Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿ ಲಾಂಚ್‌ಗೆ ದಿನಗಣನೆ: ಫೀಚರ್ಸ್ ಏನು?
ಸ್ಯಾಮ್‌ಸಂಗ್ (Samsung) ಆಗಾಗ್ಗೆ ಹೊಸ ಹೊಸ ಸ್ಮಾರ್ಟ್ ಡಿವೈಸ್‌ಗಳನ್ನು ಅನಾವರಣ ಮಾಡುವ ಮೂಲಕ ಟೆಕ್ ವಲಯದಲ್ಲಿ ದೊಡ್ಡ ಸೌಂಡ್ ಮಾಡುತ್ತಲೇ ಬಂದಿದೆ. ಅದರಲ್ಲೂ ಇತ್ತೀಚೆಗೆ ಎಐ ಅನ್ನು ಕೇಂದ್ರೀಕರಿಸಿಕೊಂಡು ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳನ್ನು ಅನಾವರಣ ಮಾಡಿದ್ದು, ಇವಂತೂ ಜನರು ಹುಬ್ಬೇರಿಸುವಂತೆ ಮಾಡಿವೆ. ಅದರಂತೆ ಈಗ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಸರಣಿ (Samsung Galaxy Book 4 Series) ಭಾರತದ ಕಡೆಗೆ ಸಾಗುತ್ತಿದೆ ಎಂದು ತಿಳಿದುಬಂದಿದೆ. ಐಎಎನ್‌ಎಸ್ ಪ್ರಕಾರ, ಕಂಪನಿಯು ದೇಶದಲ್ಲಿ ಈ ತಿಂಗಳು ಖರೀದಿದಾರರಿಗೆ ಗ್ಯಾಲಕ್ಸಿ ಬುಕ್ 3 ಸರಣಿಯ ಉತ್ತರಾಧಿಕಾರಿಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದು, ಈ ವೇಳೆ ಬುಕ್ 4 ಅಲ್ಟ್ರಾ ಹೊರತುಪಡಿಸಿ, ಉಳಿದ ಮಾದರಿಗಳು ಈ ತಿಂಗಳಲ್ಲೇ ಸೇಲ್‌ಗೆ ಲಭ್ಯ ಆಗಬಹುದು ಅನ್ನೋದನ್ನು ಸಹ ಉಲ್ಲೇಖಿಸಲಾಗಿದೆ.

ಇನ್ನು ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಬುಕ್ 4 ಸರಣಿ ಲ್ಯಾಪ್‌ಟಾಪ್‌ಗಳನ್ನು ಡಿಸೆಂಬರ್ 2023 ರಲ್ಲಿ ಘೋಷಣೆ ಮಾಡಿತ್ತು. ಈ ಎಐ-ಚಾಲಿತ ಪೋರ್ಟಬಲ್ ಡಿವೈಸ್‌ಗಳು ಜನವರಿ 2024 ರಲ್ಲಿ ಕೊರಿಯಾದಲ್ಲಿ ಬಳಕೆದಾರರಿಗೆ ಲಭ್ಯವಿರುತ್ತವೆ ಎಂದು ಕಂಪನಿಯು ಹೇಳಿದಾಗ ಎಲ್ಲರೂ ಭಾರತದಲ್ಲಿ ಯಾವಾಗ ಬರಲಿವೆ ಅನ್ನೋ ಕಾತುರದಲ್ಲಿ ಇದ್ದರು. ಆದರೆ ಕೊನೆಗೂ ಇವು ಭಾರತದ ಕಡೆ ಮುಖ ಮಾಡಿವೆ.
ಹಾಗೆಯೇ ಈ ತಿಂಗಳ ಮಧ್ಯದಲ್ಲಿ ಮಾಡೆಲ್‌ಗಳ ಪೂರ್ವ-ಬುಕಿಂಗ್ ಪ್ರಾರಂಭವಾಗಬಹುದು ಮತ್ತು ಲ್ಯಾಪ್‌ಟಾಪ್‌ಗಳು ಕೊನೆಯ ವಾರದಲ್ಲಿ ಸೇಲ್‌ಗೆ ಮುಕ್ತವಾಗಬಹುದು ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ ಬುಕ್ 4 ಅಲ್ಟ್ರಾ, ಬುಕ್ 4 ಪ್ರೊ ಮತ್ತು ಬುಕ್ 4 ಪ್ರೊ 360 (Galaxy Book 4 Ultra, Book 4 Pro and Book 4 Pro 360) ಅನ್ನು ಹೊಂದಿದೆ. ಆದರೆ ಬುಕ್ 4 ಅಲ್ಟ್ರಾವನ್ನು ಹೊರತುಪಡಿಸಿ, ಉಳಿದ ಮಾಡೆಲ್‌ಗಳು ಈ ತಿಂಗಳಲ್ಲೇ ಸೇಲ್‌ಗೆ ಲಭ್ಯವಾಗಬಹುದು ಎನ್ನುವ ಮಾಹಿತಿ ಇದೆ.

ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಬುಕ್ 4 ಸರಣಿ ಫೀಚರ್ಸ್: ಸ್ಯಾಮ್‌ಸಂಗ್ ಹೊರಡಿಸಿದ ಕಳೆದ ಡಿಸೆಂಬರ್‌ನಲ್ಲಿನ ಪ್ರೆಸ್ ನೋಟ್ ಪ್ರಕಾರ, ಹೊಸ ಲ್ಯಾಪ್‌ಟಾಪ್‌ಗಳು ಇಂಟೆಲಿಜೆಂಟ್ ಚಿಪ್, ಉತ್ತಮ ಡಿಸ್‌ಪ್ಲೇ ಮತ್ತು ದೃಢವಾದ ಭದ್ರತಾ ಫೀಚರ್ಸ್ ಅನ್ನು ಹೊಂದಿದೆ. ಈ ಸರಣಿಯು ಇಂಟೆಲ್ ಕೋರ್ ಅಲ್ಟ್ರಾ 9 (ಬುಕ್ 4 ಅಲ್ಟ್ರಾದಲ್ಲಿ) ಮತ್ತು ಕೋರ್ ಅಲ್ಟ್ರಾ 7 (ಪ್ರೊ ಟ್ರಿಮ್‌ಗಳಲ್ಲಿ) ಸಿಪಿಯು ಮತ್ತು ಹೊಸ ನ್ಯೂರಲ್ ಪ್ರೊಸೆಸಿಂಗ್ ಯುನಿಟ್ ಅನ್ನು ಹೊಂದಿರಲಿದ್ದು, ಇಂಟೆಲ್‌ನ ಉದ್ಯಮದ ಮೊದಲ ಎಐ ಪಿಸಿ ವೇಗವರ್ಧಕ ಕಾರ್ಯದ ಒಂದು ಭಾಗವಾಗಿದೆ ಎನ್ನಲಾಗಿದೆ.
ಎನ್ವಿಡಿಯಾ ಜಿಫೋರ್ಸ್ ಆರ್‌ಟಿಎಕ್ಸ್ 4070 ಲ್ಯಾಪ್‌ಟಾಪ್ ಜಿಪಿಯು ಹೊಂದಿರುವ ಅಲ್ಟ್ರಾ ಮಾಡೆಲ್‌ಗಳು ಆರ್‌ಟಿಎಕ್ಸ್ -ಆಪ್ಟಿಮೈಸ್ಡ್ ಸ್ಟೇಬಲ್ ಡಿಫ್ಯೂಷನ್ ಅನ್ನು ಬಳಸಿಕೊಂಡು ಪ್ರಾಂಪ್ಟ್‌ಗಳ ಮೂಲಕ ಇಮೇಜ್ ನಿರ್ಮಾಣ ಸಾಮರ್ಥ್ಯಗಳನ್ನು ನೀಡುತ್ತವೆ. ಈ ಡಿವೈಸ್‌ಗಳು ಡೈನಾಮಿಕ್ ಅಮೋಲೆಡ್ 2X ಟಚ್‌ಸ್ಕ್ರೀನ್‌ನೊಂದಿಗೆ 400ನಿಟ್ಸ್ ಬ್ರೈಟ್‌ನೆಸ್ ಮತ್ತು 120Hz VRR ಸಾಮರ್ಥ್ಯ ಪಡೆದುಕೊಂಡಿವೆ. ಇದರೊಂದಿಗೆ ಆಡಿಯೊಗಾಗಿ, ಈ ಮಾಡೆಲ್‌ಗಳು ಡಾಲ್ಬಿ ಅಟ್ಮಾಸ್‌ನೊಂದಿಗೆ AKG-ಟ್ಯೂನ್ಡ್ ಕ್ವಾಡ್ ಸ್ಪೀಕರ್ ಆಯ್ಕೆ ಪಡೆದಿವೆ.

ಹಾಗೆಯೇ ಈ ಡಿವೈಸ್‌ಗಳು 11 ಹೋಮ್‌ನಲ್ಲಿ ಕೆಲಸ ಮಾಡಲಿದ್ದು, ಎಲ್ಲಾ ಮಾಡೆಲ್‌ಗಳು ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಹೊಂದಿವೆ. ಕನೆಕ್ಟಿವಿಟಿ ವಿಷಯದಲ್ಲಿ ಎಲ್ಲಾ ಮಾಡೆಲ್‌ಗಳು ವೈ ಫೈ 6E, ಬ್ಲೂಟೂತ್ ಆವೃತ್ತಿ 5.3, ಎರಡು ಥಂಡರ್ಬೋಲ್ಟ್ 4 (2), ಯುಎಸ್‌ಬಿ ಟೈಪ್ ಎ, ಹೆಚ್‌ಡಿಎಮ್‌ಎಐ 2.1 ಪೋರ್ಟ್, ಮೈಕ್ರೊ ಎಸ್‌ಡಿ ಸ್ಲಾಟ್ ಮತ್ತು ಹೆಡ್‌ಫೋನ್ ಜ್ಯಾಕ್ ಆಯ್ಕೆ ಪಡೆದಿರಲಿವೆ.


Click it and Unblock the Notifications








