Home
ಸುದ್ದಿಜಾಲ

ಡಿಸ್ಕೌಂಟ್‌ ಬೆಲೆಯಲ್ಲಿ 8GB RAM ನ ಸ್ಯಾಮ್‌ಸಂಗ್‌ ಫೋನ್‌; ಭಾರಿ ಉಳಿತಾಯ!

ಸ್ಯಾಮ್‌ಸಂಗ್‌ ಫೋನ್‌ಗಳ ಕಾರ್ಯಕ್ಷಮತೆ ಹಾಗೂ ಕ್ಯಾಮೆರಾ ಫೀಚರ್ಸ್‌ ಬಳಕೆದಾರರಿಗೆ ಬಲು ಇಷ್ಟ. ಈ ನಡುವೆ ಸ್ಯಾಮ್‌ಸಂಗ್‌ ಹೊಸ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರೀ ಸದ್ದು ಮಾಡುತ್ತಿರುತ್ತದೆ. ಅದರಲ್ಲೂ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದ್ದು, ಮಾರುಕಟ್ಟೆಯಲ್ಲಿ ಸಂಚಲನವನ್ನೇ ಉಂಟು ಮಾಡಿದೆ. ಈ ನಡುವೆ ಈ ಜನಪ್ರಿಯ ಫೋನ್‌ಗೆ ದೊಡ್ಡ ಡಿಸ್ಕೌಂಟ್‌ ಘೋಷಣೆ ಮಾಡಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy) ಫೋನ್‌ಗಳಲ್ಲಿ ಹೆಚ್ಚು ಸೇಲ್‌ ಆಗುತ್ತಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G (Samsung Galaxy A53 5G) ಸ್ಮಾರ್ಟ್‌ಫೋನ್‌ಗೆ ಈಗ 14% ರಿಯಾಯಿತಿ ನೀಡಲಾಗಿದೆ. ಈ ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಸ್ನಾಪ್‌ಡ್ರಾಗನ್ 750G ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಆಫರ್‌ ಬೆಲೆ ವಿವರಗಳನ್ನು ತಿಳಿಯೋಣ ಬನ್ನಿ.

ಡಿಸ್ಕೌಂಟ್‌ ಬೆಲೆಯಲ್ಲಿ 8GB RAM ನ ಸ್ಯಾಮ್‌ಸಂಗ್‌ ಫೋನ್‌; ಭಾರಿ ಉಳಿತಾಯ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಡಿಸ್‌ಪ್ಲೇ ವಿವರ: ಈ ಫೋನ್‌ ಅನ್ನು ಅಗ್ಗದ ಬೆಲೆಗೆ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸೋಣ. ಅದರಂತೆ ಈ ಫೋನ್ 6.5 ಇಂಚಿನ ಹೆಚ್‌ಡಿ+ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದ್ದು, ಇದು 1080×2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿಕೊಂಡಿದೆ. ಇದರೊಂದಿಗೆ ನಾಚ್ ಶೈಲಿ ಇದ್ದು, 400 PPI ನ ಪಿಕ್ಸೆಲ್ ಸಾಂದ್ರತೆ ಈ ಫೋನ್‌ಕಡೆ ತಿರುಗಿ ನೋಡುವಂತೆ ಮಾಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಪ್ರೊಸೆಸರ್‌ ಮಾಹಿತಿ: ಇದರ ಪ್ರೊಸೆಸರ್‌ ವಿಚಾರಕ್ಕೆ ಬರುವುದಾದರೆ ಈ ಫೋನ್ ಮಧ್ಯಮ ಶ್ರೇಣಿಯ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 750G ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರ ವಿಶೇಷ ಎಂದರೆ ಈ ಸ್ಟೋರೇಜ್‌ ಅನ್ನು ವಿಸ್ತರಣೆ ಮಾಡಿಕೊಳ್ಳುವ ಅವಕಾಶ ಸಹ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಹೊಂದಿದ್ದು, ಅದರಲ್ಲಿ 64 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸರ್‌ ಮತ್ತು ಎರಡು 5 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ಪಡೆದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಸ್ಯಾಮ್‌ಸಂಗ್‌ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದಕ್ಕಾಗಿ ಯುಎಸ್‌ಬಿ ಟೈಪ್-ಸಿ ಕೇಬಲ್ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ ಹೆಡ್‌ಫೋನ್ ಜ್ಯಾಕ್, ಬದಿಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕಿಂಗ್ ಫೀಚರ್ಸ್‌ ಅನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G ಬೆಲೆ ಹಾಗೂ ಲಭ್ಯತೆ: ಇದರ ಪ್ರಮುಖ ವಿಚಾರಕ್ಕೆ ಬರುವುದಾದರೆ ಈ ಫೋನ್ 39,990 ರೂ.ಗಳ ಬೆಲೆ ಹೊಂದಿದ್ದು, ನೀವು ಈಗ 33,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್‌ಗೆ 14% ಡಿಸ್ಕೌಂಟ್‌ ನೀಡಲಾಗಿದೆ, ಇಷ್ಟು ಮಾತ್ರವಲ್ಲದೆ ಬ್ಯಾಂಕ್‌ ಕಾರ್ಡ್‌ಗಳು ವಿನಿಮಯ ಅಫರ್‌ ಬಳಕೆ ಮಾಡಿಕೊಂಡು ಇನ್ನೂ ಅಗ್ಗದ ದರಕ್ಕೆ ಈ ಫೋನ್‌ ಖರೀದಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 5G ಗೂ ಬಿಗ್‌ ಡಿಸ್ಕೌಂಟ್‌: ಇನ್ನು ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13 5G ಗೂ ಸಹ ಅಧಿಕ ಡಿಸ್ಕೌಂಟ್‌ ನೀಡಲಾಗಿದೆ. ಅಂದರೆ ಈ ಫೋನ್‌ಗೆ 23% ರಿಯಾಯಿತಿ ನೀಡಲಾಗಿದೆ. ಮೂಲಕ ನೀವು ಇದನ್ನು ಕೇವಲ 14,932ರೂ.ಗಳಿಗೆ ಖರೀದಿ ಮಾಡಬಹುದು. ಈ ಫೋನ್‌ನ ಸಾಮಾನ್ಯ ದರ 19,499ರೂ.ಗಳಾಗಿದೆ.

