Home
ಸುದ್ದಿಜಾಲ

ಸದ್ಯದಲ್ಲೇ ಸ್ಯಾಮ್‌ಸಂಗ್‌ನಿಂದ ಹೊಸ 5G ಫೋನ್‌ ಲಾಂಚ್!..ಅಚ್ಚರಿಯ ಬೆಲೆ?

ಸ್ಯಾಮ್‌ಸಂಗ್ ಸಂಸ್ಥೆಯು ತನ್ನ ಗ್ಯಾಲಕ್ಸಿ A, ಗ್ಯಾಲಕ್ಸಿ M ಹಾಗೂ ಗ್ಯಾಲಕ್ಸಿ F ಸರಣಿಯಲ್ಲಿ ಭಿನ್ನ ಶ್ರೇಣಿಯ ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಆ ಪೈಕಿ ಗ್ಯಾಲಕ್ಸಿ F ಸರಣಿಯ ಫೋನ್‌ಗಳು ಹೆಚ್ಚಾಗಿ ಬಜೆಟ್‌ ದರದಲ್ಲಿ ಕಾಣಿಸಿವೆ. ಈ ಸರಣಿಗೆ ಸ್ಯಾಮ್‌ಸಂಗ್‌ ಇದೀಗ ಮತ್ತೊಂದು 5G ಸ್ಮಾರ್ಟ್‌ಫೋನ್‌ ಸೇರ್ಪಡೆ ಮಾಡಲು ಸಜ್ಜಾಗಿದೆ.

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯು ನೂತನವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G (Samsung Galaxy F14 5G) ಫೋನ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇದೇ ಮಾರ್ಚ್ 24 ರಂದು ಬಿಡುಗಡೆ ಮಾಡಲು ಸಾಧ್ಯತೆಗಳಿವೆ. ಆದರೆ ಬಿಡುಗಡೆಗೆ ಮುನ್ನವೇ ಸ್ಯಾಮ್‌ಸಂಗ್ ಈಗಾಗಲೇ ಫ್ಲಿಪ್‌ಕಾರ್ಟ್ ಮೈಕ್ರೋ-ಸೈಟ್ ಮೂಲಕ ಗ್ಯಾಲಕ್ಸಿ F14 5G ಫೋನಿನ ಕೆಲವು ಪ್ರಮುಖ ಫೀಚರ್ಸ್‌ ಬಗ್ಗೆ ಬಹಿರಂಗಪಡಿಸಿದೆ.

ಸದ್ಯದಲ್ಲೇ ಸ್ಯಾಮ್‌ಸಂಗ್‌ನಿಂದ ಹೊಸ 5G ಫೋನ್‌ ಲಾಂಚ್!..ಅಚ್ಚರಿಯ ಬೆಲೆ?

ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನಿನ ಲೀಕ್‌ ಫೀಚರ್ಸ್‌ಗಳು ಮೊಬೈಲ್‌ ಪ್ರಿಯರನ್ನು ಆಕರ್ಷಿಸಿದ್ದು, ಇದರೊಂದಿಗೆ ಈ ಫೋನಿನ ನಿರೀಕ್ಷಿತ ಬೆಲೆಯು ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಅಂದಹಾಗೆ ಈ ಫೋನ್‌ 6 GB + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿರಲಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ನಿರೀಕ್ಷಿತ ಬೆಲೆ ಎಷ್ಟು? ಇತರೆ ಫೀಚರ್ಸ್‌ ಏನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಗ್ಯಾಲಕ್ಸಿ F14 5G ಡಿಸ್‌ಪ್ಲೇ ರಚನೆ : ಬರಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್‌ 6.6 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇಯು ಹೆಚ್‌ಡಿ ಪ್ಲಸ್‌ LCD ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿರಲಿದೆ. ಇನ್ನು ಡಿಸ್‌ಪ್ಲೇಯು ವಾಟರ್‌ಡ್ರಾಪ್‌ ನಾಚ್‌ ರಚನೆಯನ್ನು ಹೊಂದರಿರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ 5 ರಕ್ಷಣೆಯನ್ನು ಹೊಂದಿರಲಿದೆ. ಜೊತೆಗೆ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ನಲ್ಲಿ ಇರಲಿದೆ.

ಸದ್ಯದಲ್ಲೇ ಸ್ಯಾಮ್‌ಸಂಗ್‌ನಿಂದ ಹೊಸ 5G ಫೋನ್‌ ಲಾಂಚ್!..ಅಚ್ಚರಿಯ ಬೆಲೆ?

ಗ್ಯಾಲಕ್ಸಿ F14 5G ಪ್ರೊಸೆಸರ್‌ ಕಾರ್ಯ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್‌ ಆಕ್ಟಾ ಕೋರ್ Exynos 1330 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿನ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ ಪಡೆದಿರಲಿದೆ. ಇದರೊಂದಿಗೆ ಈ ಫೋನ್‌ 4 GB ಮತ್ತು 6 GB RAM ಜೊತೆಗೆ 128 GB ಸ್ಟೋರೇಜ್‌ ಆಯ್ಕೆ ಹೊಂದಿರಲಿದ್ದು, ವರ್ಚುವಲ್ RAM 12 GB ವರೆಗೂ ಆಯ್ಕೆ ಸಿಗಲಿದೆ.

ಗ್ಯಾಲಕ್ಸಿ F14 5G ಕ್ಯಾಮೆರಾ ರಚನೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯನ್ನು ಅನ್ನು ಒಳಗೊಂಡಿದೆ ಎಂದು ದೃಢಪಡಿಸಲಾಗಿದೆ. ಈ ಫೋನಿನಲ್ಲಿ ಪ್ರಾಥಮಿಕ ರಿಯರ್ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾ ಆಗಿರಲಿದ್ದು, 2 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಕೆಂಡರಿ ಕ್ಯಾಮೆರಾ ಇರುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಸೆಲ್ಫಿಗಾಗಿ ಮುಂಭಾಗದಲ್ಲಿ ಈ ಸ್ಮಾರ್ಟ್‌ಫೋನ್ 13 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಕ್ಯಾಮೆರಾ ಪಡೆದಿರಲಿದೆ.

ಸದ್ಯದಲ್ಲೇ ಸ್ಯಾಮ್‌ಸಂಗ್‌ನಿಂದ ಹೊಸ 5G ಫೋನ್‌ ಲಾಂಚ್!..ಅಚ್ಚರಿಯ ಬೆಲೆ?

ಗ್ಯಾಲಕ್ಸಿ F14 5G ಬ್ಯಾಟರಿ ಬ್ಯಾಕ್‌ಅಪ್‌ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್‌ 6000 mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದ್ದು, ಇದರೊಂದಿಗೆ 25W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಇರಲಿದೆ. ಇನ್ನು ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನಿನ 6GB + 128 GB ವೇರಿಯಂಟ್‌ ಬೆಲೆ 15,000 ರೂ. ಗಳ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.

Best Mobiles in India

English summary
Samsung Galaxy F14 5G Will Launch in India on March 24 with 50MP camera, 6000mAh Battery. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+