Home
ಸುದ್ದಿಜಾಲ

ಅಗ್ಗದ ಬೆಲೆಯ ಈ ಸ್ಯಾಮ್‌ಸಂಗ್‌ ಫೋನ್‌ ಈಗ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯ!

ಮೊಬೈಲ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಸ್ಯಾಮ್‌ಸಂಗ್‌ ಸಂಸ್ಥೆಯು ಬಜೆಟ್‌ ಬೆಲೆಗೆ ಹಲವು ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆ ಪೈಕಿ ಸ್ಯಾಮ್‌ಸಂಗ್‌ ಕಂಪನಿಯ F ಸರಣಿಯ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌ ಬೆಲೆ ಹಾಗೂ ಫೀಚರ್ಸ್‌ಗಳಿಂದಾಗಿ ಗ್ರಾಹಕರ ಗಮನ ಸೆಳೆದಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಫೋನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಶೇ. 45% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 4 GB RAM + 64 GB ಸ್ಟೋರೇಜ್‌ ವೇರಿಯಂಟ್‌ ಸದ್ಯ ಆಫರ್‌ನಲ್ಲಿ 8,199ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ ಕೊಡುಗೆ ಸಹ ದೊರೆಯುತ್ತದೆ.

ಅಗ್ಗದ ಬೆಲೆಯ ಈ ಸ್ಯಾಮ್‌ಸಂಗ್‌ ಫೋನ್‌ ಈಗ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯ!

ಅಂದಹಾಗೆ ಈ ಫೋನ್‌ 4GB RAM + 64GB ಹಾಗೂ 4GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಒಳಗೊಂಡಿದೆ. 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಕೂಡಾ ಪಡೆದುಕೊಂಡಿದೆ. ಹಾಗಾದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಫೋನಿನ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌ ಹೇಗಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಮೊಬೈಲ್‌ 6.6 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇ 2408 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಅನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಡಿಸೈನ್‌ ಪಡೆದಿದ್ದು, ಇದು ಸ್ಲಿಮ್ ಬೆಜೆಲ್‌ ಹೊಂದಿದೆ ಹಾಗೂ 60hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ.

ಅಗ್ಗದ ಬೆಲೆಯ ಈ ಸ್ಯಾಮ್‌ಸಂಗ್‌ ಫೋನ್‌ ಈಗ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯ!

ಯಾವ ಪ್ರೊಸೆಸರ್‌ ಪವರ್‌ ಲಭ್ಯ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಫೋನ್‌ ಎಕ್ಸಿನೋಸ್‌ 850 ಪ್ರೊಸೆಸರ್‌ ಪವರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 12 ಸಪೋರ್ಟ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಹಾಗೂ 4GB RAM ಮತ್ತು 128 GB ಆಂತರೀಕ ಸ್ಟೋರೇಜ್‌ ಆಯ್ಕೆ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಿದೆ.

ತ್ರಿವಳಿ ಕ್ಯಾಮೆರಾ ಸೌಲಭ್ಯ

ಸ್ಯಾಮ್‌ಸಂಗ್‌ ಸಂಸ್ಥೆಯ ಈ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದುಕೊಂಡಿದೆ. ದ್ವಿತೀಯ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಪಡೆದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸರ್‌ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಅಗ್ಗದ ಬೆಲೆಯ ಈ ಸ್ಯಾಮ್‌ಸಂಗ್‌ ಫೋನ್‌ ಈಗ ಮತ್ತಷ್ಟು ಕಡಿಮೆ ಬೆಲೆಗೆ ಲಭ್ಯ!

ಬಿಗ್‌ ಬ್ಯಾಟರಿ ಹಾಗೂ ಇತರೆ ಆಯ್ಕೆಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಫೋನ್‌ 6000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 15W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಕೂಡಾ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಹಾಟ್‌ಸ್ಪಾಟ್‌, ಬ್ಲುಟೂತ್‌ v5.0, ವೈಫೈ, ಯುಎಸ್‌ಬಿ ಪೋರ್ಟ್‌, 3.5ಮಿ.ಮೀ ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ.

ಕಲರ್‌ ಆಯ್ಕೆ ಹಾಗೂ ಮೆಮೊರಿ ಸೌಲಭ್ಯ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಮೊಬೈಲ್‌ ಎರಡು ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 4GB RAM ಮತ್ತು 64GB ಸ್ಟೋರೇಜ್‌ ಆಯ್ಕೆ ಹಾಗೂ 4GB RAM ಮತ್ತು 128 GB ಸ್ಟೋರೇಜ್‌ ಆಯ್ಕೆ ಹೊಂದಿದೆ. ಈ ಫೋನ್ ನೈಟ್‌ಸ್ಕಿ ಗ್ರೀನ್, ವಾಟರ್‌ಫಾಲ್ ಬ್ಲೂ ಮತ್ತು ಸನ್‌ರೈಸ್ ಕಾಪರ್ ಬಣ್ಣಗಳ ಆಯ್ಕೆ ಪಡೆದಿದೆ.

Best Mobiles in India

English summary
SAMSUNG Galaxy F13 price drop on flipkart website. check offers, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+