Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನ ಬಹುಬೇಡಿಕೆಯ ಈ ಎರಡು ಫೋನ್‌ಗಳ ಬೆಲೆ ಕುಸಿತ! ರಿಯಾಯಿತಿ ದರ ಎಷ್ಟು?

ಸ್ಯಾಮ್‌ಸಂಗ್‌ (Samsung) ವಿಶೇಷ ಸ್ಮಾರ್ಟ್‌ಫೋನ್‌ಗಳ ಮೂಲಕ ಆಗಾಗ್ಗೆ ಸದ್ದು ಮಾಡುತ್ತಲೇ ಬಂದಿದೆ. ಅದರಲ್ಲೂ ಇಂದು ಸ್ಯಾಮ್‌ಸಂಗ್‌ ಅನ್‌ಪ್ಯಾಕ್ಡ್‌ ಈವೆಂಟ್‌(Samsung Unpacked event 2024) ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಿನ್ನ ಸ್ಮಾರ್ಟ್‌ಫೋನ್‌ಗಳು ಹಾಗೂ ಇತರೆ ಸ್ಮಾರ್ಟ್‌ ಡಿವೈಸ್‌ಗಳು ಅನಾವರಣ ಆಗಲಿದೆ.

ಹೌದು, ಸ್ಯಾಮ್‌ಸಂಗ್‌ ಇಂದು ವಿಶೇಷ ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡಲಾಗಿದೆ. ಈ ಸಂತಸದ ಜೊತೆಗೆ ಮತ್ತೊಂದು ಗುಡ್‌ ನ್ಯೂಸ್‌ ಹಂಚಿಕೊಂಡಿದ್ದು, ಬಹುಬೇಡಿಕೆ ಇರುವ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಇಳಿಕೆ ಮಾಡಿದೆ. ಜೊತೆಗೆ ವೆಬ್‌ಸೈಟ್‌ನಲ್ಲಿ ಭರ್ಜರಿ ಆಫರ್‌ನೊಂದಿಗೆ ಈ ಫೋನ್‌ಗಳು ಕಾಣಿಸಿಕೊಂಡಿವೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಪರಿಷ್ಟೃತ ದರ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ನ ಬಹುಬೇಡಿಕೆಯ ಈ ಎರಡು ಫೋನ್‌ಗಳ ಬೆಲೆ ಕುಸಿತ! ರಿಯಾಯಿತಿ ದರ ಎಷ್ಟು?

ಸ್ಯಾಮ್‌ಸಂಗ್‌ ಫೋನ್‌ಗಳ ದರ ಇಳಿಕೆ: ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G (Samsung Galaxy A54 5G) ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G (Samsung Galaxy A34 5G) ಬೆಲೆ ಇಳಿಕೆಯಾಗಿದೆ. ಈ ಮೂಲಕ ಯಾವುದನ್ನಾದರೂ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ಅಂದರೆ ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಕಂಪನಿಯು 3,500 ರೂಪಾಯಿಗಳ ತ್ವರಿತ ರಿಯಾಯಿತಿಗಳನ್ನು ನೀಡುತ್ತಿದೆ. ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದ್ರೆ 2,000 ರೂ. ಗಳ ಹೆಚ್ಚುವರಿ ಆಫರ್ ಸಹ ಲಭ್ಯ ಇದೆ.

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ A34 5G ಅನ್ನು ಭಾರತದಲ್ಲಿ 30,999 ರೂ.ಗಳಿಗೆ ಲಾಂಚ್‌ ಮಾಡಲಾಗಿತ್ತು. ಆದರೆ ಈಗ ನೀವು 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯ ಫೋನ್‌ ಅನ್ನು 25,999 ರೂ.ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ, 8GB RAM + 256GB ಸ್ಟೋರೇಜ್ ವೇರಿಯಂಟ್‌ ಅನ್ನು 27,999 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್‌ನ ಬಹುಬೇಡಿಕೆಯ ಈ ಎರಡು ಫೋನ್‌ಗಳ ಬೆಲೆ ಕುಸಿತ! ರಿಯಾಯಿತಿ ದರ ಎಷ್ಟು?

