Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 3 ಸರಣಿ ಬಿಡುಗಡೆ; ಬೆಲೆ ಎಷ್ಟು?..ಫೀಚರ್ಸ್‌ ಏನು?

ಸ್ಯಾಮ್‌ಸಂಗ್‌ ಸಂಸ್ಥೆಯು ಪ್ಯಾರಿಸ್‌ನಲ್ಲಿ ನಡೆದ ತನ್ನ ಬಹುನಿರೀಕ್ಷಿತ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅನ್‌ಪ್ಯಾಕ್ಡ್‌ (Samsung Galaxy Unpacked 2024) ಕಾರ್ಯಕ್ರಮದಲ್ಲಿ ಸಂಸ್ಥೆಯು ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 6 ಹಾಗೂ ಗ್ಯಾಲಕ್ಸಿ Z ಫ್ಲಿಪ್‌ 6 ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 3 ಸರಣಿಯನ್ನು (Samsung Galaxy Buds 3 Series) ಬಿಡುಗಡೆ ಮಾಡಿದೆ. ಈ ಸರಣಿಯು ಗ್ಯಾಲಕ್ಸಿ AI ಸೌಲಭ್ಯ ಪಡೆದಿದ್ದು, ಜೊತೆಗೆ ಅಡಾಪ್ಟಿವ್ EQ ಹಾಗೂ ANC ಸಪೋರ್ಟ್‌ ಒಳಗೊಂಡಿದೆ.

ಹೌದು, ಸ್ಯಾಮ್‌ಸಂಗ್‌ ಕಂಪೆನಿ ತನ್ನ ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 3 ಸರಣಿಯನ್ನು ಲಾಂಚ್ ಮಾಡಿದ್ದು, ಈ ಸರಣಿಯು ಗ್ಯಾಲಕ್ಸಿ ಬಡ್ಸ್‌ 3 (Galaxy Buds 3) ಹಾಗೂ ಗ್ಯಾಲಕ್ಸಿ ಬಡ್ಸ್‌ 3 ಪ್ರೊ (Galaxy Buds 3 Pro) ಇಯರ್‌ಬಡ್ಸ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಈ ಸರಣಿಯು ವಿಶೇಷ Super-Wideband ಕಾಲ್‌ ಫೀಚರ್ ಆಯ್ಕೆಯನ್ನು ಪಡೆದಿದ್ದು, ಗದ್ದಲದ ಸನ್ನಿವೇಶಗಳಲ್ಲಿಯೂ ಸ್ಪಷ್ಟ ಧ್ವನಿ ಕೇಳಲು ಇದು ನೆರವಾಗುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 3 ಸರಣಿ ಬಿಡುಗಡೆ; ಬೆಲೆ ಎಷ್ಟು?.ಫೀಚರ್ಸ್‌ ಏನು

ಅಲ್ಲದೇ ಸ್ಯಾಮ್‌ಸಂಗ್‌ನ ಈ ಗ್ಯಾಲಕ್ಸಿ ಬಡ್ಸ್‌ 3 ಸರಣಿಯು ಎರಡು ಬಣ್ಣಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ ಸಿಲ್ವರ್‌ ಮತ್ತು ವೈಟ್‌ ಕಲರ್‌ ಆಯ್ಕೆಯಲ್ಲಿ ಇವೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ಗಳ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಗ್ಯಾಲಕ್ಸಿ ಬಡ್ಸ್‌ 3 ಸರಣಿಯು ಗ್ಯಾಲಕ್ಸಿ AI (Galaxy AI) ಸೌಲಭ್ಯ ಪಡೆದಿದ್ದು, ಇದು ಸಂವಹನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಬಳಕೆದಾರರು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್‌ 6 ಅಥವಾ ಗ್ಯಾಲಕ್ಸಿ ಫ್ಲಿಪ್‌ 6 ಫೋನ್‌ನಲ್ಲಿ ಲಿಸನಿಂಗ್ ಮೋಡ್‌ನಲ್ಲಿ ಇಂಟರ್‌ಪ್ರಿಟರ್ ಆಯ್ಕೆಯನ್ನು ಆಕ್ಟಿವ್ ಮಾಡಬಹುದು. ಅಲ್ಲದೇ ವಾಯ್ಸ್ ಕಮಾಂಡ್ ಆಯ್ಕೆಯು ಬಳಕೆದಾರರಿಗೆ ಸರಳ ಧ್ವನಿ ಸೂಚನೆಗಳ ಮೂಲಕ ಸಂಗೀತ ಪ್ಲೇಬ್ಯಾಕ್ ಅನ್ನು ನಿಯಂತ್ರಿಸಲು ಅನುಮತಿಸುತ್ತದೆ.

