ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಫೋನ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ ಬೊಂಬಾಟ್ ಆಫರ್!
ಸ್ಯಾಮ್‌ಸಂಗ್ ಕಂಪೆನಿಯ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನಮಾನ ಇದ್ದು, ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ಅನಾವರಣ ಮಾಡಲಾಗಿದೆ. ಈ ಹೊಸ ಫೋನ್‌ನೊಂದಿಗೆ ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಫೋನ್ ಬೆಲೆಯಲ್ಲಿ ಇಳಿಕೆ ಸಹ ಕಂಡು ಬಂದಿದೆ.
ಹೌದು, ಇಂದು ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F145G ಅನ್ನು ಅನಾವರಣ ಮಾಡಲಾಗಿದ್ದು, ಗ್ರಾಹಕರಿಗೆ ಇದು ಒಂದು ಕಡೆಯ ಸಂತೋಷವಾದರೆ ಇದರ ಹಿಂದಿನ ಆವೃತ್ತಿಯ ಫೋನ್ ಆದ ಗ್ಯಾಲಕ್ಸಿ F13 ಫೋನ್ ಅನ್ನು ಮೂಲ ಬೆಲೆಗಿಂತ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಅಂದರೆ ಈ ಫೋನ್ 26% ಡಿಸ್ಕೌಂಟ್ ಪಡೆದುಕೊಂಡಿದೆ. ಹಾಗೆಯೇ ಇದು ಎಕ್ಸಿನೋಸ್ 850 ಪ್ರೊಸೆಸರ್ ಬಲದೊಂದಿಗೆ ಕಂಡುಬಂದಿದ್ದು, ಇದರ ಆಫರ್ ಬೆಲೆ ವಿವರಕ್ಕೂ ಮುನ್ನ ಪ್ರಮುಖ ಫೀಚರ್ಸ್‌ಗಳನ್ನು ತಿಳಿಯೋಣ.

ಗ್ಯಾಲಕ್ಸಿ F13 ಫೋನ್ ಡಿಸ್‌ಪ್ಲೇ ವಿವರ: ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಯನ್ನು ಹೊಂದಿದ್ದು, ಇದು 2408 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ 60hz ರಿಫ್ರೆಶ್ ರೇಟ್ ಅನ್ನು ಹೊಂದಿರುವ ಈ ಫೋನ್ ವಾಟರ್ ಡ್ರಾಪ್ ನಾಚ್ ಡಿಸೈನ್ ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಪ್ರೊಸೆಸರ್ ಯಾವುದು?: ಈ ಫೋನ್ ಎಕ್ಸಿನೋಸ್ 850 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ರನ್ ಆಗಲಿದೆ. ಉಳಿದಂತೆ 4GB RAM ಮತ್ತು 64GB ಹಾಗೂ 4GB RAM ಮತ್ತು 128 GB ನ ಎರಡು ವೇರಿಯಂಟ್‌ನಲ್ಲಿ ಕಾಣಿಸಿಕೊಂಡಿದೆ. ಜೊತೆಗೆ ಇಂಟರ್ ಸ್ಟೋರೇಜ್ ಅನ್ನು 1TB ವರೆಗೂ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಕ್ಯಾಮೆರಾ ರಚನೆ: ಇದು ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದರೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಉದ್ದೇಶಕ್ಕೆ 8 ಮೆಗಾಪಿಕ್ಸೆಲ್ ಸೆನ್ಸರ್ ಆಯ್ಕೆ ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಬ್ಯಾಟರಿ ಹಾಗೂ ಇತರೆ : ಜನಪ್ರಿಯ ಫೋನ್ ಆಗಿರುವ ಇದು 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಯಲ್ಲಿ ಬ್ಲೂಟೂತ್ ಆವೃತ್ತಿ v5.0, ವೈ-ಫೈ, ಯುಎಸ್‌ಬಿ ಪೋರ್ಟ್, 3.5ಮಿ.ಮೀ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F13 ಗೆ ಪ್ರಸ್ತುತ ಆಫರ್ ಬೆಲೆ: ಈ ಸ್ಮಾರ್ಟ್‌ಫೋನ್ ಮೂಲ ದರ 14,999 ರೂ. ಗಳಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 10,999 ರೂ. ಗಳಲ್ಲಿ ಕಾಣಿಸಿಕೊಂಡಿದೆ. ಅದಾಗ್ಯೂ ನೀವು ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಖರೀದಿ ಮಾಡಬಹುದು. ಅಂದರೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಬ್ಯಾಂಕ್ ಮೇಲೆ 5% % ಕ್ಯಾಶ್‌ಬ್ಯಾಕ್ ಪಡೆಯುವುದರೊಂದಿಗೆ ನೋ ಕಾಸ್ಟ್ ಇಎಂಐ ಮೂಲಕವೂ ಖರೀದಿ ಮಾಡಬಹುದು.

ಇದರೊಂದಿಗೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 10% ರಿಯಾಯಿತಿ ಲಭ್ಯವಾಗಲಿದ್ದು, ಸಿಟಿ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿಸಿದರೂ 10% ರಿಯಾಯಿತಿ ಸಿಗಲಿದೆ. ಇದಿಷ್ಟೇ ಅಲ್ಲದೆ ಈ ಫೋನ್ ಖರೀದಿ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ಹಲವಾರು ಆಫರ್‌ಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.


Click it and Unblock the Notifications








