Samsung: ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿ! ಪ್ರೀ-ಬುಕಿಂಗ್‌ನಲ್ಲಿ ಭರ್ಜರಿ ಪ್ರಯೋಜನ
ಸ್ಯಾಮ್‌ಸಂಗ್ (Samsung) ಕೊನೆಗೂ ಭಾರತದಲ್ಲಿ ಬಹು ನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿಯನ್ನು (Samsung Galaxy Book 4 Series) ಅಧಿಕೃತವಾಗಿ ಪರಿಚಯಿಸಿದೆ. ಈ ಸರಣಿಯಲ್ಲಿ ಒಟ್ಟಾರೆ ಮೂರು ಡಿವೈಸ್‌ಗಳಿದ್ದು, ಇವು ವಿಭಿನ್ನ ಆದ್ಯತೆಗಳು ಮತ್ತು ಅಗತ್ಯಗಳನ್ನು ಪೂರೈಸುತ್ತದೆ.
ಹೌದು, ಸ್ಯಾಮ್‌ಸಂಗ್ ಇದೀಗ ಬಹು ನಿರೀಕ್ಷಿತ ಗ್ಯಾಲಕ್ಸಿ ಬುಕ್ 4 ಸರಣಿಯನ್ನು ಪರಿಚಯಿಸಿದ್ದು, ಇದರಲ್ಲಿ ಗ್ಯಾಲಕ್ಸಿ ಬುಕ್ 4 360, ಗ್ಯಾಲಕ್ಸಿ ಬುಕ್ 4 ಪ್ರೊ ಹಾಗೂ ಗ್ಯಾಲಕ್ಸಿ ಬುಕ್ 4 ಪ್ರೊ 360 ಡಿವೈಸ್‌ಗಳನ್ನು (Galaxy Book 4 360, Galaxy Book 4 Pro and Galaxy Book 4 Pro 360) ಕಾಣಬಹುದಾಗಿದೆ. ಇದರಲ್ಲಿ ಗ್ಯಾಲಕ್ಸಿ ಬುಕ್ 4 ಪ್ರೊ 360 ಮತ್ತು ಗ್ಯಾಲಕ್ಸಿ ಬುಕ್ 4 360 ಟು-ಇನ್-ಒನ್ ಲ್ಯಾಪ್‌ಟಾಪ್‌ಗಳಾಗಿದ್ದು,ವಿವಿಧ ರೀತಿಯಲ್ಲಿ ಇವುಗಳನ್ನು ಬಳಕೆ ಮಾಡಬಹುದಾಗಿದೆ. ಆದರೆ ಬುಕ್ 4 ಪ್ರೊ ಸಾಂಪ್ರದಾಯಿಕ ಕ್ಲಾಮ್‌ಶೆಲ್ ವಿನ್ಯಾಸವನ್ನು ಹೊಂದಿದೆ. ಹಾಗಿದ್ರೆ, ಬನ್ನಿ ಇವುಗಳ ಫೀಚರ್ಸ್ ಹಾಗೂ ಬೆಲೆ ವಿವರಗಳನ್ನು ಗಮನಿಸೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿ ಡಿಸ್‌ಪ್ಲೇ ಮಾಹಿತಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಪ್ರೊ ಮಾದರಿಗಳು ಡೈನಾಮಿಕ್ ಅಮೋಲೆಡ್ 2x ಡಿಸ್‌ಪ್ಲೇ ಹೊಂದಿದ್ದು, 2,880 x 1,800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿವೆ. ಹಾಗೆಯೇ ಪ್ರೊ 360 ಲ್ಯಾಪ್‌ಟಾಪ್ 16 ಮತ್ತು 14 ಇಂಚಿನ ಗಾತ್ರಗಳಲ್ಲಿ ಕಾಣಿಸಿಕೊಂಡಿದೆ. ಸಾಮಾನ್ಯ ಗ್ಯಾಲಕ್ಸಿ ಬುಕ್ 4 360 FHD ರೆಸಲ್ಯೂಶನ್‌ನೊಂದಿಗೆ 15.6 ಇಂಚಿನ ಎಸ್‌ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಎಲ್ಲವೂ ಟಚ್ ಕಂಟ್ರೋಲ್ ಅನ್ನು ಬೆಂಬಲಿಸಲಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿಯು ಇಂಟೆಲ್‌ನ ಇತ್ತೀಚಿನ ಕೋರ್ ಅಲ್ಟ್ರಾ ಪ್ರೊಸೆಸರ್‌ಗಳ ಬಲ ಪಡೆದಿವೆ. ಬುಕ್ 4 ಪ್ರೊ 360 ಪ್ರತ್ಯೇಕವಾಗಿ 16GB LPDDR5x RAM ನೊಂದಿಗೆ ಜೋಡಿಸಲಾದ ಕೋರ್ ಅಲ್ಟ್ರಾ 7 ಆಯ್ಕೆಯನ್ನು ನೀಡುತ್ತದೆ. ಇದಕ್ಕೆ ವಿರುದ್ಧವಾಗಿ, ಬುಕ್ 4 ಪ್ರೊ ಮತ್ತು ಬುಕ್ 4 360 ಕೋರ್ ಅಲ್ಟ್ರಾ 7 ಮತ್ತು ಅಲ್ಟ್ರಾ 5 ವೇರಿಯಂಟ್‌ನಲ್ಲಿಯೂ ಲಭ್ಯ ಇದೆ.

