Just In
- 7 min ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 40 min ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
- 1 hr ago
ಭಾರತದಲ್ಲಿ ಮೊಬೈಲ್ ಡೌನ್ಲೋಡ್ ವೇಗದಲ್ಲಿ ಭಾರಿ ಬದಲಾವಣೆ!..ಓಕ್ಲಾ ವರದಿ!
- 2 hrs ago
Union Budget Mobile App : ಈ ಆಪ್ನಲ್ಲಿ ಪಡೆಯಿರಿ ಬಜೆಟ್ 2023 ರ ಸಂಪೂರ್ಣ ವಿವರ!
Don't Miss
- Automobiles
ಹೊಸ ಸಿಯೆರಾ ಕಾರಿನ ವಿನ್ಯಾಸದ ಹಿಂದೆ ಇದೆ ರತನ್ ಟಾಟಾ ಐಡಿಯಾ
- News
ಪ್ರಧಾನಿ, ರಾಷ್ಟ್ರಪತಿ ಸೇರಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8ವರ್ಷದ ಬಾಲಕನ ಸಾಧನೆ ಏನು? ತಿಳಿಯಿರಿ
- Sports
U-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ ವನಿತೆಯರು
- Finance
PM kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
- Movies
ಮತ್ತೆ ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ನವೀನ್ ಕೃಷ್ಣ
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಫೋನ್ ಬೆಲೆ ಇಳಿಕೆ!..ಈ ಚಾನ್ಸ್ ಬಿಡಬೇಡಿ!
ಸ್ಯಾಮ್‌ಸಂಗ್ ಮೊಬೈಲ್ ಸಂಸ್ಥೆಯು ಜನಪ್ರಿಯ 5G ಫೋನ್‌ಗಳಲ್ಲಿ ಒಂದಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಈಗ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಗ್ಯಾಲಕ್ಸಿ F23 5G ಫೋನ್ 37% ಡಿಸ್ಕೌಂಟ್ ಪಡೆದಿದ್ದು, ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಅಂದಹಾಗೆ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್ ಬಲ ಪಡೆದಿದೆ.

ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ತಾಣದಲ್ಲಿ 6GB RAM + 128GB ವೇರಿಯಂಟ್ 14,999 ರೂ. ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದಲ್ಲದೆ ಆಯ್ದ ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ, ಹೆಚ್ಚುವರಿ. ರಿಯಾಯಿತಿ ಲಭ್ಯವಾಗಲಿದೆ. ಇದರೊಂದಿಗೆ ಆಕರ್ಷಕ ಎಕ್ಸ್‌ಚೇಂಜ್ ಕೊಡುಗೆಯೂ ಸಹ ಗ್ರಾಹಕರಿಗೆ ದೊರೆಯುತ್ತದೆ.

ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಇನ್ನು ಈ ಫೋನ್ ಬ್ಲೂ, ಕಾಪರ್ ಬ್ಲಶ್ ಹಾಗೂ ಫಾರೆಸ್ಟ್ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ ಯು ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ.

ಪ್ರೊಸೆಸರ್ ಪವರ್ ಯಾವುದು?
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಒಂದು UI 4.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ 6GB ವರ್ಚುವಲ್ RAM ವಿಸ್ತರಣೆಯ ಬೆಂಬಲವೂ ಇದೆ. ಇದರೊಂದಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಒಳಗೊಂಡಿದೆ.

ಕ್ಯಾಮೆರಾ ಸೆನ್ಸಾರ್ ಪವರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ F23 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಬ್ಯಾಟರಿ ದಕ್ಷತೆಯನ್ನು ಹೆಚ್ಚಿಸಲು ಹೇಳಲಾದ ಅಡಾಪ್ಟಿವ್ ಪವರ್ ಸೇವಿಂಗ್ ತಂತ್ರಜ್ಞಾನವನ್ನು ಫೋನ್ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, ಬ್ಲೂಟೂತ್, GPS/ A-GPS, NFC, USB Type-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ NFC ಯಲ್ಲಿ ಸ್ಯಾಮ್‌ಸಂಗ್ ಪೇ ಬೆಂಬಲವನ್ನು ಕೂಡ ಒಳಗೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470