Samsung: ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಲಾಂಚ್! ಅಮೋಲೆಡ್ 2X ಆಂಟಿ-ಗ್ಲೇರ್ ಡಿಸ್‌ಪ್ಲೇ, ಬೆಲೆ ಎಷ್ಟು?
ಸ್ಯಾಮ್‌ಸಂಗ್ (Samsung) ಸ್ಮಾರ್ಟ್‌ಫೋನ್‌ಗಳು ಹೆಚ್ಚು ಫೇಮಸ್ ಆಗಿವೆಯೋ ಅಷ್ಟೇ ಇತರೆ ಡಿವೈಸ್‌ಗಳು ಸಹ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಲ್ಯಾಪ್‌ಟಾಪ್ ಅನ್ನು ಲಾಂಚ್ ಮಾಡಲಾಗಿದ್ದು, ಮೂರು ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇದೆ.
ಹೌದು, ಸ್ಯಾಮ್‌ಸಂಗ್ ಇಂಡಿಯಾ ಭಾರತದಲ್ಲಿ ಗ್ಯಾಲಕ್ಸಿ ಬುಕ್ 4 (Samsung Galaxy Book 4) ಅನ್ನು ಘೋಷಣೆ ಮಾಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಅಲ್ಟ್ರಾ, ಗ್ಯಾಲಕ್ಸಿ ಬುಕ್ 4 ಪ್ರೊ ಮತ್ತು ಗ್ಯಾಲಕ್ಸಿ ಬುಕ್ 4 ಪ್ರೊ 360 ಅನ್ನು ಲಾಂಚ್ ಮಾಡಿದ ಬಳಿಕ ಈ ಲ್ಯಾಪ್‌ಟಾಪ್ ಅನ್ನು ಅನಾವರಣ ಮಾಡಲಾಗಿದೆ. ಈ ಡಿವೈಸ್ ಸಂಪೂರ್ಣ ಲೋಹದ ಬಾಡಿಯಿಂದ ನಿರ್ಮಾಣ ಆಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಡಿಸ್‌ಪ್ಲೇ ಮಾಹಿತಿ: ಈ ಲ್ಯಾಪ್‌ಟಾಪ್ 16 ಇಂಚಿನ ಫುಲ್‌ಹೆಚ್‌ಡಿ ಡೈನಾಮಿಕ್ ಅಮೋಲೆಡ್ 2X ಆಂಟಿ-ಗ್ಲೇರ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಪ್ರೊಸೆಸರ್ ವಿವರ: ಈ ಲ್ಯಾಪ್‌ಟಾಪ್ ವಿವಿಧ ವೇರಿಯಂಟ್ ನಲ್ಲಿ ಲಭ್ಯ ಇದೆ. ಇಂಟೆಲ್ ಕೋರ್ 5 ಪ್ರೊಸೆಸರ್ 120U (1.4 GHz ವರೆಗೆ 5.0 GHz 12 MB ಸ್ಮಾರ್ಟ್ ಸ್ಟೋರೇಜ್) ಹಾಗೂ ಕೋರ್ 7 ಪ್ರೊಸೆಸರ್ 150U (1.8 GHz ವರೆಗೆ 5.4 GHz 12 MB ಸ್ಮಾರ್ಟ್ ಸ್ಟೋರೇಜ್) ನಲ್ಲಿ ಕಾರ್ಯನಿರ್ವಹಿಸಲಿದ್ದು, ಇಂಟೆಲ್ ಗ್ರಾಫಿಕ್ಸ್ ಬಲ ಪಡೆದುಕೊಂಡಿದೆ. ಹಾಗೆಯೇ ಈ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ 11 ಹೋಮ್ ಅನ್ನು ಕಾಣಬಹುದು. ಇದರ ಜೊತೆಗೆ 16GB LPDDR4x RAM, 512 GB NVMe SSD ಇಂಟರ್ ಸ್ಟೋರೇಜ್ ನಲ್ಲಿ ಈ ಲ್ಯಾಪ್‌ಟಾಪ್ ಲಭ್ಯ ಇದೆ.