ಇನ್ನು ಈ ಇಯರ್‌ಬಡ್‌ಗಳು ಅಡಾಪ್ಟಿವ್ EQ ಮತ್ತು ಅಡಾಪ್ಟಿವ್ ANC ಸೌಲಭ್ಯಗಳೊಂದಿಗೆ ಎಂಟ್ರಿ ಕೊಟ್ಟಿವೆ. ಇದು ರಿಯಲ್‌ ಟೈಮ್‌ನಲ್ಲಿ ಆಂತರಿಕ ಮತ್ತು ಬಾಹ್ಯ ಶಬ್ದಗಳನ್ನು ವಿಶ್ಲೇಷಿಸುವ ಮೂಲಕ ವಾಯಿಸ್‌ ಗುಣಮಟ್ಟ ಮತ್ತು ಶಬ್ದ ರದ್ದತಿಯನ್ನು ಹೆಚ್ಚಿಸುತ್ತದೆ. ಗ್ಯಾಲಕ್ಸಿ ಬಡ್ಸ್‌ 3 ಪ್ರೊ ಡಿವೈಸ್‌ ಅಡಾಪ್ಟಿವ್ ನಾಯ್ಸ್ ಕಂಟ್ರೋಲ್, ಸೈರನ್ ಡಿಟೆಕ್ಟ್ ಮತ್ತು ವಾಯ್ಸ್ ಡಿಟೆಕ್ಟ್ ಕಾರ್ಯಗಳನ್ನು ಹೊಂದಿದೆ.

ಗ್ಯಾಲಕ್ಸಿ ಬಡ್ಸ್‌ 3 ಪ್ರೊ ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಕೆನಾಲ್ ಮಾದರಿಯ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಸ್ಯಾಮ್‌ಸಂಗ್‌ನ ಕಂಪ್ಯೂಟೇಶನಲ್ ರಚನೆಯು ಗ್ಯಾಲಕ್ಸಿ ಬಡ್ಸ್‌ 3 ಸರಣಿಗೆ ಆರಾಮದಾಯಕವಾದ ಫಿಟ್ ಅನ್ನು ಒದಗಿಸುತ್ತದೆ. ಅಲ್ಲದೇ ಗ್ಯಾಲಕ್ಸಿ ಬಡ್ಸ್‌ 3 ಪ್ರೊ ಡಿವೈಸ್‌ ಅತ್ಯುತ್ತಮ ಗುಣಮಟ್ಟದ ಧ್ವನಿಗಾಗಿ ಪ್ಲ್ಯಾನರ್ ಟ್ವೀಟರ್‌ನೊಂದಿಗೆ 2-ವೇ ಸ್ಪೀಕರ್‌ಗಳನ್ನು ವರ್ಧಿಸಿದೆ ಮತ್ತು ಸ್ಫಟಿಕ-ಸ್ಪಷ್ಟ ಆಡಿಯೊಗಾಗಿ ಡ್ಯುಯಲ್ ಆಂಪ್ಲಿಫೈಯರ್‌ (Dual Amplifiers) ಸೌಲಭ್ಯ ಹೊಂದಿದೆ.

ಬೆಲೆ ಮತ್ತು ಲಭ್ಯತೆ ಮಾಹಿತಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌ 3 ಬೆಲೆಯು - 14,999ರೂ. ಆಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌ 3 ಪ್ರೊ ಬೆಲೆಯು - 19,999ರೂ. ಎನ್ನಲಾಗಿದೆ.
ಗ್ಯಾಲಕ್ಸಿ ಬಡ್ಸ್‌ 3 ಸರಣಿಯು ಸಿಲ್ವರ್‌ ಮತ್ತು ವೈಟ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಅಂದಹಾಗೆ ಸದ್ಯ ಮುಂಗಡ ಬುಕಿಂಗ್‌ಗೆ ಲಭ್ಯ ಇದ್ದು, ಇದೇ ಜುಲೈ 24 ರಂದು ಖರೀದಿಗೆ ಲಭ್ಯ ಆಗಲಿವೆ.

Best Mobiles in India

English summary
Samsung Galaxy Buds 3 Series launched in India. Check price, offer, pre order and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+