Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್ ಸರಣಿ ! ಹೇಗಿದೆ ಡಿಸೈನ್? ಫೀಚರ್ಸ್‌ ಏನು?

ಸ್ಯಾಮ್‌ಸಂಗ್‌ (Samsung) ತನ್ನ ಸ್ಮಾರ್ಟ್‌ಫೋನ್‌ಗಳಿಂದಲೇ ಹೆಚ್ಚಾಗಿ ಚಿರಪರಿಚಿತವಾಗಿದೆ. ಈ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆ ಮೂಲಕ ಜನಪ್ರಿಯತೆ ಪಡೆದುಕೊಂಡಿವೆ. ಈ ನಡುವೆ ಸ್ಯಾಮ್‌ಸಂಗ್‌ ಐದು ಲ್ಯಾಪ್‌ಟಾಪ್ ಮಾದರಿಗಳೊಂದಿಗೆ ಕಾಣಿಸಿಕೊಳ್ಳಲಿದೆ. ಈ ಮೂಲಕ ಲ್ಯಾಪ್‌ಟಾಪ್‌ ವಲಯದಲ್ಲಿ ಸ್ಯಾಮ್‌ಸಂಗ್ ತನ್ನದೇ ಆದ ಸ್ಪರ್ಧೆ ನೀಡಲಿದೆ.

ಹೌದು, ಸ್ಯಾಮ್‌ಸಂಗ್‌ ಹೊಸ ಹಾಗೂ ವಿಶೇಷ ಶೈಲಿಯ ಲ್ಯಾಪ್‌ಟಾಪ್‌ಗಳನ್ನು (Laptop) ಅನಾವರಣ ಮಾಡಲು ಮುಂದಾಗಿದೆ. ಈ ಲ್ಯಾಪ್‌ಟಾಪ್‌ಗಳನ್ನು ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2024 ಈವೆಂಟ್‌ನಲ್ಲಿ(Galaxy Unpacked 2024 event) ಅಧಿಕೃತವಾಗಿ ಲಾಂಚ್‌ ಮಾಡಲಾಗುತ್ತದೆ ಎನ್ನುವ ಮಾತುಗಳು ಸಹ ಕೇಳಿಬಂದಿವೆ. ಈ ನಡುವೆ ಈ ಲ್ಯಾಪ್‌ಟಾಪ್‌ ಬಗ್ಗೆ ಕೆಲವು ಮಾಹಿತಿಗಳು ಲೀಕ್‌ ಆಗಿದ್ದು, ಅದರಂತೆ ಇವು ಏನೆಲ್ಲಾ ಫೀಚರ್ಸ್ ಆಯ್ಕೆ ಪಡೆದಿವೆ ನೋಡೋಣ ಬನ್ನಿ.

ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್ ಸರಣಿ ! ಹೇಗಿದೆ ಡಿಸೈನ್? ಫೀಚರ್ಸ್‌ ಏನು?

ಸ್ಯಾಮ್‌ಸಂಗ್‌ ಲ್ಯಾಪ್‌ಟಾಪ್‌: ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬುಕ್‌ 4 ಸರಣಿಯನ್ನು (Samsung Galaxy Book 4 Series) ಮುಂದಿನ ವರ್ಷದ ಆರಂಭದಲ್ಲಿ ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2024 ಈವೆಂಟ್‌ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಬಿಡುಗಡೆಗೆ ಇನ್ನೂ ಕೆಲವು ತಿಂಗಳುಗಳು ಬಾಕಿ ಇದ್ದರೂ ಸಹ ಈ ಲ್ಯಾಪ್‌ಟಾಪ್‌ ಬಗ್ಗೆ ಅಚ್ಚರಿ ಮಾಹಿತಿ ಲೀಕ್‌ ಆಗಿವೆ. ಅದರಂತೆ ಗ್ಯಾಲಕ್ಸಿ ಬುಕ್‌ 4 360, ಗ್ಯಾಲಕ್ಸಿ ಬುಕ್‌ 4 360 ಪ್ರೊ, ಗ್ಯಾಲಕ್ಸಿ ಬುಕ್‌ 4 ಪ್ರೊ ಮತ್ತು ಗ್ಯಾಲಕ್ಸಿ ಬುಕ್ 4 ಅಲ್ಟ್ರಾ ಅಮೋಲೆಡ್ ಡಿಸ್‌ಪ್ಲೇಗಳೊಂದಿಗೆ ಬರಲಿವೆ ಎಂದು ಹೇಳಲಾಗಿದೆ