ಅಲ್ಲದೆ 16GB ಮತ್ತು 32GB RAM ಆಯ್ಕೆಯನ್ನು ಇಲ್ಲಿ ಕಾಣಬಹುದಾಗಿದೆ. ಪ್ರೊ ವೇರಿಯಂಟ್‌ಗಳು ಇಂಟೆಲ್ ಆರ್ಕ್ ಗ್ರಾಫಿಕ್ಸ್ ಅನ್ನು ಸಹ ಒಳಗೊಂಡಿದ್ದು, ಪ್ರೊ ಅಲ್ಲದ ಮಾದರಿಯು ಇಂಟೆಲ್ ಐರಿಸ್ ಎಕ್ಸ್‌ಇ ಜಿಪಿಯು ಅನ್ನು ಸಂಯೋಜಿಸುತ್ತದೆ. ಉಳಿದಂತೆ ಎಲ್ಲಾ ಮೂರು ಕಾನ್ಫಿಗರೇಶನ್‌ಗಳು 512GB ಮತ್ತು 1TB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಲಭ್ಯ ಇವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿಯಲ್ಲಿ ಉತ್ತಮ ಆಡಿಯೋ ಗುಣಮಟ್ಟವನ್ನು ಕಾಣಬಹುದಾಗಿದೆ. ಅಂದರೆ ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದಿಂದ ವರ್ಧಿಸಲ್ಪಟ್ಟ ಎಕೆಜಿ-ಟ್ಯೂನ್ಡ್ ಕ್ವಾಡ್ ಸ್ಪೀಕರ್‌ಗಳೊಂದಿಗೆ ವಿಶೇಷವಾದ ಸೌಂಡ್ ಅನುಭವ ನೀಡಲಿವೆ. ಉಳಿದಂತೆ ಬುಕ್ 4 ಪ್ರೊ 360, ಬುಕ್ 4 ಪ್ರೊ, ಮತ್ತು ಬುಕ್ 4 360 ಕ್ರಮವಾಗಿ 76Wh, 76Wh (14-ಇಂಚಿನ ರೂಪಾಂತರಕ್ಕೆ 63Wh) ಮತ್ತು 68Wh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿವೆ. ಈ ಮೂರು ವೇರಿಯಂಟ್‌ಗಳು 65W ಚಾರ್ಜಿಂಗ್ ಅನ್ನು ಬೆಂಬಲಿಸಲಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿ ಬೆಲೆ ಮತ್ತು ಲಭ್ಯತೆ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಪ್ರೊ 360 ಲ್ಯಾಪ್‌ಟಾಪ್‌ಗೆ 1,63,990ರೂ.ಗಳು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಪ್ರೊಗೆ 1,31,990ರೂ.ಗಳು ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 360 ಗೆ 1,14,990ರೂ.ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಈ ಮೂರು ಲ್ಯಾಪ್‌ಟಾಪ್‌ಗಳು ಸಹ ವಿವಿಧ ರೀತಿಯ ಬಣ್ಣದ ವೇರಿಯಂಟ್‌ನಲ್ಲಿ ಲಭ್ಯ ಇವೆ.

ಪ್ರೀ-ಬುಕಿಂಗ್ ಆಫರ್: ಫೆಬ್ರವರಿ 20 ರಿಂದ ಅಂದರೆ ಇಂದಿನಿಂದ ಗ್ರಾಹಕರು ಈ ಡಿವೈಸ್‌ಗಳನ್ನು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್, ಪ್ರಮುಖ ಆನ್‌ಲೈನ್ ಸ್ಟೋರ್‌ಗಳು ಮತ್ತು ರಿಟೇಲ್ ಔಟ್‌ಲೆಟ್‌ಗಳ ಮೂಲಕ ಪ್ರೀ-ಬುಕಿಂಗ್ ಮಾಡಬಹುದು. ಇದರಿಂದ 10,000 ರೂಪಾಯಿಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ 8,000 ರೂಪಾಯಿಗಳ ಅಪ್‌ಗ್ರೇಡ್ ಬೋನಸ್ ಅನ್ನು ಪಡೆಯುವ ಆಯ್ಕೆಯೊಂದಿಗೆ 5,000 ರೂಪಾಯಿ ಮೌಲ್ಯದ ವಿಶೇಷ ಪ್ರಯೋಜನ ನೀಡಲಾಗುತ್ತದೆ. ಇಷ್ಟೇ ಅಲ್ಲದೆ ಇಂದು ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಲೈವ್ ಕಾಮರ್ಸ್ ಈವೆಂಟ್‌ನಲ್ಲಿ ಭಾಗವಹಿಸುವವರು 8,000ರೂ.ಗಳ ಹೆಚ್ಚುವರಿ ತ್ವರಿತ ಕ್ಯಾಶ್‌ಬ್ಯಾಕ್ ಸಹ ಪಡೆಯಲಿದ್ದಾರೆ.


Click it and Unblock the Notifications








