Samsung: ಶೀಘ್ರದಲ್ಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಲಾಂಚ್! ಏನಿದೆ ಫೀಚರ್ಸ್?
ಸ್ಯಾಮ್‌ಸಂಗ್ ಫೋನ್‌ಗಳಿಗೆ (Samsung phones) ಭಾರತದಲ್ಲಿ ಬಹುದೊಡ್ಡ ಮಾರುಕಟ್ಟೆ ಇದೆ. ಈ ಫೋನ್‌ಗಳು ಸುಧಾರಿತ ಫೀಚರ್ಸ್ ಹೊಂದಿರುವುದರಿಂದ ಹಾಗೂ ವಿವಿಧ ರೀತಿಯ ಭದ್ರತಾ ಫೀಚರ್ಸ್‌ಪಡೆಯುವುದರಿಂದ ಇವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅದರಂತೆ ಈಗ ಶೀಘ್ರದಲ್ಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G (Samsung Galaxy F15 5G) ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ.
ಹೌದು, ಈಗಾಗಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಬಗ್ಗೆ ಸಾಕಷ್ಟು ಲೀಕ್ ಮಾಹಿತಿ ಹರಿದಾಡಿವೆ. ಇದರ ಬೆನ್ನಲ್ಲೇ ಸ್ಯಾಮ್‌ಸಂಗ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಬೆಂಬಲ ಪೇಜ್ ಲೈವ್ ಆಗಿದೆ. ಇದರಿಂದಾಗಿ ಇದರ ಅನಾವರಣ ಶೀಘ್ರದಲ್ಲೇ ಆಗಲಿದೆ ಎನ್ನಲಾಗಿಲಾಗಿದೆ. ಹಾಗಿದ್ರೆ, ಈ ಫೋನ್‌ನ ನಿರೀಕ್ಷಿತ ಫೀಚರ್ಸ್ ಏನಿರಬಹುದು?, ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಸ್ಮಾರ್ಟ್‌ಫೋನ್: SM-E156B/DS ಮಾದರಿ ಸಂಖ್ಯೆಯೊಂದಿಗೆ ಈ ಫೋನ್ ಬೆಂಬಲ ಪೇಜ್ ಸ್ಯಾಮ್‌ಸಂಗ್‌ನ ಭಾರತ ಮತ್ತು ಬಾಂಗ್ಲಾದೇಶದ ಪ್ರಾದೇಶಿಕ ಸೈಟ್‌ಗಳಲ್ಲಿ ಕಾಣಿಸಿಕೊಂಡಿವೆ. ಹಿಂದಿನ ವರದಿಗಳ ಪ್ರಕಾರ, ಈ ಫೋನ್‌ಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಎಂದು ಕರೆಯುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ, ಈ ಡಿವೈಸ್ ಅನ್ನು ಭಾರತದಲ್ಲಿ BIS ಪ್ರಾಧಿಕಾರವು ಸಹ ಅನುಮೋದಿಸಿತ್ತು.
ಬೆಂಬಲ ಪೇಜ್‌ನಲ್ಲಿ ಗ್ಯಾಲಕ್ಸಿ F15 5G ಸ್ಮಾರ್ಟ್‌ಫೋನ್‌ನ ಯಾವುದೇ ಫೀಚರ್ಸ್ ಬಗ್ಗೆ ಮಾಹಿತಿಯನ್ನು ನೀಡಲಾಗಿಲ್ಲ. ಅದಾಗ್ಯೂ ಈ ಫೋನ್ ಗ್ಯಾಲಕ್ಸಿ A15 5G (Samsung Galaxy A15 5G) ಅನ್ನು ಆಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಫೋನ್ ಅನ್ನು ಕಳೆದ ಡಿಸೆಂಬರ್ 2023 ರಲ್ಲಿ ಭಾರತದಲ್ಲಿ 19,499 ರೂ.ಗಳ ಬೆಲೆಯೊಂದಿಗೆ ಆರಂಭಿಸಲಾಗಿದೆ. ಇನ್ನು ಈ ಹೊಸ ಫೋನ್ F-ಸರಣಿಯ ಫೋನ್ ಆಗಿರುವುದರಿಂದ ಫ್ಲಿಪ್‌ಕಾರ್ಟ್ ಮೂಲಕ ಪ್ರತ್ಯೇಕವಾಗಿ ಸೇಲ್ ಮಾಡುವ ಸಾಧ್ಯತೆಯಿದೆ.
ಗ್ಯಾಲಕ್ಸಿ A15 5G ಫೀಚರ್ಸ್: ಹೊಸ ಫೋನ್‌ಗೂ ಈ ಫೋನ್‌ಗೂ ಸಾಮ್ಯತೆ ಇರುವುದರಿಂದ ನಾವು ಗ್ಯಾಲಕ್ಸಿ A15 5G ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್ಸ್ ಕಡೆ ಕಣ್ಣಾಯಿಸೋಣ. ಅದರಂತೆ ಈ ಫೋನ್ ಟಿಯರ್‌ಡ್ರಾಪ್ ನಾಚ್‌ನೊಂದಿಗೆ 6.5 ಇಂಚಿನ ಎಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು FHD+ ರೆಸಲ್ಯೂಶನ್, 19:9 ಆಕಾರ ಅನುಪಾತ ಮತ್ತು 90Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದೆ.

ಇದರೊಂದಿಗೆ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಹಾಗೂ ರಿಯರ್‌ನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಡೀಪ್ ಮತ್ತು ಮ್ಯಾಕ್ರೋ ಶಾಟ್‌ಗಳಿಗಾಗಿ 2 ಮೆಗಾಪಿಕ್ಸೆಲ್‌ನ ಜೋಡಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಈ ಫೋನ್ ಡೈಮೆನ್ಸಿಟಿ 6100 ಪ್ಲಸ್ (Dimensity 6100 +) ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ.
ಹಾಗೆಯೇ 6 GB / 8 GB RAM, 128 GB / 256 GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದ್ದು. 25W ವೈರ್ಡ್ ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಈ ಫೋನ್ ಹೊಂದಿದೆ. ಉಳಿದಂತೆ ಭದ್ರತೆಗಾಗಿ ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸರ್ ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F15 5G ಸ್ಮಾರ್ಟ್‌ಫೋನ್‌ನಲ್ಲಿ ಏನನ್ನು ನಿರೀಕ್ಷೆ ಮಾಡಬಹುದು?: ಈ ಫೋನ್ ಮೇಲೆ 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಲಿದೆ ಎನ್ನಲಾಗಿದ್ದು, ಈ ಫೋನ್ ಸಹ 50 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಹೊಂದಿರಬಹುದು ಎಂದು ಹೇಳಲಾಗುತ್ತದೆ. ಜೊತೆಗೆ 5G ಸಾಮರ್ಥ್ಯ, ಯುಎಸ್‌ಬಿ ಟೈಪ್-ಸಿ ಪೋರ್ಟ್, ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್, ಜಿಪಿಎಸ್ ಸೇರಿದಂತೆ ಅನೇಕ ಸಾಮಾನ್ಯ ಕನೆಕ್ಟಿವಿಟಿ ಸೌಲಭ್ಯ ಪಡೆಯಲಿದೆ ಎಂದು ತಿಳಿದುಬಂದಿದೆ.


Click it and Unblock the Notifications