ಮತ್ತೊಂದು ಫೋನ್‌ ಆದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 ನ 8GB RAM + 128GB ಸ್ಟೋರೇಜ್ ವೇರಿಯಂಟ್‌ 33,499 ರೂ.ಗಳಿಗೆ ಲಭ್ಯ ಇದೆ. ಇದರ ಸಾಮಾನ್ಯ ಬೆಲೆ 38,999 ರೂ.ಗಳು. ಈ ಫೋನ್‌ ಮೇಲೆ 3,500 ತ್ವರಿತ ಕ್ಯಾಶ್‌ಬ್ಯಾಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಪಾವತಿಗಳ ಮೇಲೆ ಹೆಚ್ಚುವರಿ ರೂ 2,000 ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪಡೆಯಬಹುದು. ಇದರೊಂದಿಗೆ 8GB RAM + 256GB ಸ್ಟೋರೇಜ್ ವೇರಿಯಂಟ್‌ ಫೋನ್‌ ಅನ್ನು 35,499 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ವಿಶೇಷ ಆಫರ್ ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯ ಇರಲಿದೆ ಅನ್ನೋದು ನಿಮ್ಮ ಗಮನಕ್ಕೆ ಇರಲಿ.

ಸ್ಯಾಮ್‌ಸಂಗ್‌ನ ಬಹುಬೇಡಿಕೆಯ ಈ ಎರಡು ಫೋನ್‌ಗಳ ಬೆಲೆ ಕುಸಿತ! ರಿಯಾಯಿತಿ ದರ ಎಷ್ಟು?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಫೀಚರ್ಸ್‌: ಎರಡೂ ಫೋನ್‌ಗಳು 120Hz ನಲ್ಲಿ ರಿಫ್ರೆಶ್ ರೇಟ್‌ನೊಂದಿಗೆ ಫುಲ್‌ ಹೆಚ್‌ಡಿ+ ಸೂಪರ್ ಅಮೋಲೆಡ್‌ ಡಿಸ್‌ಪ್ಲೇಗಳನ್ನು ಹೊಂದಿದ್ದು, ನಾಲ್ಕು ವರ್ಷದ ಓಎಸ್‌ ನವೀಕರಣಗಳನ್ನು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆದುಕೊಂಡಿವೆ. ಅಲ್ಲದೆ ಈ ಮಧ್ಯಮ ಶ್ರೇಣಿಯ ಫೋನ್‌ಗಳು ನೀರು ಮತ್ತು ಧೂಳಿನ ವಿರುದ್ಧ ಬಾಳಿಕೆಯನ್ನು IP67 ರೇಟಿಂಗ್ ಹೊಂದಿದೆ.

ಸ್ಯಾಮ್‌ಸಂಗ್‌ನ ಬಹುಬೇಡಿಕೆಯ ಈ ಎರಡು ಫೋನ್‌ಗಳ ಬೆಲೆ ಕುಸಿತ! ರಿಯಾಯಿತಿ ದರ ಎಷ್ಟು?

ಇನ್ನು ಗ್ಯಾಲಕ್ಸಿ A54 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ ಹೊಂದಿದೆ. ಇದು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ನೊಂದಿಗೆ ಉತ್ತಮ ಕ್ಯಾಮೆರಾ ಫೋನ್‌ ಆಗಿದೆ. ಜೊತೆಗೆ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್‌ OIS ಜೊತೆಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಆಯ್ಕೆ ಪಡೆದುಕೊಂಡಿದೆ. ಹಾಗೂ ಎರಡೂ ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಪಡೆದಿವೆ.

Best Mobiles in India

English summary
Samsung Galaxy A54 5G and Samsung Galaxy A34 5G price has been reduced. Samsung is offering instant discounts of Rs 3,500 on these Samsung smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+