ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಲಗ್ಗೆ ಇಡಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F12 ಫೋನ್!

|

ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಗ್ಯಾಲಕ್ಸಿ M ಮತ್ತು ಗ್ಯಾಲಕ್ಸಿ A ಸರಣಿಯಲ್ಲಿ ಹಲವು ಬಜೆಟ್‌ ದರದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಆ ನಂತರ ಇತ್ತೀಚಿಗಷ್ಟೆ ನೂತನವಾಗಿ ಗ್ಯಾಲಕ್ಸಿ F ಸರಣಿಯಲ್ಲಿ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಅದರ ಬೆನ್ನಲ್ಲೇ ಇದೀಗ ಸಂಸ್ಥೆಯು F ಸರಣಿಯಲ್ಲಿ ಮತ್ತೆ ಹೊಸದಾಗಿ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಜ್ಜಾಗಿದೆ.

ಗ್ಯಾಲಕ್ಸಿ F12

ಹೌದು, ಸ್ಯಾಮ್‌ಸಂಗ್ ಕಂಪನಿಯು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ F ಸರಣಿಯಲ್ಲಿ ಗ್ಯಾಲಕ್ಸಿ F12 ಅಥವಾ ಗ್ಯಾಲಕ್ಸಿ F12s ಹೆಸರಿನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸೂಚನೆ ಹೊರಹಾಕಿದೆ. ಬರಲಿರುವ ಈ ನೂತನ ಸ್ಮಾರ್ಟ್‌ಫೋನ್ ಸಹ ಬಜೆಟ್‌ ಪ್ರೈಸ್‌ಟ್ಯಾಗ್‌ ಅನ್ನು ಪಡೆದಿರಲಿದೆ ಎನ್ನಲಾಗುತ್ತಿದ್ದು, ಆಕರ್ಷಕ ಫೀಚರ್ಸ್‌ಗಳನ್ನು ಈ ಫೋನ್ ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಗ್ಯಾಲಕ್ಸಿ M21

ಸ್ಯಾಮ್‌ಸಂಗ್ ಗ್ಯಾಲಕ್ಸಿ F12 ಫೋನ್‌ ಬಹುತೇಕ ಗ್ಯಾಲಕ್ಸಿ M21 ಫೋನಿನ ಫೀಚರ್ಸ್‌ಗಳನ್ನು ಹೋಲುವಂತಹ ಸಾಧ್ಯತೆಗಳು ಇರಲಿವೆ ಎನ್ನಲಾಗಿದೆ. ಗ್ಯಾಲಕ್ಸಿ M21 ಎಕ್ಸಿನೋಸ್ 9611 ಪ್ರೊಸೆಸರ್‌ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6 ಜಿಬಿ RAM ವರೆಗೆ ಮತ್ತು 128 ಜಿಬಿ ಸಂಗ್ರಹದೊಂದ ಆಯ್ಕೆ ಒಳಗೊಂಡಿದೆ. ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಇದ್ದು, ಡಿಸ್‌ಪ್ಲೇಯು 6.4-ಇಂಚಿನ ಪೂರ್ಣ ಹೆಚ್‌ಡಿ + ಸೂಪರ್‌ ಅಮೋಲೆಡ್ ಮಾದರಿಯಲ್ಲಿದೆ.

ಸೆಲ್ಫಿ

ಗ್ಯಾಲಕ್ಸಿ M21 ಮುಂಭಾಗದ ಸೆಲ್ಫಿ ಕ್ಯಾಮೆರಾವು 20 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಹಾಗೆಯೇ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾಪಿಕ್ಸೆಲ್ ಸಂವೇದಕವನ್ನು ಪಡೆದಿದೆ. ಉಳಿದಂತೆ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾದೊಂದಿಗೆ ಪಡೆದಿದೆ. ಜೊತೆಗೆ 15W ವೇಗದ ವೈರ್ಡ್ ಚಾರ್ಜಿಂಗ್ ಹೊಂದಿರುವ ಫೋನ್ 6000mAh ಬ್ಯಾಟರಿಯನ್ನು ಅವಲಂಬಿಸಿದೆ. ಆಂಡ್ರಾಯ್ಡ್ 10 ಆಧಾರಿತ ಸ್ಯಾಮ್‌ಸಂಗ್‌ನ ಒನ್‌ಯುಐ ಪ್ಲಾಟ್‌ಫಾರ್ಮ್‌ನಲ್ಲಿ ಈ ಫೋನ್ ಕಾರ್ಯನಿರ್ವಹಿಸುತ್ತದೆ.

ಗ್ಯಾಲಕ್ಸಿ

ಹೀಗಾಗಿ ಗ್ಯಾಲಕ್ಸಿ F12 ಸ್ಮಾರ್ಟ್‌ಫೋನ್ ಸಹ ಈ ಫೀಚರ್ಸ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಅಧಿಕ ಎಂದು ಹೇಳಲಾಗುತ್ತಿದೆ. ಗ್ಯಾಲಕ್ಸಿ F12 ನಲ್ಲಿ ಸ್ಯಾಮ್‌ಸಂಗ್ ಹೊಸ ಗ್ರೇಡಿಯಂಟ್ ಬಣ್ಣ ಆಯ್ಕೆಗಳನ್ನು ನೀಡಬಹುದಾದ ಸಾಧ್ಯತೆಗಳಿ ಇವೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಬೆಲೆಯು ಸಹ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ.

Most Read Articles
Best Mobiles in India

English summary
Samsung Galaxy F12 is coming to India as a budget segment smartphone, based on the leaks.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X