ಈ ಜನಪ್ರಿಯ ಸ್ಯಾಮ್‌ಸಂಗ್ 5G ಫೋನ್ ಈಗ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ!
ದೀಪಾವಳಿ ಹಬ್ಬದ ಪ್ರಯುಕ್ತ ನೀವೇನಾದರೂ ಡಿಸ್ಕೌಂಟ್ ದರದಲ್ಲಿ ಸ್ಯಾಮ್‌ಸಂಗ್ ಸಂಸ್ಥೆಯ 5G ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಮಾಡಿದ್ದರೆ, ಅದಕ್ಕೆ ಇದುವೇ ಸಕಾಲ ಎನ್ನಬಹುದಾಗಿದೆ. ಮೀಡ್‌ರೇಂಜ್ ಬೆಲೆಯಲ್ಲಿ ಕಾಣಿಸಿಕೊಂಡಿದ್ದ, ಸ್ಯಾಮ್‌ಸಂಗ್ ಸಂಸ್ಥೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್ ಈಗ ನಿಮಗೆ ಬಜೆಟ್ ಪ್ರೈಸ್ ಟ್ಯಾಗ್‌ನಲ್ಲಿ ಲಭ್ಯವಾಗಲಿದೆ.

ಹೌದು, ಜನಪ್ರಿಯ ಕ್ರೋಮಾ (Croma) ಪ್ಲಾಟ್‌ಫಾರ್ಮ್ ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್ ಭರ್ಜರಿ ಬೆಲೆ ಇಳಿಕೆ ಕಂಡಿದೆ. 23,999ರೂ. ಬೆಲೆಯ ಈ ಫೋನ್ ಇದೀಗ 15,490ರೂ. ಗಳ ದರದಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಗ್ರಾಹಕರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ, 2,000ರೂ. ಗಳ ಇನ್‌ಸ್ಟಂಟ್ ರಿಯಾಯಿತಿ ಸಹ ಲಭ್ಯವಾಗಲಿದೆ.

ಈ ಮೂಲಕ ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು 13,490ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅಧಿಕೃತ ಕ್ರೋಮಾ ವೆಬ್‌ಸೈಟ್‌ನಲ್ಲಿ ಈ ಕೊಡುಗೆಯನ್ನು ಗ್ರಾಹಕರು ಪಡೆಯಬಹುದಾಗಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಹಾಗೂ ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್ 1,080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಮಲ್ಟಿ ಟಚ್ ಸ್ಕ್ರೀನ್ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 400PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಯಾವ ಪ್ರೊಸೆಸರ್ ಇದೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ Dimensity 700 ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳಿದ್ದು, ಅವುಗಳು ಕ್ರಮವಾಗಿ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಸಾಮರ್ಥ್ಯ ಸ್ಟೋರೇಜ್ ಆಯ್ಕೆ ಪಡೆದಿದೆ.

ಕ್ಯಾಮೆರಾ ರಚನೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ 2 ಮೆಗಾ ಪಿಕ್ಸಲ್ ಸೆನ್ಸಾರ್ ಬಲವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 8 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಬ್ಯಾಕ್‌ಅಪ್
ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇದರೊಂದಿಗೆ ಸೈಡ್ ಮೌಂಟ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಆಂಡ್ರಾಯ್ಡ್ 11 ಓಎಸ್, 4G VoLTE, ವೈಫೈ, ಬ್ಲೂಟತ್, ಜಿಪಿಎಸ್ ಆಡಿಯೊ ಜಾಕ್ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಇತರೆ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ F42 5G ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಸ್ಲಾಟ್ ಆಯ್ಕೆ, ಎಲ್‌ಇಡಿ ಫ್ಲ್ಯಾಶ್ ಸೌಲಭ್ಯಗಳನ್ನು ಪಡೆದಿದೆ. ಹಾಗೆಯೇ ಈ ಫೋನ್ ಅಕ್ವಾ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆ ಪಡೆದಿದೆ.


Click it and Unblock the Notifications








