Home
ಸುದ್ದಿಜಾಲ

ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ F12 ಫೋನ್ ಫಸ್ಟ್‌ ಸೇಲ್!..ಬಜೆಟ್‌ ಪ್ರೈಸ್‌ಟ್ಯಾಗ್!

ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆ ಸ್ಯಾಮ್‌ಸಂಗ್ ಹೊಸದಾಗಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ F02s ಮತ್ತು ಗ್ಯಾಲಕ್ಸಿ F12 ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಗ್ರಾಹಕರನ್ನು ಆಕರ್ಷಿಸಿವೆ. ಇವುಗಳ ಪೈಕಿ ಗ್ಯಾಲಕ್ಸಿ F12 ಇಂದು ಮಧ್ಯಾಹ್ನ 12ರಂದು ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹಾಗೂ ಅಧಿಕೃತ ಸ್ಯಾಮ್‌ಸಂಗ್ ವೆಬ್‌ಸೈಟ್ ಮೂಲಕ ಫಸ್ಟ್‌ ಸೇಲ್ ಆರಂಭಿಸಲಿದೆ. 4GB RAM + 64GB ಆಂತರೀಕ ಸ್ಟೋರೇಜ್‌ನ ಬೇಸ್ ವೇರಿಯಂಟ್‌ನ ಆರಂಭಿಕ ಬೆಲೆಯು 10,999ರೂ. ಆಗಿದೆ.

ಸಾಮರ್ಥ್ಯದ

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಹೊಸ ಗ್ಯಾಲಕ್ಸಿ F12 ಸ್ಮಾರ್ಟ್‌ಫೋನ್‌ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್ ನಲ್ಲಿ ಇಂದು ಮೊದಲ ಮಾರಾಟ ಶುರು ಮಾಡಲಿದೆ. ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಕ್ವಾಡ್‌ ರಿಯರ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಹಾಗೆಯೇ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F02s ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗ್ಯಾಲಕ್ಸಿ F12- ಡಿಸ್‌ಪ್ಲೇ ರಚನೆ

ಗ್ಯಾಲಕ್ಸಿ F12- ಡಿಸ್‌ಪ್ಲೇ ರಚನೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ F12 ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, ಇದು TFT ಇನ್ಫಿನಿಟಿ-ವಿ-ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ ರೀಫ್ರೇಶ್‌ ರೇಟ್‌ 90Hz ಆಗಿದೆ. ವಿಡಿಯೋ ವೀಕ್ಷಣೆಗೆ ಹಾಗೂ ಗೇಮಿಂಗ್‌ಗೆ ಪೂರಕವಾಗಿದೆ.

ಗ್ಯಾಲಕ್ಸಿ F12- ಪ್ರೊಸೆಸರ್‌ ಸಾಮರ್ಥ್ಯ

ಗ್ಯಾಲಕ್ಸಿ F12- ಪ್ರೊಸೆಸರ್‌ ಸಾಮರ್ಥ್ಯ

ಸ್ಯಾಮ್‌ಸಂಗ್ ಗ್ಯಾಲಕ್ಸಿ F12 ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 450 ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಓಎಸ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM + 64GB ಮತ್ತು 4GB RAM + 128GB ಸ್ಟೋರೇಜ್ ವೇರಿಯೆಂಟ್‌ ಆಯ್ಕೆಗಳನ್ನು ಹೊಂದಿದೆ. ಇನ್ನು ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೂ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶವನ್ನು ಇದು ಒಳಗೊಂಡಿದೆ.

ಗ್ಯಾಲಕ್ಸಿ F12- ಕ್ಯಾಮೆರಾ ಸೆನ್ಸಾರ್‌

ಗ್ಯಾಲಕ್ಸಿ F12- ಕ್ಯಾಮೆರಾ ಸೆನ್ಸಾರ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F12 ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ ನೊಂದಿಗೆ 48 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾವು f/2.2 ಅಪರ್ಚರ್‌ನೊಂದಿಗೆ 5 ಮೆಗಾ ಪಿಕ್ಸೆಲ್ ಸೆನ್ಸಾರ್, ಅಲ್ಟ್ರಾ-ವೈಡ್-ಆಂಗಲ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರ್‌ ಇದ್ದು, f/2.2 ಅಪರ್ಚರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ವಾಟರ್‌ಡ್ರಾಪ್ ಸ್ಕೈಲ್‌ ನಾಚ್ ಇದೆ.

ಗ್ಯಾಲಕ್ಸಿ F12- ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಗ್ಯಾಲಕ್ಸಿ F12- ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ F12 ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 15W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಈ ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ. ಬೋರ್ಡ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಇದೆ.

ಬೆಲೆ ಎಷ್ಟು, ಆಫರ್ ಹಾಗೂ ಲಭ್ಯತೆ

ಬೆಲೆ ಎಷ್ಟು, ಆಫರ್ ಹಾಗೂ ಲಭ್ಯತೆ

ಸ್ಯಾಮ್‌ಸಂಗ್ ಕಂಪನಿಯ ಹೊಸ ಗ್ಯಾಲಕ್ಸಿ F12 ಮತ್ತು ಗ್ಯಾಲಕ್ಸಿ F02s ಭಾರತದಲ್ಲಿ ಬಿಡುಗಡೆ ಆಗಿದ್ದು, ಗ್ರಾಹಕರನ್ನು ಆಕರ್ಷಿಸಿವೆ. ಇವುಗಳಲ್ಲಿ ಗ್ಯಾಲಕ್ಸಿ F12 ಫೋನಿನ 4GB RAM + 64GB ಸ್ಟೋರೇಜ್ ವೇರಿಯಂಟ್ ದರವು 10,999ರೂ. ಆಗಿದೆ. ಅದೇ ರೀತಿ 4GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 11,999ರೂ.ಗಳಾಗಿದೆ. ಇನ್ನು ಈ ಫೋನ್ ಏಪ್ರಿಲ್ 12(ಇಂದು) ರಂದು ಫಸ್ಟ್‌ ಸೇಲ್ ಕಾಣಲಿದ್ದು, ಸೆಲೆಸ್ಟಿಯಲ್ ಬ್ಲ್ಯಾಕ್, ಸೀ ಗ್ರೀನ್ ಮತ್ತು ಸ್ಕೈ ಬ್ಲೂ ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Samsung Galaxy F12 First Sale Today Via Flipkart: Price Offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+