ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ ಸ್ಯಾಮ್‌ಸಂಗ್‌ನ ಈ ಹೊಸ 5G ಫೋನ್!
ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಮಾರ್ಟ್‌ಫೋನ್ ಮೊಬೈಲ್ ಸಂಸ್ಥೆಯು ಇದೀಗ ತನ್ನ F ಸರಣಿಯಲ್ಲಿ ಹೊಸ ಫೋನ್ ಲಾಂಚ್ ಮಾಡಲು ಸಜ್ಜಾಗಿದ್ದು, ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಆಗಿದೆ. ಇನ್ನು ಈ ಫೋನ್ ಅಧಿಕೃತವಾಗಿ ಇದೇ ಮಾರ್ಚ್ 4 ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಆಗಿದೆ.
ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಇದೇ ಮಾರ್ಚ್ 4 ರಂದು ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಅನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ. ಈ ಬಗ್ಗೆ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮೈಕ್ರೋ ಪೇಜ್ ಸಹ ಮಾಡಿದೆ. ಅಂದಹಾಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ನಲ್ಲಿ ಕೆಲಸ ನಿರ್ವಹಿಸಲಿದೆ ಎನ್ನಲಾಗಿದೆ.

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ F15 ಸ್ಮಾರ್ಟ್‌ಫೋನ್ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರಲಿದ್ದು, 50 ಮೆಗಾ ಪಿಕ್ಸೆಲ್ ಸೆನ್ಸಾರ್ ಪ್ರಾಥಮಿಕ ಕ್ಯಾಮೆರಾ ಪಡೆದಿರಲಿದೆ. ಹಾಗಾದರೇ ಇನ್ನುಳಿದಂತೆ ಈ ಸ್ಮಾರ್ಟ್ ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಲಗ್ಗೆ ಇಡಲಿದೆ ಎನ್ನುವುದನ್ನು ಮುಂದೆ ತಿಳಿಯೋಣ ಬನ್ನಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F15 ನಿರೀಕ್ಷಿತ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ F15 ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎನ್ನಲಾಗಿದ್ದು, ಹಾಗೆಯೇ ಈ ಡಿಸ್‌ಪ್ಲೇ 1080 x 2408 ಪಿಕ್ಸೆಲ್ ಸ್ಕ್ರಿನ್ ರೆಸಲ್ಯೂಶನ್ ಸಾಮರ್ಥ್ಯ ದಲ್ಲಿ ಇರಲಿದೆ. ಇದರ ಜೊತೆಗೆ ಡಿಸ್‌ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಹೊಂದಿರಲಿದ್ದು, 120 Hz ರಿಫ್ರೆಶ್ ರೇಟ್ ಸಪೋರ್ಟ್ ಕೂಡಾ ಪಡೆದಿರಲಿದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್ ಪವರ್ ಅನ್ನು ಪಡೆದಿರಲಿದ್ದು, ಇದು ಆಂಡ್ರಾಯ್ಡ್ 14 ಓಎಸ್ ಸಪೋರ್ಟ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128 GB ಆಂತರೀಕ ಸ್ಟೋರೇಜ್ ಸಾಮರ್ಥ್ಯ ಪಡೆದಿರಲಿದೆ. ಇದಲ್ಲದೆ ಸ್ಮಾರ್ಟ್ ಫೋನ್ ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶ ಒಳಗೊಂಡಿರಲಿದೆ.
ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿರಲಿದೆ. ಸೆಕೆಂಡರಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಹಾಗೂ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ದಲ್ಲಿ ಲಗ್ಗೆ ಇಡಲಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ F15 ಸ್ಮಾರ್ಟ್ ಫೋನ್ 6,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಇದು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಸುಮಾರು 128 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಸೌಲಭ್ಯ ಪಡೆದಿರಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯ ಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಟೈಪ್ ಸಿ ಪೊರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಪಡೆದಿರಲಿದೆ ಎಂದು ಅಂದಾಜಿಸಲಾಗಿದೆ.
ನಿರೀಕ್ಷಿತ ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ F15 ಸ್ಮಾರ್ಟ್ ಫೋನ್ ಇದೇ ಮಾರ್ಚ್ 4 ರಂದು ಮಾರುಕಟ್ಟೆಗೆ ಪ್ರವೇಶ ಮಾಡಲಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ F15 ಸ್ಮಾರ್ಟ್ ಫೋನ್ ಬಜೆಟ್ ಪ್ರೈಸ್ ಟ್ಯಾಗ್ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








