Home
ಸುದ್ದಿಜಾಲ

ಭಾರತದಲ್ಲಿ ಶಾಶ್ವತ ಬೆಲೆ ಇಳಿಕೆ ಕಂಡ 'ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A80'!

ಸ್ಯಾಮ್‌ಸಂಗ್ ಸಂಸ್ಥೆಯು ಗ್ಯಾಲ್ಯಾಕ್ಸಿ A ಸರಣಿಯಲ್ಲಿ ಇತ್ತೀಚಿಗೆ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಸರಣಿಯು ಬಜೆಟ್‌ ಬೆಲೆಯ ಫೋನ್‌ಗಳಿಂದ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ಅವುಗಳಲ್ಲಿ ಗ್ಯಾಲ್ಯಾಕ್ಸಿ A80 ಸ್ಮಾರ್ಟ್‌ಫೋನ್ ಭಾರಿ ಗಮನ ಸೆಳೆದಿದ್ದು, ಎರಡು ಬದಿ ತಿರುಗುವ ಕ್ಯಾಮೆರಾ (rotating camera) ಹೊಂದಿರುವುದೇ ಈ ಸ್ಮಾರ್ಟ್‌ಫೋನ್ ಪ್ರಮುಖ ಹೈಲೈಟ್ ಆಗಿದೆ. ಆದ್ರೀಗ ಈ ಸ್ಮಾರ್ಟ್‌ಫೋನ್ ಭರ್ಜರಿ ಬೆಲೆ ಇಳಿಕೆ ಕಂಡಿದೆ.

ಬೆಲೆಯಲ್ಲಿ ಶಾಶ್ವತವಾಗಿ ಕಡಿತ

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಜನಪ್ರಿಯ 'ಗ್ಯಾಲ್ಯಾಕ್ಸಿ A80' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಶಾಶ್ವತವಾಗಿ ಕಡಿತ ಮಾಡಿದೆ. 47,990ರೂ.ಗಳ ಪ್ರೈಸ್‌ಟ್ಯಾಗ್‌ನೊಂದಿಗೆ ಮಾರುಕಟ್ಟೆಗೆ ಲಾಂಚ್ ಆಗಿದ್ದ ಈ ಸ್ಮಾರ್ಟ್‌ಫೋನ್ ಈಗ ಬೆಲೆ ಇಳಿಕೆಯಿಂದಾಗಿ 39,990ರೂ.ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಗೊಸ್ಟ್ ವೈಟ್, ಪ್ಯಾಂಟೋಮ್ ಬ್ಲ್ಯಾಕ್‌ ಮತ್ತು ಏಂಜಲ್ ಗೋಲ್ಡ್‌ ಬಣ್ಣಗಳ ಆಯ್ಕೆಗಳನ್ನು ಒಳಗೊಂಡಿದೆ.

ಆಫ್‌ಲೈನ್‌ ಸ್ಟೋರ್‌

ಈ ಸ್ಮಾರ್ಟ್‌ಫೋನಿನ ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದ್ದು, ಲೈವ್‌ ಫೋಕಸ್‌, ಸೂಪರ್‌ ಸ್ಲೋ ಮತ್ತು 4K UHD ವಿಡಿಯೊ ಚಿತ್ರೀಕರಣ ಸೌಲಭ್ಯಗಳನ್ನು ಹೊಂದಿದೆ. ಇನ್ನು ಗ್ಯಾಲ್ಯಾಕ್ಸಿ A80 ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್‌ನ ಅಧಿಕೃತ ಇ-ತಾಣದಲ್ಲಿ, ಫ್ಲಿಪ್‌ಕಾರ್ಟ್‌ನಲ್ಲಿ, ಅಮೆಜಾನ್‌ ತಾಣ ಸೇರಿದಂತೆ ಪ್ರಮುಖ ಆಫ್‌ಲೈನ್‌ ಸ್ಟೋರ್‌ಗಳಲ್ಲಿಯೂ ಲಭ್ಯವಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ A80 ಸ್ಮಾರ್ಟ್‌ಫೋನ್ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಗ್ಯಾಲ್ಯಾಕ್ಸಿ A80 ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.70 ಇಂಚಿನ ಪೂರ್ಣ ಹೆಚ್‌ಡಿ sAMOLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ಕಡಿಮೆ ಅಂಚನ್ನು ಹೊಂದಿದ್ದು, ಸುತ್ತಳತೆಯು 165.20 x 76.50 x 9.30mm ಆಗಿದೆ. ಹೆಚಚು ಪ್ರಖರವಾದ ಡಿಸ್‌ಪ್ಲೇಯು ವಿಡಿಯೊ ವೀಕ್ಷಣೆಗೆ ಅತ್ಯುತ್ತಮ ಎನಿಸಲಿದೆ.

ಪ್ರೊಸೆಸರ್ ಬಲ

ಪ್ರೊಸೆಸರ್ ಬಲ

ಗ್ಯಾಲ್ಯಾಕ್ಸಿ A80 ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಅದರೊಂದಿಗೆ ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್‌ ಸಾಮರ್ಥ್ಯದ ಒಂದೇ ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ. ಪ್ರೊಸೆಸರ್‌ ವೇಗವು ಗೇಮಿಂಗ್‌ಗೂ ಉತ್ತಮ ಪ್ಲಾಟ್‌ಫಾರ್ಮ್ ಅನಿಸಲಿದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಗ್ಯಾಲ್ಯಾಕ್ಸಿ A80 ಸ್ಮಾರ್ಟ್‌ಫೋನ್ ತಿರುಗುವ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಸೆಲ್ಫಿಗೂ ಮತ್ತು ಹಿಂಬದಿಯ ರಿಯರ್‌ ಕ್ಯಾಮೆರಾಗೂ ಒಂದೇ ಕ್ಯಾಮೆರಾ ಆಗಿದೆ. ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ನಲ್ಲಿದ್ದು, ಮುಖ್ಯ ಕ್ಯಾಮೆರಾವು f/2.0 ಅಪರ್ಚರ್‌ನೊಂದಿಗೆ 48ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು f/2.2 ಅಪರ್ಚರ್‌ನೊಂದಿಗೆ 8ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೂ ತೃತೀಯ ಕ್ಯಾಮೆರಾ 3D ಡೆಪ್ತ್‌ ಸೆನ್ಸಾರ್ನಲ್ಲಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಗ್ಯಾಲ್ಯಾಕ್ಸಿ A80 ಸ್ಮಾರ್ಟ್‌ಫೋನ್ 3,700mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಇದರೊಂದಿಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿದೆ. ಉಳಿದಂತೆ ಯುಎಸ್‌ಬಿ ಟೈಪ್-ಸಿ ಫೋರ್ಟ್, ಆನ್‌ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಸ್ಯಾಮ್‌ಸಂಗ್ ಪ್ಲೇ, 360 ಡಿಗ್ರಿ ವ್ಯಾಪ್ತಿಯಲ್ಲಿ ಸೌಂಡ್‌ ಕೇಳುವ ಅನುಭವ, ಸೇರಿದಂತೆ ಇತ್ತೀಚಿನ ಹಲವು ಅಗತ್ಯ ಫೀಚರ್ಸ್‌ಗಳನ್ನು ಹೊಂದಿದೆ.

Best Mobiles in India

English summary
This is an official price cut on the Galaxy A80 and not a limited time discount. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+