ಸದ್ಯದಲ್ಲೇ ಲಗ್ಗೆ ಇಡಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G ಫೋನ್: ಬೆಲೆ ಎಷ್ಟು?
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಹೊಸದಾಗಿ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಸಿದ್ಧತೆ ಮಾಡಿದೆ. ಈಗಾಗಲೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F ಸರಣಿಯಲ್ಲಿ ಹಲವು ಭಿನ್ನ ಬೆಲೆಯ ಫೋನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದ್ದು, ಆ ಸಾಲಿಗೆ ಈಗ ಹೊಸದಾಗಿ 'ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G' (Galaxy F54 5G) ಸ್ಮಾರ್ಟ್‌ಫೋನ್ ಸೇರ್ಪಡೆ ಮಾಡಲಿದೆ.
ಹೌದು, ಸ್ಯಾಮ್‌ಸಂಗ್ ಕಂಪನಿಯು ಶೀಘ್ರದಲ್ಲೇ ನೂತನವಾಗಿ 'ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G' (Galaxy F54 5G) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದ್ದು, ಈ ಫೋನ್ ಕೆಲವು ಫೀಚರ್ಸ್‌ಗಳಿಂದ ಗ್ರಾಹಕರ ಕುತೂಹಲ ಹೆಚ್ಚಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್ Exynos 1380 ಪ್ರೊಸೆಸರ್ ಹೊಂದಿರಲಿದೆ.

ಜೊತೆಗೆ ಇತ್ತೀಚಿಗಿನ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಒಳಗೊಂಡಿರಲಿದೆ. ಹಾಗೆಯೇ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರಲಿದೆ ಎಂದು ಹೇಳಲಾಗ್ತಿದೆ. ಅಂದಹಾಗೆ ಇದೇ ಮೇ ಕೊನೆಯ ವಾರದಲ್ಲಿ ಅನಾವರಣ ಆಗುವ ನಿರೀಕ್ಷೆಗಳು ಇವೆ.
ಹಾಗೆಯೇ ಈ ನೂತನ ಫೋನ್ ಸೂಪರ್ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, 120Hz ರಿಫ್ರೆಶ್ ರೇಟ್ ಅನ್ನು ಪಡೆದಿರಲಿದೆ. ಇನ್ನು ಈ ಫೋನ್ ಹಿಂಬದಿಯ ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇರಲಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಗ್ಯಾಲಕ್ಸಿ F54 5G ಡಿಸ್‌ಪ್ಲೇ ಮತ್ತು ಪ್ರೊಸೆಸರ್ : ಈ ಸ್ಮಾರ್ಟ್‌ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರಲಿದ್ದು, 6.67 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಯನ್ನು ಪಡೆದಿರಲಿದೆ. ಇನ್ನು ಈ ಫೋನ್ ಸ್ಯಾಮ್‌ಸಂಗ್‌ನ Exynos 1380 ಪ್ರೊಸೆಸರ್ ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿಗಿನ 13 ಓಎಸ್ ಸಪೋರ್ಟ್ ಸಹ ಪಡೆದಿರಲಿದೆ. ಜೊತೆಗೆ 6GB RAM + 128GB ಮತ್ತು 8GB RAM + 256GB ಆಯ್ಕೆಗಳಲ್ಲಿ ಬರಲಿದೆ ಎನ್ನಲಾಗಿದೆ.
ಗ್ಯಾಲಕ್ಸಿ F54 5G ಕ್ಯಾಮೆರಾ ರಚನೆ : ಗ್ಯಾಲಕ್ಸಿ F54 5G ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಪಡೆದಿರಲಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಪಡೆದಿರಲಿದೆ. ಇನ್ನು ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇರುವ ನಿರೀಕ್ಷೆಗಳಿವೆ.

ಗ್ಯಾಲಕ್ಸಿ F54 5G ಬ್ಯಾಟರಿ ಬ್ಯಾಕ್‌ಅಪ್ : ಈ ಫೋನ್ 6,000 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಜೊತೆಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದೆ. ಇದರೊಂದಿಗೆ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್-C ಪೋರ್ಟ್ ಆಯ್ಕೆಗಳು ಇರಲಿವೆ. ವರದಿಯ ಪ್ರಕಾರ 199g ತೂಗುತ್ತದೆ (6,000mAh ಬ್ಯಾಟರಿಯ ಹೊರತಾಗಿಯೂ) ಮತ್ತು 8.4mm ತೆಳುವಾಗಿದೆ.
ಗ್ಯಾಲಕ್ಸಿ F54 5G ಲಭ್ಯತೆ : ಗ್ಯಾಲಕ್ಸಿ F54 5G ಫೋನ್ ಇದೇ ಏಪ್ರಿಲ್ 2023 ರ ಕೊನೆಯ ವಾರದಲ್ಲಿ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 25,000 ರೂ. ಗಳ ಆಸುಪಾಸು ಇರಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications








