Home
Deal of the day

Samsung: ಹೊಸದಾಗಿ ಲಾಂಚ್‌ ಆದ ಈ ಸ್ಯಾಮ್‌ಸಂಗ್‌ ಫೋನ್‌ಗೆ 15% ರಿಯಾಯಿತಿ! 50MP ಕ್ಯಾಮೆರಾ...

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು (Samsung smartphone) ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿವೆ. ಈ ನಡುವೆ ಈ ವರ್ಷದ ಆರಂಭದಲ್ಲಿ ಲಾಂಚ್‌ ಆದ ಸ್ಮಾರ್ಟ್‌ಫೋನ್‌ಗೆ ಭರ್ಜರಿ ಆಫರ್ ನೀಡಲಾಗಿದೆ. ಈ ಫೋನ್ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಆಯ್ಕೆ ಪಡೆದಿದೆ.

ಹೌದು, ಸ್ಯಾಮ್‌ಸಂಗ್‌ನ ಬಹು ಜನಪ್ರಿಯ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F15 5G ಫೋನ್‌ಗೆ (Samsung Galaxy F15 5G phone) ಆಫರ್ ನೀಡಲಾಗಿದೆ. ಈ ಫೋನ್‌ನಲ್ಲಿ 1 TB ವರೆಗೆ ಹೆಚ್ಚಿಸಿಕೊಳ್ಳಬಹುದಾದ ಎಸ್‌ಡಿ ಕಾರ್ಡ್‌ ಆಯ್ಕೆ ನೀಡಲಾಗಿದೆ. ಅಲ್ಲದೆ 6000 mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಆಫರ್ ಬೆಲೆ ವಿವರ ಇಲ್ಲಿದೆ ನೋಡಿ.

 ಹೊಸದಾಗಿ ಲಾಂಚ್‌ ಆದ ಈ ಸ್ಯಾಮ್‌ಸಂಗ್‌ ಫೋನ್‌ಗೆ 15% ರಿಯಾಯಿತಿ! 50MP ಕ್ಯಾಮೆರಾ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F15 5G: ಈ ಸ್ಮಾರ್ಟ್‌ಫೋನ್ 15,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 13,499 ರೂ.ಗಳ ಬೆಲೆಗೆ ಲಭ್ಯ ಇದೆ. ಅಂದರೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ 15% ರಿಯಾಯಿತಿ ನೀಡಲಾಗಿದೆ. ಇದರ ಜೊತೆಗೆ ಕೆಲವು ಬ್ಯಾಂಕ್‌ ಕೊಡುಗೆಗಳನ್ನು ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಸಿಗ್ನೇಚರ್ ಕ್ರೆಡಿಟ್ ಕಾರ್ಡ್‌ನಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಿದ್ರೆ 2500 ವರೆಗೆ ಬ್ಯಾಂಕ್ ಆಫರ್ ಪಡೆಯಬಹುದಾಗಿದೆ. ಅಲ್ಲದೆ ಸ್ಯಾಮ್‌ಸಂಗ್ ಆಕ್ಸಿಸ್ ಬ್ಯಾಂಕ್ ಇನ್ಫೈನೈಟ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ಆಫರ್, ಫ್ಲಿಪ್‌ಕಾರ್ಟ್‌ ಯುಪಿಐ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 25 ರೂ.ಗಳ ತ್ವರಿತ ರಿಯಾಯಿತಿ ಸಿಗಲಿದೆ. ಇದರ ಹೊರತಾಗಿ ಐಸಿಐಸಿಐ ಬ್ಯಾಂಕ್ ರುಪೇ ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವ್ಯವಹಾರದ ಮೂಲಕವೂ ಖರೀದಿ ಮಾಡಬಹುದು.

 ಹೊಸದಾಗಿ ಲಾಂಚ್‌ ಆದ ಈ ಸ್ಯಾಮ್‌ಸಂಗ್‌ ಫೋನ್‌ಗೆ 15% ರಿಯಾಯಿತಿ! 50MP ಕ್ಯಾಮೆರಾ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F15 5G ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸೆಲ್‌ ಸ್ಕ್ರೀನ್‌ ಸಾಮರ್ಥ್ಯದ 6.6 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದರ ಜೊತೆಗೆ 90Hz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದಿದೆ. ಅಲ್ಲದೆ 390 ppi ಸಾಂದ್ರತೆ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F15 5G ಪ್ರೊಸೆಸರ್ ವಿವರ: ಆಂಡ್ರಾಯ್ಡ್ 14, ಒನ್ ಯುಐ 6 ಓಎಸ್‌ ಅನ್ನು ರನ್‌ ಮಾಡಲಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 6100+ (6 nm) ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮಾಲಿ-G57 MC2 ಜಿಪಿಯು ಬಲ ಪಡೆದಿದ್ದು, 128GB/4GB RAM, 128GB/ 6GB RAM ಸ್ಟೋರೇಜ್‌ ಮೂಲಕ ಉತ್ತಮ ಫೋನ್‌ ಎನಿಸಿಕೊಂಡಿದೆ. ಅದರಲ್ಲೂ ಮೈಕ್ರೋ ಎಸ್‌ಡಿ ಕಾರ್ಡ್ ಆಯ್ಕೆ ನೀಡಲಾಗಿದ್ದು, ಸ್ಟೋರೇಜ್‌ ಹೆಚ್ಚಿಗೆ ಮಾಡಿಕೊಳ್ಳಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F15 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ ಪಡೆದಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್‌, ಪನೋರಮಾ, ಎಚ್‌ಡಿಆರ್ ಫೀಚರ್ಸ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದು. ಜೊತೆಗೆ 13 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ.

 ಹೊಸದಾಗಿ ಲಾಂಚ್‌ ಆದ ಈ ಸ್ಯಾಮ್‌ಸಂಗ್‌ ಫೋನ್‌ಗೆ 15% ರಿಯಾಯಿತಿ! 50MP ಕ್ಯಾಮೆರಾ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F15 5G ಬ್ಯಾಟರಿ ಹಾಗೂ ಇತರೆ: ಈ ಫೋನ್ 6000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 25W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ. ಉಳಿದಂತೆ ಈ ಫೋನ್ 3.5 ಎಂಎಂ ಜ್ಯಾಕ್, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.3, A2DP, LE, ಯುಎಸ್‌ಬಿ ಟೈಪ್- ಸಿ 2.0 ಕನೆಕ್ಟವಿಟಿ ಸೌಲಭ್ಯ ಪಡೆದಿದೆ.

Best Mobiles in India

English summary
Samsung's most popular smartphone Samsung Galaxy F15 5G available with offer price. This phone has an expandable option of up to 1 TB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+