ಈ ಸರಣಿಯ ಲ್ಯಾಪ್‌ಟಾಪ್‌ನ ಮೂಲ ಮಾದರಿಯಾದ ಗ್ಯಾಲಕ್ಸಿ ಬುಕ್‌ 4 ಫುಲ್‌ ಹೆಚ್‌ಡಿ ಎಲ್‌ಇಡಿ ಡಿಸ್‌ಪ್ಲೇ ಪಡೆಯಬಹುದು ಎಂದು ತಿಳಿದುಬಂದಿದೆ. ಜೊತೆಗೆ ಈ ಲೀಕ್‌ ಮಾಹಿತಿಯಲ್ಲಿ ಗ್ಯಾಲಕ್ಸಿ ಬುಕ್‌ 3 ಸರಣಿಯ ವಿನ್ಯಾಸವನ್ನು ಸಹ ತಿಳಿದುಕೊಳ್ಳಬಹುದಾಗಿದೆ. ಗ್ಯಾಲಕ್ಸಿ ಬುಕ್‌ 4 360 ಮತ್ತು ಗ್ಯಾಲಕ್ಸಿ ಬುಕ್‌ 4 360 ಪ್ರೊ ಡಿವೈಸ್‌ 360 ಡಿಗ್ರಿ ಕೀಗಳು ಮತ್ತು ಪೆನ್ ಬೆಂಬಲವನ್ನು ಹೊಂದಿವೆ ಎಂದು ತೋರುತ್ತದೆ. ಇದರೊಂದಿಗೆ ಆಂಟಿ-ರಿಫ್ಲೆಕ್ಟಿವ್ ಡಿಸ್‌ಪ್ಲೇ ಲೇಯರ್‌ ಆಯ್ಕೆಯನ್ನೂ ಸಹ ಪಡೆದುಕೊಂಡಿರಲಿವೆ ಎಂದು ತಿಳಿದುಬಂದಿದೆ.

ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್ ಸರಣಿ ! ಹೇಗಿದೆ ಡಿಸೈನ್? ಫೀಚರ್ಸ್‌ ಏನು?

ಗ್ಯಾಲಕ್ಸಿ ಬುಕ್‌ 4 ಸರಣಿಯ ಲ್ಯಾಪ್‌ಟಾಪ್‌ಗಳು ಇಂಟೆಲ್ ಪ್ರೊಸೆಸರ್‌ಗಳಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಇವು ವಿಂಡೋಸ್ 11 ಓಎಸ್‌ನಲ್ಲಿ ರನ್‌ ಆಗಲಿವೆ. ಅದರಲ್ಲಿ ಸಾಮಾನ್ಯ ಗ್ಯಾಲಕ್ಸಿ ಬುಕ್‌ 4 ಇಂಟೆಲ್ ಕೋರ್ 5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಿದ್ರೆ ಗ್ಯಾಲಕ್ಸಿ ಬುಕ್‌ 4 ಅಲ್ಟ್ರಾ ಇಂಟೆಲ್ ಕೋರ್ 9 ಸಿಪಿಯು ಅನ್ನು ಪ್ಯಾಕ್ ಮಾಡಬಹುದು. ಬೇಸ್ ಗ್ಯಾಲಕ್ಸಿ ಬುಕ್‌ 4 ಹೊರತುಪಡಿಸಿ ಎಲ್ಲಾ ಮಾದರಿಗಳು ಅಮೋಲೆಡ್‌ ಡಿಸ್‌ಪ್ಲೇ ಮತ್ತು ಬ್ಲೂಟೂತ್ ಆವೃತ್ತಿ 5.3 ಸಂಪರ್ಕವನ್ನು ಪಡೆದುಕೊಂಡಿರಲಿವೆ ಎಂದು ತಿಳಿದುಬಂದಿದೆ.

