ಸ್ಯಾಮ್‌ಸಂಗ್ ಗ್ಯಾಲಕ್ಸಿ A72 ಸ್ಮಾರ್ಟ್‌ಫೋನ್ ಫೀಚರ್ಸ್ ಲೀಕ್!
ಇತ್ತೀಚಿಗೆ ಸ್ಯಾಮ್‌ಸಂಗ್ ಮೊಬೈಲ್ ಸಂಸ್ಥೆಯು ಬಜೆಟ್ ದರದಲ್ಲಿ ಹಲವು ಸ್ಮಾರ್ಟ್‌ಫೋನ್ ಸರಣಿಯಗಳನ್ನು ಪರಿಚಯಿಸುತ್ತ ಸಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಬಿಡುಗಡೆ ಆಗಲಿರುವ ಗ್ಯಾಲಕ್ಸಿ A72 4G ಸ್ಮಾರ್ಟ್‌ಫೋನ್ ಫೀಚರ್ಸ್‌ಗಳು ಇದೀಗ ಸೋರಿಕೆಯಾಗಿವೆ. ಈ ಸ್ಮಾರ್ಟ್‌ಫೋನಿನ ಕ್ಯಾಮೆರಾ, ಪ್ರೊಸೆಸರ್ ಹಾಗೂ ಬ್ಯಾಟರಿ ಫೀಚರ್ಸ್‌ಗಳು ಗ್ರಾಹಕರಲ್ಲಿ ಕುತೂಹಲ ಮೂಡಿಸಿವೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ ಗ್ಯಾಲಕ್ಸಿ A72 4G ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದ್ದು, ಈ ಫೋನ್ ಲೀಕ್ ಫೀಚರ್ಸ್‌ಗಳು ಈಗ ಆಕರ್ಷಕ ಅನಿಸಿವೆ. ಲೀಕ್ ಮಾಹಿತಿಯಂತೆ ಈ ಸ್ಮಾರ್ಟ್‌ಫೋನ್ 6GB RAM ಮತ್ತು 8GB RAM ಸಾಮರ್ಥ್ಯದ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಅನಾವರಣ ಆಗುವ ನಿರೀಕ್ಷೆಗಳಿವೆ. ಹಾಗೆಯೇ 4G ಮತ್ತು 5G ಮಾಡೆಲ್‌ಗಳ ಆಯ್ಕೆ ಪಡೆದಿರಲಿವೆ. ಇನ್ನುಳಿದಂತೆ ಸೋರಿಕೆಯಾದ ಮಾಹಿತಿ ಪ್ರಕಾರ ಗ್ಯಾಲಕ್ಸಿ A72 4G ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಹೊಂದಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ಹಾಗೂ ಪ್ರೊಸೆಸರ್
ಗ್ಯಾಲಕ್ಸಿ A72 4G ಸ್ಮಾರ್ಟ್‌ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರಲಿದ್ದು, 6.3 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಪಡೆದಿರಲಿದೆ. ಇನ್ನು ಈ ಫೋನ್ ಸ್ಯಾಮ್‌ಸಂಗ್‌ನ ಸ್ನ್ಯಾಪ್‌ಡ್ರಾಗನ್ 720G SoC ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿಗಿನ ಓಎಸ್ ಸಪೋರ್ಟ್ ಸಹ ಪಡೆದಿರಲಿದೆ. ಜೊತೆಗೆ 6GB RAM + 128GB ಮತ್ತು 8GB RAM + 256GB ಆಯ್ಕೆಗಳಿರಲಿವೆ ಎನ್ನಲಾಗಿದೆ.

ಕ್ಯಾಮೆರಾ ರಚನೆ
ಗ್ಯಾಲಕ್ಸಿ A72 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಪಡೆದಿರಲಿದೆ. ತೃತೀಯ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಪಡೆದಿರಲಿದೆ. ಇನ್ನು ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸೆನ್ಸಾರ್ ನಲ್ಲಿ ಇರುವ ನಿರೀಕ್ಷೆಗಳಿವೆ.

ಬ್ಯಾಟರಿ ಪವರ್ ಹಾಗೂ ನಿರೀಕ್ಷಿತ ಬೆಲೆ
ಗ್ಯಾಲಕ್ಸಿ A72 ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಜೊತೆಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದೆ. ಇದರೊಂದಿಗೆ ಇತ್ತೀಚಿಗಿನ ಕನೆಕ್ಟಿವಿಟಿ ಸೌಲಭ್ಯಗಳು ಇರಲಿವೆ ಎನ್ನಲಾಗಿದೆ. ಇನ್ನು ಈ ಫೋನಿನ ಬೇಸ್ ವೇರಿಯಂಟ್ ಬೆಲೆಯು ಯುರೋಫ್‌ನಲ್ಲಿ EUR 449 ಆಗಿರಲಿದೆ (ಭಾರತದಲ್ಲಿ ಅಂದಾಜು 39,800ರೂ. ಎನ್ನಲಾಗಿದೆ.)


Click it and Unblock the Notifications








