ್‌ಸಂಗ್ ತಾಣದಲ್ಲಿ, ಸ್ಯಾಮ್ಸಂಗ್ ಓಪೆರಾ ಹೌಸ್ ಹಾಗೂ ಆಫ್‌ಲೈನ್ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯಲಿದೆ. ಇನ್ನು ಭಾರತದಲ್ಲಿ ಈ ಫೋನಿನ ಆರಂಭಿಕ ಬೆಲೆಯು 23,999ರೂ. ಆಗಿದೆ. ಬ್ಲ್ಯಾಕ್, ವೈಟ್ ಹಾಗೂ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A51 ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ರಚನೆ ಮತ್ತು ಡಿಸೈನ್
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು ಸೂಪರ್ AMOLED ಇನ್‌ಫಿನಿಟಿ-O ಮಾದರಿಯಲ್ಲಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯವನ್ನು ಪಡೆದಿದೆ.

ಪ್ರೊಸೆಸರ್ ಕಾರ್ಯ
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನಲ್ಲಿ 2.3GHz ವೇಗದಲ್ಲಿ Exynos 9611 ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ. ಇನ್ನು ಈ ಫೋನ್ 4GB RAM + 128GB ಮತ್ತು 8GB RAM+128GB ಆಯ್ಕೆಯ ಎರಡು ವೇರಿಯಂಟ್ ಮಾದರಿಗಳನ್ನು ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಕ್ವಾಡ್ ಕ್ಯಾಮೆರಾ ವಿಶೇಷತೆ
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನಲ್ಲಿ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಇದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್ ಹೊಂದಿದ್ದು, ಉಳಿದಂತೆ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 5ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಇದರೊಂದಿಗೆ 32ಎಂಪಿ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬ್ಯಾಟರಿ ಲೈಫ್
ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನಿನ ಬ್ಯಾಟರಿ ಸಾಮರ್ಥ್ಯವು 4,000mAh ಆಗಿದ್ದು, ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದರೊಂದಿಗೆ ಯುಎಸ್‌ಬಿ ಸಿ ಪೋರ್ಟ್, ವೈಫೈ, ಬ್ಲೂಟೂತ್, ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಎಷ್ಟು
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಾಕ್ಸಿ A51 ಸ್ಮಾರ್ಟ್‌ಫೋನ್ ಸೇಲ್ ಇಂದಿನಿಂದ ಪ್ರಾರಂಭವಾಗಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಈ ಫೋನಿನ ಆರಂಭಿಕ ವೇರಿಯಂಟ್ ಬೆಲೆಯು 23,999ರೂ. ಆಗಿದೆ. ಇನ್ನು ಈ ಫೋನ್ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ, ಅಧಿಕೃತ ಸ್ಯಾಮ್‌ಸಂಗ್ ತಾಣದಲ್ಲಿ, ಓಪೆರಾ ಹೌಸ್, ಹಾಗೂ ಆಫ್‌ಲೈನ್ ಮಾರುಕಟ್ಟೆಯಲ್ಲಿ ಸೇಲ್ ಆರಂಭಿಸಲಿದೆ.


Click it and Unblock the Notifications








