Home
ಸುದ್ದಿಜಾಲ

ಸ್ಯಾಮ್‌ಸಂಗ್‌ನ ಚಿತ್ತ ಫಾಸ್ಟ್‌ ಚಾರ್ಜಿಂಗ್‌ ಫೀಚರ್‌ನತ್ತ!

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಕಂಪನಿಯು ಇತ್ತೀಚಿಗೆ ಗ್ಯಾಲ್ಯಾಕ್ಸಿ ಎ ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಇನ್ನು ಕೇಲವು ಬಿಡುಗಡೆಯ ಹೊಸ್ತಿಲಲ್ಲಿವೆ. ಗ್ಯಾಲ್ಯಾಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಯು ಸಾಕಷ್ಟು ಹೊಸತನಗಳನ್ನು ಅಳವಡಿಸಿಕೊಂಡಿದೆ. ಅವುಗಳಲ್ಲಿ ಕ್ಯಾಮೆರಾ, ಪ್ರೊಸೆಸರ್‌, ಡಿಸೈನ್‌, ಬ್ಯಾಟರಿ ಮತ್ತು ಚಾರ್ಜರ್‌ ಸೌಲಭ್ಯಗಳು ಪ್ರಮುಖ ಹೈಲೈಟ್ಸ್‌ ಆಗಿವೆ.

ಸ್ಯಾಮ್‌ಸಂಗ್‌ನ ಚಿತ್ತ ಫಾಸ್ಟ್‌ ಚಾರ್ಜಿಂಗ್‌ ಫೀಚರ್‌ನತ್ತ!

ಹೌದು, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ ಸರಣಿಯಲ್ಲಿನ ಸ್ಮಾರ್ಟ್‌ಫೋನ್‌ಗಳಲ್ಲಿ ಬಿಗ್‌ ಬ್ಯಾಟರಿ ಶಕ್ತಿಯೊಂದಿಗೆ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಠೆ ಒದಗಿಸಿದ್ದಾರೆ. ಈ ಸರಣಿಯಲ್ಲಿನ 'ಗ್ಯಾಲ್ಯಾಕ್ಸಿ ಎ90' ಸ್ಮಾರ್ಟ್‌ಫೋನ್‌ನ 45W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿರಲಿದೆ. ಹಾಗೆಯೇ ನೋಟ್‌ 10 ಸ್ಮಾರ್ಟ್‌ಫೋನ್‌ನಲ್ಲಿಯೂ ಈ ತಂತ್ರಜ್ಞಾನವನ್ನು ಸೇರಿಸಲಿದೆ. ಇದು ಬಹುಬೇಗನೆ ಚಾರ್ಜ್‌ ಒದಗಿಸುವ ಶಕ್ತಿ ಪಡೆದಿರಲಿದೆ.

ಸ್ಯಾಮ್‌ಸಂಗ್‌ನ ಚಿತ್ತ ಫಾಸ್ಟ್‌ ಚಾರ್ಜಿಂಗ್‌ ಫೀಚರ್‌ನತ್ತ!

ಗ್ಯಾಲ್ಯಾಕ್ಸಿ ಎ90 ಫೋನ್‌ 1080x2400 ಪಿಕ್ಸಲ್‌ ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ 6GB RAM ಜೊತೆಗೆ 128GB ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿದೆ. ಫೋನ್‌ ಹಿಂಬದಿಯಲ್ಲಿ 48ಎಂಪಿ ಮತ್ತು 8ಎಂಪಿ ಸಾಮರ್ಥ್ಯದ ಡ್ಯುಯಲ್‌ ಕ್ಯಾಮೆರಾವನ್ನು ಒಳಗೊಂಡಿದ್ದು, ಸ್ನ್ಯಾಪ್‌ಡ್ರಾಗನ್ 710 ಪ್ರೊಸೆಸರ್‌ಇರಲಿದೆ. 3700mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ನ ಚಿತ್ತ ಫಾಸ್ಟ್‌ ಚಾರ್ಜಿಂಗ್‌ ಫೀಚರ್‌ನತ್ತ!

ದಕ್ಷಿಣ ಕೋರಿಯಾ ಮೂಲದ ಸ್ಯಾಮ್‌ಸಂಗ್ ಈಗಾಗಲೇ ತನ್ನ ಗ್ಯಾಲ್ಯಾಕ್ಸಿ ಎ ಸರಣಿಯಲ್ಲಿ ಬಿಡುಗಡೆ ಆಗಿರುವ ಎ70 ಸ್ಮಾರ್ಟ್‌ಫೋನ್‌ 4500 mAh ಬ್ಯಾಟರಿ ಇದ್ದು, 25w ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ ಗ್ಯಾಲ್ಯಾಕ್ಸಿ ಎ80 ಸ್ಮಾರ್ಟ್‌ಫೋನ್‌ ಸಹ 25w ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದ್ದು, 3,700mAh ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದೆ.

ಗ್ಯಾಲ್ಯಾಕ್ಸಿ ಎ90 ಸ್ಮಾರ್ಟ್‌ಫೋನ್‌ ಬ್ಯಾಟರಿ ಫಾಸ್ಟ್‌ ಚಾರ್ಜಿಂಗ್‌ನಲ್ಲಿ ಹೊಸ ಸಂಚಲನ ಮೂಡಿಸಲಿದೆ. ಹಾಗೆಯೇ ಎ90 5G ವೇರಿಯಂಟ್ ಮಾದರಿಯಲ್ಲಿಯೂ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಬ್ಯಾಟರಿ ಮತ್ತು ಫಾಸ್ಟ್‌ ಚಾರ್ಜಿಂಗ್ ಫೀಚರ್‌ ಮೂಲಕ ಮಾರುಕಟ್ಟೆಯಲ್ಲಿ ಮತ್ತೆ ಸ್ಯಾಮ್‌ಸಂಗ್ ತನ್ನ ಜನಪ್ರಿಯತೆಯನ್ನು ಹೊಂದುವ ನಿರೀಕ್ಷೆಗಳು ಗರಿಗೆದರಿವೆ.

Best Mobiles in India

English summary
Samsung Galaxy A90 might be part of a new Galaxy R series, have 45W fast charging. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+