Home
ಸುದ್ದಿಜಾಲ

ಇಂದಿನಿಂದ ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಸೇಲ್‌ ಪ್ರಾರಂಭ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಫೋನ್‌ ಭಾರತದಲ್ಲಿ ಇಂದಿನಿಂದ ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ಸ್ಯಾಮ್‌ಸಂಗ್ ಇ-ಸ್ಟೋರ್‌ನಲ್ಲಿ ಹಾಗೂ ಪ್ರಮುಖ ರಿಟೇಲ್‌ ಸ್ಟೋರ್‌ಗಳಲ್ಲಿ ಫಸ್ಟ್‌ ಸೇಲ್‌ ಪ್ರಾರಂಭಿಸಲಿದೆ. ಅಂದಹಾಗೆ ಈ ಎರಡೂ ಫೋನ್‌ಗಳು ಸಹ 5G ನೆಟ್‌ವರ್ಕ್‌ ಸಪೋರ್ಟ್‌ ಒಳಗೊಂಡಿವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G 8GB + 128GB ವೇರಿಯಂಟ್‌ ಬೆಲೆಯು 30,999ರೂ. ಗಳು ಆಗಿದೆ. ಹಾಗೆಯೇ 8GB + 256GB ವೇರಿಯಂಟ್‌ ದರವು 32,999ರೂ. ಗಳು ಆಗಿದೆ. ಅದೇ ರೀತಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G 8GB + 128GB ವೇರಿಯಂಟ್‌ ಬೆಲೆಯು 38,999ರೂ. ಆಗಿದ್ದು, 8GB + 256GB ವೇರಿಯಂಟ್‌ ದರವು 40,999ರೂ. ಗಳು ಆಗಿದೆ. ಹಾಗಾದರೆ ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂದಿನಿಂದ ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಸೇಲ್‌ ಪ್ರಾರಂಭ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಫೀಚರ್ಸ್‌ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್‌ 1080 × 2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಜೊತೆಗೆ ಮಾಲಿ-G68 MC4 GPU ಸಪೋರ್ಟ್ ಪಡೆದಿದೆ. ಹಾಗೆಯೇ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಪಡೆದಿದ್ದು, 8 GB + 128 GB ಮತ್ತು 8 GB + 256 GB ಸ್ಟೋರೇಜ್‌ ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಹಾಗೂ ತೃತೀಯ ಕ್ಯಾಮೆರಾವು 5 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ.

ಇಂದಿನಿಂದ ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಸೇಲ್‌ ಪ್ರಾರಂಭ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಅಲ್ಲದೇ ಇದು ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಆಯ್ಕೆಗಳನ್ನು ಇದು ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G ಫೀಚರ್ಸ್‌ : ಈ A54 5G ಸ್ಮಾರ್ಟ್‌ಫೋನ್ 6.4 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಎಕ್ಸಿನೋಸ್ 1380 SoC ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆಧಾರಿತ ಒನ್‌ UI 5.1 ರನ್‌ ಮಾಡಲಿದೆ. ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿ ಓಐಎಸ್‌ ಬೆಂಬಲದ 50MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ ವೈಡ್ ಲೆನ್ಸ್ ಆಯ್ಕೆಯನ್ನು ನೀಡಲಾಗಿದೆ.

ಇಂದಿನಿಂದ ಗ್ಯಾಲಕ್ಸಿ A34 5G ಮತ್ತು ಗ್ಯಾಲಕ್ಸಿ A54 5G ಸೇಲ್‌ ಪ್ರಾರಂಭ!

ಹಾಗೆಯೇ ಗ್ಯಾಲಕ್ಸಿ A54 5G ಫೋನ್‌ ಸೆಲ್ಫಿ ಉದ್ದೇಶಕ್ಕೆ 32 ಮೆಗಾ ಪಿಕ್ಸಲ್ ಕ್ಯಾಮೆರಾ ಸೆನ್ಸರ್‌ ನೀಡಲಾಗಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ A54 5G ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ : ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 25W ವೇಗದ ಚಾರ್ಜಿಂಗ್‌ ಬೆಂಬಲ ಪಡೆದುಕೊಂಡಿದೆ.

Best Mobiles in India

English summary
Samsung Galaxy A54 5G and Galaxy A34 5G go on sale in India today for the first time. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+