ಈ ಲ್ಯಾಪ್‌ಟಾಪ್‌ಗಳು ಯುಎಸ್‌ಬಿ 3.2 ಪೋರ್ಟ್, ಎರಡು ಥಂಡರ್‌ಬೋಲ್ಟ್ 4 ಪೋರ್ಟ್‌ಗಳು, ಹೆಚ್‌ಡಿಎಮ್‌ಐ, ಮೈಕ್ರೊ ಎಸ್‌ಡಿ ಕಾರ್ಡ್ ರೀಡರ್ ಮತ್ತು ಹೆಡ್‌ಫೋನ್‌ಗಳು ಅಥವಾ ಮೈಕ್ರೊಫೋನ್‌ಗಾಗಿ ಸಂಯೋಜಿತ ಪೋರ್ಟ್ ಅನ್ನು ಸಹ ಹೊಂದಿವೆ. ಇದರೊಂದಿಗೆ ಗ್ರಾಫಿಕ್ಸ್ ವಿವರಗಳನ್ನು ಗಮನಿಸಿದ್ರೆ ಗ್ಯಾಲಕ್ಸಿ ಬುಕ್‌ 4 ಮತ್ತು ಗ್ಯಾಲಕ್ಸಿ ಬುಕ್‌ 4 360 ಇಂಟೆಲ್ ಗ್ರಾಫಿಕ್ಸ್ ಅನ್ನು ಹೊಂದಿರಲಿದ್ದು, ಗ್ಯಾಲಕ್ಸಿ ಬುಕ್‌ 4 ಪ್ರೊ ಮತ್ತು ಗ್ಯಾಲಕ್ಸಿ ಬುಕ್‌ 4 360 ಪ್ರೊ ಇಂಟೆಲ್ ಆರ್ಕ್ ಗ್ರಾಫಿಕ್ಸ್‌ನೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸ್ಯಾಮ್‌ಸಂಗ್‌ನಿಂದ ಹೊಸ ಲ್ಯಾಪ್‌ಟಾಪ್ ಸರಣಿ ! ಹೇಗಿದೆ ಡಿಸೈನ್? ಫೀಚರ್ಸ್‌ ಏನು?

ಇದರೊಂದಿಗೆ ಗ್ಯಾಲಕ್ಸಿ ಬುಕ್‌ 4 ಅಲ್ಟ್ರಾ ಶ್ರೇಣಿಯಲ್ಲಿನ ಟಾಪ್-ಎಂಡ್ ಮಾಡೆಲ್ ಎನ್ವಿಡಿಯಾ ಜಿಫೋರ್ಸ್ 4070 ಜಿಪಿಯು ಬಲದಲ್ಲಿ ಬರಲಿದೆ ಎಂದು ಹೇಳಲಾಗಿದೆ. ಹಾಗೆಯೇ ಅನ್‌ಪ್ಯಾಕ್ಡ್ 2024 ಈವೆಂಟ್ ಜನವರಿ 17, 2024 ರಂದು ಯುಎಸ್‌ ನ ಸ್ಯಾನ್ ಜೋಸ್‌ನಲ್ಲಿ ನಡೆಯಲಿದ್ದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S24 ಸರಣಿಯ ಜೊತೆಗೆ ಗ್ಯಾಲಕ್ಸಿ ಬುಕ್‌ 4 ಸರಣಿಯನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಪ್ರಮುಖ ಮಾಹಿತಿ ಏನೆಂದರೆ ಸ್ಯಾಮ್‌ಸಂಗ್‌ ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಬಹಿರಂಗಗೊಳಿಸಿಲ್ಲ.

Best Mobiles in India

English summary
Samsung is going to unveil new and special style laptops. It is also rumored that these laptops will be officially launched at the Galaxy Unpacked 2024 event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+