Home
ಸುದ್ದಿಜಾಲ

Samsung ನ ಈ ಫೋನ್ ಕೇವಲ 6,499ರೂ. ಗೆ ಲಭ್ಯ! 64GB ROM..5000mAh ಬ್ಯಾಟರಿ

ಸ್ಯಾಮ್‌ಸಂಗ್‌ ಫೋನ್‌ಗಳು (Samsung phone) ಸಾಮಾನ್ಯವಾಗಿ ಹೆಚ್ಚಿನ ಬೆಲೆ ಹೊಂದಿರುತ್ತವೆ. ಆದರೆ ಈ ಬೆಲೆಗೆ ಮಿಗಿಲಾದ ಫೀಚರ್ಸ್‌ ಅನ್ನು ನೀಡುತ್ತಿರುವುದು ಈ ಕಂಪೆನಿಯ ವಿಶೇಷತೆ. ಈ ಕಾರಣಕ್ಕೆ ಸ್ಮಾರ್ಟ್‌ಫೋನ್‌ ಗಳ ವಿಭಾಗದಲ್ಲಿ ಈ ಸ್ಯಾಮ್‌ಸಂಗ್‌ ಫೋನ್‌ಗಳಿಗೆ ಬಹಳ ಬೇಡಿಕೆ ಇದೆ. ಭಾರತದಲ್ಲಂತೂ ಈ ಫೋನ್‌ಗಳ ದೊಡ್ಡ ಮಾರುಕಟ್ಟೆಯೇ ಇದೆ.

ಹೌದು, ಸ್ಯಾಮ್‌ಸಂಗ್‌ ಫೋನ್‌ಗಳ ಕಾರ್ಯಕ್ಷಮತೆ ಬಳಕೆದಾರರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದರ ಭಾಗವಾಗಿಯೇ ಈಗ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 (SAMSUNG Galaxy F04) ಸ್ಮಾರ್ಟ್‌ಫೋನ್‌ ಅನ್ನು ಕೇವಲ 6,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ, ಇಷ್ಟೇ ಅಲ್ಲದೆ ಇನ್ನೂ ಅಗ್ಗದ ಬೆಲೆಗೆ ಖರೀದಿ ಮಾಡಲು ಬ್ಯಾಂಕ್‌ ಅಫರ್‌ (Bank offer) ಸಹ ನೀಡಲಾಗಿದೆ. ಹಾಗಿದ್ರೆ, ಈ ಫೋನ್‌ ಅನ್ನು ಇಷ್ಟು ಕಡಿಮೆ ಬೆಲೆಗೆ ಎಲ್ಲಿ ಖರೀದಿ ಮಾಡೋದು?, ಇದರ ಮೂಲಕ ದರ ಎಷ್ಟು?, ಫೀಚರ್ಸ್‌ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

