Samsung: ಲಾಂಚ್ ಆಗುವ ಮುನ್ನವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಬೆಲೆ ಮಾಹಿತಿ ಲೀಕ್... ಫೀಚರ್ಸ್ ಏನಿದೆ?
ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಅಗತ್ಯ ಡಿವೈಸ್‌ಗಳಾಗಿದ್ದು, ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಸಹಕಾರಿಯಾಗಿವೆ. ಈ ಕಾರಣಕ್ಕೆ ಬಳಕೆದಾರರು ಫೋನ್ ಅನ್ನು ಒಂದು ಕ್ಷಣವೂ ಬಿಟ್ಟಿರಲಾರರು. ಅದರಂತೆ ಪ್ರಮುಖ ಸ್ಯಾಮ್‌ಸಂಗ್ ಕೆಲವೇ ದಿನಗಳಲ್ಲಿ ಹೊಸ ಫೋನ್ ಅನ್ನು ಲಾಂಚ್ ಮಾಡಲಿದ್ದು, ಆದರೆ ಈ ಫೋನ್ ಲಾಂಚ್ ಆಗುವ ಮುನ್ನವೇ ಇದರ ಪ್ರಮುಖ ಫೀಚರ್ಸ್ ಲೀಕ್ ಆಗಿದೆ.
ಹೌದು, ಸ್ಯಾಮ್‌ಸಂಗ್ ಭಾರತದಲ್ಲಿ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್ (Samsung Galaxy F55 5G smartphone) ಅನ್ನು ಮೇ 16 ರಂದು ಲಾಂಚ್ ಮಾಡಲು ಮುಂದಾಗಿತ್ತು. ಆದರೆ ಕೆಲವು ಕಾರಣಗಳಿಂದ ಬ್ರ್ಯಾಂಡ್ ಅದನ್ನು ಮೇ 27 ಕ್ಕೆ ಮುಂದೂಡಿದೆ. ಈ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಮುನ್ನವೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದ್ದು, ಈ ನಡುವೆ ಈ ಫೋನ್‌ನ ಬೆಲೆ ಬಗ್ಗೆಯೂ ಮಾಹಿತಿ ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್‌ನ ಯಾವ ವೇರಿಯಂಟ್‌ಗೆ ಎಷ್ಟು ಬೆಲೆ?, ಫೀಚರ್ಸ್ ಏನಿದೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್: ಈ ಫೋನ್ ಬಗ್ಗೆ ಸಾಕಷ್ಟು ಮಾಹಿತಿ ಲೀಕ್ ಆಗಿವೆ . ಈ ನಡುವೆ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಹಂಚಿಕೊಂಡ ಸ್ಕ್ರೀನ್‌ಶಾಟ್ ಪ್ರಕಾರ, ಗ್ಯಾಲಕ್ಸಿ A55 5G ಸ್ಮಾರ್ಟ್‌ಫೋನ್ ಒಟ್ಟಾರೆ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. ಅಂದರೆ 8GB+128GB ಸ್ಟೋರೇಜ್ ವೇರಿಯಂಟ್ ಫೋನ್‌ಗೆ 26,999 ರೂ.ಗಳ ಬೆಲೆ ನಿಗದಿ ಮಾಡಲಾಗುತ್ತದೆ ಎನ್ನಲಾಗಿದ್ದು, 8GB+256GB ಸ್ಟೋರೇಜ್ ವೇರಿಯಂಟ್ ಫೋನ್‌ಗೆ 29,999ರೂ.ಗಳು ಹಾಗೂ 12GB+256GB ಸ್ಟೋರೇಜ್ ವೇರಿಯಂಟ್ ಫೋನ್‌ಗೆ 32,999 ರೂ.ಗಳು ಇರಬಹುದು ಎಂದು ಲೀಕ್ ಮಾಹಿತಿ ಮೂಲಕ ತಿಳಿದುಬಂದಿದೆ.
ಇಷ್ಟೇ ಅಲ್ಲದೆ ಈ ಎಲ್ಲಾ ಮೂರು ವೇರಿಯಂಟ್ ಫೋನ್‌ಗಳು ಸೇಲ್ ಸಂದರ್ಭದಲ್ಲಿ ಬ್ಯಾಂಕ್ ಕಾರ್ಡ್ ರಿಯಾಯಿತಿಯನ್ನು ಪಡೆಯುತ್ತವೆ ಎಂದು ಈ ಹಿಂದೆ ವರದಿ ಮಾಡಲಾಗಿದ್ದು, ಅದರಂತೆ ಗ್ರಾಹಕರು ಈ ಫೋನ್‌ಗಳ ಬೆಲೆ ಮೇಲೆ 2,000 ರೂ.ಗಳಷ್ಟು ಆಫರ್ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಹೊಸ ಫೋನ್ ಅನ್ನು ಖರೀದಿ ಮಾಡುವ ಜೊತೆಗೆ ಹಣವನ್ನೂ ಉಳಿತಾಯ ಮಾಡಿದ ಸಂತಸ ನಿಮ್ಮದಾಗುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ನಿರೀಕ್ಷಿತ ಫೀಚರ್ಸ್: ಇನ್ನು ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್, ಫುಲ್‌ಹೆಚ್‌ಡಿ+ ರೆಸಲ್ಯೂಶನ್ ಮತ್ತು 1,000 ನಿಟ್ಸ್ ನ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.7 ಇಂಚಿನ ಸೂಪರ್ ಅಮೋಲೆಡ್ ಪ್ಲಸ್ ಡಿಸ್ಪ್ಲೇಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ.
ಇಷ್ಟೇ ಅಲ್ಲದೆ ಈ ಫೋನ್‌ನ ಕ್ಯಾಮೆರಾ ಫೀಚರ್ಸ್ ಸಹ ಲೀಕ್ ಆಗಿದೆ. ಅಂದರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿರಲಿದೆ ಎಂದು ತಿಳಿದುಬಂದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.
ಇದರೊಂದಿಗೆ ಈ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್ 14 ಆಧಾರಿತ ಒನ್ UI 6.0 ನಲ್ಲಿ ರನ್ ಆಗುತ್ತದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಅದಾಗ್ಯೂ ಲಾಂಚ್ ಸಂದರ್ಭದಲ್ಲಿ ಇದರಲ್ಲಿನ ಕೆಲವು ಮಾಹಿತಿ ಬದಲಾಗಬಹುದು. ಈ ಫೋನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








