ದಿಡೀರ್ ಬೆಲೆ ಇಳಿಕೆ ಕಂಡ 'ಸ್ಯಾಮ್‌ಸಂಗ್ ಗ್ಯಾಲಕ್ಸಿ A70s' ಫೋನ್!
ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ A ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಗ್ಯಾಲಕ್ಸಿ A70s ಹೈಎಂಡ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದೆ. ಈ ಸ್ಮಾರ್ಟ್‌ಫೋನ್ ಇದೀಗ ಭರ್ಜರಿ ಬೆಲೆ ಇಳಿಕೆ ಕಂಡಿದ್ದು, ರಿಯಾಯಿತಿ ದರದಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನಿನ ಮುಖ್ಯ ಕ್ಯಾಮೆರಾವು 64ಎಂಪಿ ಆಗಿರುವುದು ಅತೀ ಪ್ರಮುಖ ಹೈಲೈಟ್ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A70s ಸ್ಮಾರ್ಟ್‌ಫೋನ್ 2000ರೂ. ಬೆಲೆ ಕಡಿತ ಆಗಿದೆ. ಇದೀಗ 6GB RAM + 128GB ವೇರಿಯಂಟ್ ಬೆಲೆಯು 25,999ರೂ ಆಗಿದೆ. ಹಾಗೆಯೇ 8GB RAM + 128GB ವೇರಿಯಂಟ್ 27,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಗುರುತಿಸಿಕೊಂಡಿದೆ. ಗ್ರಾಹಕರು ಫ್ಲಿಕ್‌ಕಾರ್ಟ್ ಅಥವಾ ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ತಾಣದಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಕೆಲವು ಪ್ರಮುಖ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಖರೀದಿಗೆ ಸಿಗಲಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A70s ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಗ್ಯಾಲ್ಯಾಕ್ಸಿ A70s ಡಿಸ್‌ಪ್ಲೇ
ಗ್ಯಾಲ್ಯಾಕ್ಸಿ A70s ಸ್ಮಾರ್ಟ್‌ಫೋನ್ 2400 x 1080 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಅಂಚು ರಹಿತ ಡಿಸ್‌ಪ್ಲೇ ಇದ್ದು, ವಾಟರ್ ಡ್ರಾಪ್ ನಾಚ್ ಅನ್ನು ಹೊಂದಿದೆ. ಸ್ಕ್ರೀನ್‌ನಿಂದ ಬಾಹ್ಯಬಾಡಿಯ ನಡುವಿನ ಅಂತರ ಶೇ.86% ಆಗಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 393ppi ಆಗಿದೆ. ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಗ್ಯಾಲ್ಯಾಕ್ಸಿ A70s ಪ್ರೊಸೆಸರ್
ಗ್ಯಾಲ್ಯಾಕ್ಸಿ A70s ಸ್ಮಾರ್ಟ್‌ಫೋನ್ ಆಕ್ಟಾಕೋರ್ ಪ್ರೊಸೆಸರ್ ಮಾದರಿಯಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್ ಅನ್ನು ಹೊಂದಿದೆ. 2GHz ವೇಗದಲ್ಲಿ ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು, ಆಡ್ರಿನೊ 612 ಗ್ರಾಫಿಕ್ ಸಹ ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್ 9 ಪೈ ಓಎಸ್ ಬೆಂಬಲವನ್ನು ಸಹ ಪಡೆದಿದ್ದು, 6GB RAM ಮತ್ತು 8GB RAM ಸಾಮರ್ಥ್ಯದೊಂದಿಗೆ 128GB ಸ್ಟೋರೇಜ್ ಆಂತರಿಕ ಸಂಗ್ರಹ ಪಡೆದಿದೆ.

ಗ್ಯಾಲ್ಯಾಕ್ಸಿ A70s ಕ್ಯಾಮೆರಾ
ಗ್ಯಾಲ್ಯಾಕ್ಸಿ A70s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ಒಳಗೊಂಡಿದ್ದು, ಪ್ರಾಥಮಿಕ ರಿಯರ್ ಕ್ಯಾಮೆರಾವು 64ಮೆಗಾಪಿಕ್ಸಲ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸಲ್ ಮತ್ತು ಮೂರನೇ ಕ್ಯಾಮೆರಾವು 5 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಫೋಟೊ ಎಡಿಟಿಂಗ್ ಆಯ್ಕೆಗಳನ್ನು ಒಳಗೊಂಡಿದೆ.

ಗ್ಯಾಲ್ಯಾಕ್ಸಿ A70s ಬ್ಯಾಟರಿ
ಗ್ಯಾಲ್ಯಾಕ್ಸಿ A70s ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ದೀರ್ಘಕಾಲ ಬಾಳಿಕೆ ಬರುವ ಶಕ್ತಿಯನ್ನು ಬ್ಯಾಟರಿ ಹೊಂದಿದೆ. ಇದರೊಂದಿಗೆ 25W ಸೂಪರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ಪಡೆದಿದೆ. ಇದರ ನೆರವಿನಿಂದ ಸ್ಯಾರ್ಟ್‌ಫೋನ್ ವೇಗವಾಗಿ ಚಾರ್ಜ್ ಪಡೆದುಕೊಳ್ಳುತ್ತದೆ.

ಗ್ಯಾಲ್ಯಾಕ್ಸಿ A70s ಇತರೆ ಸೌಲಭ್ಯಗಳು
ಗ್ಯಾಲ್ಯಾಕ್ಸಿ A70s ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಪೈ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಜಿಪಿಎಸ್, ಫಿಂಗರ್‌ಪ್ರಿಂಟ್ ಸೆನ್ಸಾರ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಆಯ್ಕೆಗಳನ್ನು ಹೊಂದಿದ್ದು, ಇದರೊಂದಿಗೆ ಓಟಿಜಿ ಕನೆಕ್ಟ್ ಆಯ್ಕೆ ಸಹ ಒಳಗೊಂಡಿದೆ.


Click it and Unblock the Notifications








