Samsung: ಭಾರತದಲ್ಲಿ ಹೊಸ ವೇರಿಯಂಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
ಸ್ಯಾಮ್‌ಸಂಗ್ ಫೋನ್‌ಗಳು (Samsung phones) ವಿಶೇಷ ಫೀಚರ್ಸ್ ಆಯ್ಕೆ ಪಡೆಯುವ ಮೂಲಕ ಗ್ರಾಹಕರನ್ನು ಸೆಳೆದಿವೆ. ಈ ನಡವೆ ಇತ್ತೀಚೆಗಷ್ಟೇ ಲಾಂಚ್ ಆಗಿರುವ ಬಹಳ ಜನಪ್ರಿಯತೆ ಪಡೆದುಕೊಂಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಸ್ಮಾರ್ಟ್‌ಫೋನ್ (Samsung Galaxy F15 5G smartphone) ಇದೀಗ ಮತ್ತೊಂದು ವೇರಿಯಂಟ್‌ನಲ್ಲಿ ಲಾಂಚ್ ಆಗಿದೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಸ್ಮಾರ್ಟ್‌ಫೋನ್‌ಗೆ ಬಹುದೊಡ್ಡ ಬೇಡಿಕೆ ಇದ್ದು, ಈ ಫೋನ್ ಅನ್ನು ಈಗ ಮತ್ತೊಂದು ವೇರಿಯಂಟ್‌ನಲ್ಲಿ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 4GB + 128GB ಮತ್ತು 6GB + 128GB RAM ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇತ್ತು. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಏನು?, ಹೊಸ ವೇರಿಯಂಟ್ ಯಾವುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಸ್ಮಾರ್ಟ್‌ಫೋನ್: ಸ್ಯಾಮ್‌ಸಂಗ್ ಕಳೆದ ತಿಂಗಳು ಭಾರತದಲ್ಲಿ ಗ್ಯಾಲಕ್ಸಿ F15 5G ಅನ್ನು ಅನಾವರಣ ಮಾಡಿದೆ. ಈ ಫೋನ್ 4GB + 128GB ಮತ್ತು 6GB + 128GB RAM ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಲಭ್ಯ ಇದ್ದು, ಇದೀಗ ಹೊಸ ಸ್ಟೋರೇಜ್ ವೇರಿಯಂಟ್ ಅನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಹೆಚ್ಚಿನ RAM ಹೊಂದಿರುವ ಟಾಪ್-ಎಂಡ್ ಫೋನ್ ಆಗಿ ಇದು ಗುರುತಿಸಿಕೊಳ್ಳಲಿದೆ. ಆದರೆ, ಆಂತರಿಕ ಸ್ಟೋರೇಜ್ ಇತರ ಎರಡು ಮಾದರಿಗಳಂತೆಯೇ ಇರುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಈಗ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದೆ. ಹಾಗೆಯೇ ಈ ಸ್ಟೋರೇಜ್ ಆಯ್ಕೆಯ ಫೋನ್‌ಗೆ 15,999ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಖರೀದಿದಾರರು ಸ್ಮಾರ್ಟ್‌ಫೋನ್ ಮೇಲೆ ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ 1,000 ರೂ.ಗಳ ಮೌಲ್ಯದ ಅಪ್‌ಗ್ರೇಡ್ ಬೋನಸ್ ಅನ್ನೂ ಸಹ ಪಡೆಯಬಹುದು.

ಈ ಸ್ಮಾರ್ಟ್‌ಫೋನ್ ಆಶ್ ಬ್ಲ್ಯಾಕ್, ಗ್ರೂವಿ ವೈಲೆಟ್ ಮತ್ತು ಜಾಝಿ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದ್ದು, ಈ ಹೊಸ ವೇರಿಯಂಟ್ ಅನ್ನು ಫ್ಲಿಪ್‌ಕಾರ್ಟ್ ಮತ್ತು ದೇಶಾದ್ಯಂತ ರಿಟೇಲರ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಉಳಿದಂತೆ 4GB + 128GB ಮತ್ತು 6GB + 128GB ವೇರಿಯಂಟ್‌ಗಳು ಕ್ರಮವಾಗಿ 12,999ರೂ.ಗಳು ಮತ್ತು 14,499 ರೂ.ಗಳ ಬೆಲೆ ಹೊಂದಿವೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಸ್ಮಾರ್ಟ್‌ಫೋನ್ ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.5 ಇಂಚಿನ sAMOLED ಫುಲ್‌ಹೆಚ್‌ಡಿಪ್ಲಸ್ ರೆಸಲ್ಯೂಶನ್ ಆಯ್ಕೆ ಡಿಸ್‌ಪ್ಲೇ ಹೊಂದಿದ್ದು, ಇದು 90Hz ರಿಫ್ರೆಶ್ ರೇಟ್ ಬೆಂಬಲ ಪಡೆದಿದೆ. ಹಾಗೆಯೇ ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದು.

ಇದರ ಜೊತೆಗೆ ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6100 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಅಲ್ಲದೆ ಈ ಫೋನ್ ಆಂಡ್ರಾಯ್ಡ್ 14 ಓಎಸ್ ಅನ್ನು ರನ್ ಮಾಡಲಿದೆ. ಇದರ ಜೊತೆಗೆ ನಾಲ್ಕು ವರ್ಷಗಳ ಭವಿಷ್ಯದ ನವೀಕರಣಗಳು ಮತ್ತು ಐದು ವರ್ಷಗಳ ಭದ್ರತಾ ಪ್ಯಾಚ್‌ಗಳಿಗೆಗಳನ್ನೂ ಸಹ ನೀಡಲಾಗಿದೆ. ಅಲ್ಲದೆ, ಈ ಫೋನ್ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಲಾದ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ನೀಡಲಾಗಿದೆ..


Click it and Unblock the Notifications








