Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನ ಈ ಬಹುಬೇಡಿಕೆಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ! 128GB ಸ್ಟೋರೇಜ್‌.. 64MP ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ (Samsung Galaxy) ಫೋನ್‌ಗಳು ಆಂಡ್ರಾಯ್ಡ್‌ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿವೆ. ಈ ಫೋನ್‌ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದ್ದು, ಆನ್‌ಲೈನ್‌ನಲ್ಲಿ ನೀವು ಕೆಲವೊಮ್ಮೆ ಸ್ಟಾಕ್‌ ಇಲ್ಲ ಎನ್ನುವ ಮಾಹಿತಿಯನ್ನೂ ಗಮನಿಸಿರಬಹುದು. ಅಷ್ಟರಮಟ್ಟಿದೆ ಈ ಫೋನ್‌ಗಳಿಗೆ ಬೇಡಿಕೆ ಇದೆ. ಈ ನಡುವೆ ಬಹುಬೇಡಿಕೆಯ ಸ್ಯಾಮ್‌ಸಂಗ್‌ನ ಈ ಫೋನ್‌ಗೆ ದೊಡ್ಡ ಅಫರ್ ನೀಡಲಾಗಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ F34 5G ಸ್ಮಾರ್ಟ್‌ಫೋನ್‌ (Samsung Galaxy F34 5G smartphone) ಗೆ ಈ ಕ್ಷಣಕ್ಕೂ ಭಾರೀ ಬೇಡಿಕೆ ಇದೆ. ಈ ಫೋನ್‌ನಲ್ಲಿನ ಸುಧಾರಿತ ಫೀಚರ್ಸ್‌ ಆಯ್ಕೆಗೆ ಮಾರುಹೋಗಿರುವ ಗ್ರಾಹಕರು ಇದನ್ನು ಖರೀದಿ ಮಾಡಲು ಮುಗಿಬಿದ್ದಿದ್ದಾರೆ. ಈ ನಡುವೆ ಈ ಫೋನ್‌ ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ಕುಣಿದು ಕುಪ್ಪಳಿಸುವಂತೆ ಮಾಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು?, ಆಫರ್ ಬೆಲೆ ಎಷ್ಟು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್‌ನ ಈ ಬಹುಬೇಡಿಕೆಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!128GB ಸ್ಟೋರೇಜ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F34 5G ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಬಗ್ಗೆ ತಿಳಿದುಕೊಳ್ಳಿ. ಅದರಂತೆ ಈ ಫೋನ್ 6.5 ಇಂಚಿನ ಪರದೆಯು ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಇದು 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ನೀಡಲಿದೆ. ಇದರೊಂದಿಗೆ ಬದಿಗಳಲ್ಲಿ ತೆಳುವಾದ ಬೆಜೆಲ್ ಆಯ್ಕೆ ಇದ್ದು, 120Hz ನ ರಿಫ್ರೆಶ್ ರೇಟ್‌ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ. ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F34 5G ಪ್ರೊಸೆಸರ್‌ ಮಾಹಿತಿ: ಈ ಫೋನ್ ಎಕ್ಸಿನೋಸ್ 1280 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಫೋನ್‌ನಲ್ಲಿನ ಗ್ರಾಫಿಕ್ಸ್ ಕಾರ್ಯಕ್ಷಮತೆಗೆ ಮಾಲಿ G68 MC4 ಜಿಪಿಯು ಆಯ್ಕೆ ನೀಡಲಾಗಿದೆ. ಇದರೊಂದಿಗೆ ಈ ಫೋನ್ 128GB ಇಂಟರ್‌ ಸ್ಟೋರೇಜ್‌ ಹಾಗೂ 6GB RAM ಸ್ಟೋರೇಜ್‌ ನಲ್ಲಿ ಕಾಣಿಸಿಕೊಂಡಿದ್ದು, 