ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಲಾಂಚ್!..ಬಜೆಟ್ ಬೆಲೆಗೆ ಲಭ್ಯ!
ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪನಿಯು ಭಾರತೀಯ ಮೊಬೈಲ್ ಮಾರುಕಟ್ಟೆಗೆ ನೂತನವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಪ್ರಾಥಮಿಕ ರಿಯರ್ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಲ್ಫಿ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಆಗಿದೆ.
ಹೌದು, ಸ್ಯಾಮ್‌ಸಂಗ್ ಹೊಸದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ಅನ್ನು ಲಾಂಚ್ ಮಾಡಿದೆ. ಬಜೆಟ್ ಪ್ರೈಸ್ ಟ್ಯಾಗ್‌ನಲ್ಲಿ ಬಿಡುಗಡೆ ಆಗಿರುವ ಈ ಫೋನ್ 6000 mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, 4GB + 128GB ಹಾಗೂ 6GB + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಈ ಫೋನ್ ಎರಡು ಕಲರ್ ವೇರಿಯಂಟ್ ಆಯ್ಕೆ ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ಆಕ್ಟಾ ಕೋರ್ Exynos 1330 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಹಾಗೆಯೇ ಈ ಫೋನಿನ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ಬೆಲೆ ಎಷ್ಟು? ಈ ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಗ್ಯಾಲಕ್ಸಿ F14 5G ಡಿಸ್‌ಪ್ಲೇ ರಚನೆ : ಬರಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ 6.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು ಹೆಚ್‌ಡಿ ಪ್ಲಸ್ LCD ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇನ್ನು ಡಿಸ್‌ಪ್ಲೇಯು ವಾಟರ್‌ಡ್ರಾಪ್ ನಾಚ್ ರಚನೆಯನ್ನು ಹೊಂದದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಜೊತೆಗೆ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್ ನಲ್ಲಿ ಇದೆ.

ಗ್ಯಾಲಕ್ಸಿ F14 5G ಪ್ರೊಸೆಸರ್ ಕಾರ್ಯ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ಆಕ್ಟಾ ಕೋರ್ Exynos 1330 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಇದರೊಂದಿಗೆ ಈ ಫೋನ್ 4 GB ಮತ್ತು 6 GB RAM ಜೊತೆಗೆ 128 GB ಸ್ಟೋರೇಜ್ ಆಯ್ಕೆ ಹೊಂದಿದ್ದು, ವರ್ಚುವಲ್ RAM 6 GB ವರೆಗೂ ಆಯ್ಕೆ ಲಭ್ಯ.
ಗ್ಯಾಲಕ್ಸಿ F14 5G ಕ್ಯಾಮೆರಾ ರಚನೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ರಚನೆಯನ್ನು ಅನ್ನು ಒಳಗೊಂಡಿದ್ದು, ಈ ಫೋನಿನಲ್ಲಿ ಪ್ರಾಥಮಿಕ ರಿಯರ್ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಆಗಿದ್ದು, 2 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಕೆಂಡರಿ ಕ್ಯಾಮೆರಾ ಇದ್ದು, ತೃತೀಯ ಕ್ಯಾಮೆರಾ ಸಹ 2 ಮೆಗಾ ಪಿಕ್ಸಲ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 13 ಮೆಗಾ ಪಿಕ್ಸಲ್ ಸೆನ್ಸಾರ್‌ನ ಕ್ಯಾಮೆರಾ ಪಡೆದಿದೆ.

ಗ್ಯಾಲಕ್ಸಿ F14 5G ಬ್ಯಾಟರಿ ಬ್ಯಾಕ್‌ಅಪ್ : ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನ್ 6000 mAh ಬ್ಯಾಟರಿ ಬ್ಯಾಕ್‌ಅಪ್ ಹೊಂದಿದ್ದು, ಇದರೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್ ಮತ್ತು USB ಟೈಪ್-C ಪೋರ್ಟ್ ಸೇರಿವೆ.
ಬೆಲೆ ಮತ್ತು ಲಭ್ಯತೆ : ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F14 5G ಫೋನಿನ 4GB + 128GB ವೇರಿಯಂಟ್ ಬೆಲೆಯು 12,990ರೂ. ಆಗಿದೆ. ಅದೇ ರೀತಿ 6GB + 128 GB ವೇರಿಯಂಟ್ ಬೆಲೆ 14,990 ರೂ. ಗಳು ಆಗಿದೆ. ಇದೇ ಮಾರ್ಚ್ 30 ರಂದು ಮಾರಾಟ ಪ್ರಾರಂಭಿಸಲಿದ್ದು, ಫ್ಲಿಪ್‌ಕಾರ್ಟ್ ಹಾಗೂ ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.


Click it and Unblock the Notifications