Samsung ನ ಈ ಫೋನ್ ಕೇವಲ 6,499ರೂ.ಗೆ ಲಭ್ಯ! 64GB ROM..5000mAh ಬ್ಯಾಟರಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 : ಈ ಫೋನ್‌ ಅನ್ನು ನೀವು ಈ ಬೆಲೆಗೆ ಫ್ಲಿಪ್‌ಕಾರ್ಟ್‌ ಮೂಲಕ ಖರೀದಿ ಮಾಡಬಹುದಾಗಿದೆ. ಬಿಗ್ ಬಿಲಿಯನ್ ಡೇ ಸೇಲ್ (flipkart Big Billion Day Sale) ಅಡಿಯಲ್ಲಿ ಈ ಫೋನ್‌ಗೆ ದೊಡ್ಡ ಮಟ್ಟದ ಆಫರ್‌ ನೀಡಲಾಗಿದೆ. ಅಂದರೆ ಇದರ ಸಾಮಾನ್ಯ ದರ 1,1000 ರೂ.ಗಳಾಗಿದ್ದು, ಆಫರ್‌ ಮೂಲಕ ಈಗ 6,499 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರೊಂದಿಗೆ ನೀವು ಆಕ್ಸಿಸ್‌ ಬ್ಯಾಂಕ್‌ (Axis Bank) ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಇನ್ನೂ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಫೀಚರ್ಸ್‌: ಈ ಫೋನ್‌ ಇಷ್ಟು ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದೇನೋ ಸತ್ಯ. ಆದರೆ, ಈ ಬೆಲೆಗೆ ಫೀಚರ್ಸ್‌ ಯೋಗ್ಯವೇ ಎಂದು ತಿಳಿಯುವುದು ಗ್ರಾಹಕರಿಗೆ ಅಗತ್ಯವಾದ ಕೆಲಸವಾಗಿದೆ. ಅದರಂತೆ ಈ ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 1600 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಪ್ರೊಸೆಸರ್ ಸಾಮರ್ಥ್ಯ: ಈ ಫೋನ್ ಮೀಡಿಯಾಟೆಕ್ ಹಿಲಿಯೊ P35 ಪ್ರೊಸೆಸರ್‌ (MediaTek Helio P35 processor) ಬಲ ಪಡೆದಿಕೊಂಡಿದ್ದು, ಆಂಡ್ರಾಯ್ಡ್ 12 ಓಎಸ್‌ ಈ ಫೋನ್‌ ಅನ್ನು ರನ್‌ ಮಾಡಲಿದೆ. ಇದರೊಂದಿಗೆ 4GB RAM ಹಾಗೂ 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಈ ಫೋನ್‌ ಕಾಣಿಸಿಕೊಂಡಿದೆ. ಆದರೂ ಸಹ ನೀವು ಎಸ್‌ಡಿ ಕಾರ್ಡ್‌ ಬಳಕೆ ಮಾಡಿಕೊಂಡು 1TB ವರೆಗೆ ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಕ್ಯಾಮೆರಾ ರಚನೆ: ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ (f/2.2 ಅಪರ್ಚರ್) + 2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, ಇದು ಆಟೋ ಫೋಕಸ್, ಹೈಪರ್ಲ್ಯಾಪ್ಸ್, ಪನೋರಮಾ, ಫೋಟೋ, ಪೋರ್ಟ್ರೇಟ್ ಕ್ಯಾಮೆರಾ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

Samsung ನ ಈ ಫೋನ್ ಕೇವಲ 6,499ರೂ.ಗೆ ಲಭ್ಯ! 64GB ROM..5000mAh ಬ್ಯಾಟರಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಬ್ಯಾಟರಿ ಹಾಗೂ ಇತರೆ: ಬ್ಯಾಟರಿ ವಿಚಾರದಲ್ಲಂತೂ ಸ್ಯಾಮ್‌ಸಂಗ್‌ ಫೋನ್‌ಗಳು ಒಂದು ಹೆಜ್ಜೆ ಮುಂದೆ ಇರುತ್ತವೆ. ಅದರಂತೆ ಈ ಫೋನ್ 5000mAh ಸಾಮರ್ಥ್ಯ್ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದನ್ನು ಚಾರ್ಜ್ ಮಾಡಲು ಟೈಪ್-ಸಿ ಚಾರ್ಜಿಂಗ್ ಸಾಕೆಟ್ ಆಯ್ಕೆಯನ್ನು ನೀಡಲಾಗಿದೆ. ಉಳಿದಂತೆ 4G, 3G, 2G ನೆಟ್‌ವರ್ಕ್‌ ಬೆಂಬಲ, ಬ್ಲೂಟೂತ್‌ ಆವೃತ್ತಿ v5.0, ವೈ ಫೈ ಆವೃತ್ತಿ 802.11, ಮಿನಿ ಹೆಚ್‌ಡಿಎಮ್‌ಐ ಪೋರ್ಟ್, ಆಡಿಯೋ ಜ್ಯಾಕ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಫೀಚರ್ಸ್‌ ಆಯ್ಕೆ ನೀಡಲಾಗಿದೆ.

Best Mobiles in India

English summary
Samsung Galaxy F04 smartphone can be bought for just Rs 6499, besides this, a bank offer has also been given to buy it at an even cheaper price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+