ಈ ಫೋನ್ 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 270ppi ಪಿಕ್ಸೆಲ್ ಸಾಂದ್ರತೆ ಮತ್ತು 1600 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ ಹಾಗೂ ಸ್ಕ್ರೋಲಿಂಗ್‌ಗಾಗಿ 90Hz ರಿಫ್ರೆಶ್ ರೇಟ್‌ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಫೋನ್ 50 ಮೆಗಾಪಿಕ್ಸೆಲ್‌ ವೈಡ್-ಆಂಗಲ್ ಲೆನ್ಸ್ ಜೊತೆಗೆ f/2.4 ದ್ಯುತಿರಂಧ್ರದೊಂದಿಗೆ 2 ಮೆಗಾಪಿಕ್ಸೆಲ್‌ ಡೆಪ್ತ್-ಅಸಿಸ್ಟ್ ಲೆನ್ಸ್ ಅನ್ನು ಪಡೆದಿದ್ದು, ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್‌ ವೈಡ್ ಆಂಗಲ್ ಲೆನ್ಸ್ ಹೊಂದಿದೆ.

ಡಿಸ್ಕೌಂಟ್‌ ಬೆಲೆಯಲ್ಲಿ 8GB RAM ನ ಸ್ಯಾಮ್‌ಸಂಗ್‌ ಫೋನ್‌; ಭಾರಿ ಉಳಿತಾಯ!

ಹಾಗೆಯೇ ಇದು ಮಾಲಿ-G57 MC2 GPU ಮತ್ತು 6GB RAM ಅನ್ನು ಆಯ್ಕೆ ಪಡೆದುಕೊಂಡಿದ್ದು, ಇದು ಅತ್ಯುತ್ತಮ ದೃಶ್ಯಗಳನ್ನು ನೀಡಲು ಮತ್ತು ತಡೆರಹಿತ ಕಾರ್ಯವನ್ನು ಮಾಡಲು ಮೀಡಿಯಾ ಟೆಕ್ ಡೈಮೆನ್ಸಿಟಿ 700 MT6833 ಚಿಪ್‌ಸೆಟ್‌ನೊಂದಿಗೆ ಡ್ಯುಯಲ್-ಕೋರ್ 2.2GHz ಮತ್ತು ಹೆಕ್ಸಾ-ಕೋರ್ 2GHz ಸೆಟಪ್‌ನೊಂದಿಗೆ ಆಕ್ಟಾ-ಕೋರ್ CPU ಅನ್ನು ಬಲ ಪಡೆದಿದೆ.
Best Mobiles in India

English summary
Samsung Galaxy A53 5G is now available at a 14% discount. The phone has a triple rear camera setup and is powered by a Snapdragon 750G processor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+