512GB ವರೆಗೆ ಫೋನ್‌ನ ಸ್ಟೋರೇಜ್‌ ಅನ್ನು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ನ ಈ ಬಹುಬೇಡಿಕೆಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!128GB ಸ್ಟೋರೇಜ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F34 5G ಕ್ಯಾಮೆರಾ ರಚನೆ: ಇನ್ನು ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಕ್ವಾಡ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಅದರಲ್ಲಿ f/1.8 ಅಪರ್ಚರ್ ಮತ್ತು OIS ಫೀಚರ್ಸ್‌ನೊಂದಿಗೆ 64 ಮೆಗಾಪಿಕ್ಸೆಲ್ ಮುಖ್ಯ ಲೆನ್ಸ್‌, 5 ಮೆಗಾಪಿಕ್ಸೆಲ್ ಡೆಪ್ತ್ ಮತ್ತು ಮ್ಯಾಕ್ರೋ ಸೆನ್ಸರ್‌ಗಳು‌ 12 ಮೆಗಾಪಿಕ್ಸೆಲ್ಅಲ್ಟ್ರಾ-ವೈಡ್ ಲೆನ್ಸ್‌ನಿಂದ ಬ್ಯಾಕಪ್ ಮಾಡಲಾಗಿದೆ. ಇದರೊಂದಿಗೆ ವಿಡಿಯೋ ಕರೆ ಹಾಗೂ ಸೆಲ್ಫಿ ಉದ್ದೇಶಕ್ಕೆ 32 ಮೆಗಾಪಿಕ್ಸೆಲ್ ಸೆನ್ಸರ್‌ ನೀಡಲಾಗಿದೆ. ಇದರೊಂದಿಗೆ ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F34 5G ಆಫರ್‌ ಬೆಲೆ ವಿವರ: ಇನ್ನು ಈ ಫೋನ್‌ನ ಪ್ರಮುಖ ವಿಚಾರಕ್ಕೆ ಈಗ ಬರೋಣ. ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 28% ರಿಯಾಯಿತಿ ಪಡೆದುಕೊಂಡಿದ್ದು, ಈ ಮೂಲಕ ನಿಮಗೆ 18,499ರೂ.ಗಳಿಗೆ ಲಭ್ಯ ಇದೆ. ಇದರ ಸಾಮಾನ್ಯ ದರ 25,999ರೂ.ಗಳಾಗಿದೆ. ಅದಾಗ್ಯೂ ನೀವು ಇನ್ನೂ ಈ ಫೋನ್‌ ಖರೀದಿಯಲ್ಲಿ ಹಣ ಉಳಿತಾಯ ಮಾಡಬೇಕು ಎಂದರೆ ಬ್ಯಾಂಕ್‌ ಆಫರ್‌ ಬಳಕೆ ಮಾಡಿಕೊಳ್ಳಬಹುದು.

ಸ್ಯಾಮ್‌ಸಂಗ್‌ನ ಈ ಬಹುಬೇಡಿಕೆಯ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!128GB ಸ್ಟೋರೇಜ್‌

ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ ಹೆಚ್ಚುವರಿ 1500 ರೂ.ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಸ್ಯಾಮ್‌ಸಂಗ್ ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ 10% ಕ್ಯಾಶ್‌ಬ್ಯಾಕ್ ಸಹ ಲಭ್ಯ ಇದ್ದು, ಪಾಲುದಾರ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಪೇ ಲೇಟರ್‌ ಆಯ್ಕೆ ಮೂಲಕ ಖರೀದಿ ಮಾಡಿದ್ರೆ 20,000 ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು. ಇದರೊಂದಿಗೆ 2,056ರೂ.ಗಳ ತಿಂಗಳ ನೋ ಕಾಸ್ಟ್‌ ಇಎಮ್‌ಐ ಸಹ ಲಭ್ಯ.

Best Mobiles in India

English summary
Samsung Galaxy F34 5G smartphone is currently in high demand. Consumers who are attracted by the selection of advanced features in this phone end up buying it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+