ನುಮೇರಿಕ್ ಕೀ ಕ್ಲಿಕ್‌ಪ್ಯಾಡ್‌ನೊಂದಿಗೆ ಪ್ರೊ ಕೀಬೋರ್ಡ್ ಆಯ್ಕೆ ನೀಡಲಾಗಿದ್ದು, ಡಾಲ್ಬಿ ಅಟ್ಮಾಸ್ ಜೊತೆಗೆ ಸ್ಟೀರಿಯೋ ಸ್ಪೀಕರ್‌ಗಳು (2 W x 2) ಅನ್ನು ಈ ಲ್ಯಾಪ್‌ಟಾಪ್‌ನಲ್ಲಿ ಕಾಣಬಹುದಾಗಿದೆ. ಹಾಗೆಯೇ ಇನ್‌ಬಿಲ್ಟ್ ಡ್ಯುಯಲ್ ಅರೇ ಡಿಜಿಟಲ್ ಮೈಕ್ ಜೊತೆಗೆ 720p ಹೆಚ್‌ಡಿ ಕ್ಯಾಮೆರಾದ ಸೌಲಭ್ಯ ಸಹ ಲಭ್ಯ.
ಉಳಿದಂತೆ ಲ್ಯಾಪ್‌ಟಾಪ್ 1 ಹೆಚ್‌ಡಿಎಮ್‌ಐ, 2 ಯುಎಸ್‌ಬಿ ಟೈಪ್-ಸಿ, 2 ಯುಎಸ್‌ಬಿ 3.2, ಮೈಕ್ರೋ ಎಸ್‌ಡಿ ಮಲ್ಟಿ-ಮೀಡಿಯಾ ಕಾರ್ಡ್ ರೀಡರ್, 1 ಹೆಡ್‌ಫೋನ್ ಔಟ್/ಮೈಕ್-ಇನ್ ಕಾಂಬೊ, 1 RJ45 (LAN) ಜೊತೆಗೆ ಬ್ಲೂಟೂತ್ ಆವೃತ್ತಿ v5.2, ವೈ-ಫೈ 6 ಕನೆಕ್ಟಿವಿಟಿ ಸೌಲಭ್ಯ ಇದೆ. ಪ್ರಮುಖವಾಗಿ ಈ ಲ್ಯಾಪ್‌ಟಾಪ್ 54 Wh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 45 W ಯುಎಸ್‌ಬಿ ಟೈಪ್-ಸಿ ಅಡಾಪ್ಟರ್ ಚಾರ್ಜರ್ ಬೆಂಬಲ ಪಡೆದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಬೆಲೆ ಮತ್ತು ಲಭ್ಯತೆ: ಈ ಲ್ಯಾಪ್‌ಟಾಪ್ ಮೂರು ವೇರಿಯಂಟ್‌ನಲ್ಲಿ ಲಭ್ಯ ಇದ್ದು, ಕೋರ್ 5, 8GB RAM, 512GB SSD ವೇರಿಯಂಟ್‌ಗೆ 70,990ರೂ.ಗಳು, ಕೋರ್ 5, 16GB RAM, 512GB SSD ವೇರಿಯಂಟ್‌ಗೆ 75,990 ರೂ.ಗಳು ಹಾಗೂ ಕೋರ್ 7, 16GB RAM, 512GB SSD ವೇರಿಯಂಟ್‌ಗೆ 85,990 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಲ್ಯಾಪ್‌ಟಾಪ್ ಗ್ರೇ ಮತ್ತು ಸಿಲ್ವರ್ ಬಣ್ಣಗಳಲ್ಲಿ ಲಭ್ಯ ಇದೆ.

ಈ ಲ್ಯಾಪ್‌ಟಾಪ್ ಅನ್ನು ಸ್ಯಾಮ್‌ಸಂಗ್‌ನ ಅಧಿಕೃತ ಸೈಟ್‌ನಲ್ಲಿ ಖರೀದಿ ಮಾಡಬಹುದಾಗಿದ್ದು, ರಿಟೇಲರ್ ಸ್ಟೋರ್‌ಗಳಲ್ಲೂ ಲಭ್ಯ ಇರಲಿದೆ. ಹಾಗೆಯೇ ಕೊಡುಗೆ ಸಹ ಇದ್ದು, 5000 ಮೌಲ್ಯದ ಕ್ಯಾಶ್‌ಬ್ಯಾಕ್ ಅಥವಾ 4000 ರೂ.ವರೆಗೆ ಬೋನಸ್ ಅನ್ನು ಅಪ್‌ಗ್ರೇಡ್ ಸೌಲಭ್ಯ ಸಹ ಇದೆ. ಇದರ ಜೊತೆಗೆ 24 ತಿಂಗಳವರೆಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಇದ್ದು,
ವಿದ್ಯಾರ್ಥಿಗಳು ಏನಾದರೂ ಈ ಡಿವೈಸ್ ಖರೀದಿ ಮಾಡಲು ಮುಂದಾದರೆ 10% ರಿಯಾಯಿತಿ ಸಿಗಲಿದೆ.


Click it and Unblock the Notifications








