Home
ಸುದ್ದಿಜಾಲ

ಸ್ಯಾಮ್‌ಸಂಗ್‌ನಿಂದ ಬರಲಿದೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌!..ಹೇಗಿದೆ ಅಂತೀರಾ?

ಮೊಬೈಲ್ ಮಾರುಕಟ್ಟೆಗೆ ಸ್ಯಾಮ್‌ಸಂಗ್ ನೂತನವಾಗಿ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ತಯಾರಿ ನಡೆಸಿದೆ. ಈಗಾಗಲೇ ಸ್ಯಾಮ್‌ಸಂಗ್ ಕಂಪನಿಯು ತನ್ನ ಗ್ಯಾಲಕ್ಸಿ F ಸರಣಿ ಯಲ್ಲಿ ಕೆಲವು ಭಿನ್ನ ಶ್ರೇಣಿಯ ಮೊಬೈಲ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಲಿಸ್ಟ್‌ಗೆ ಈಗ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್‌ ಅನ್ನು ಸೇರ್ಪಡೆ ಮಾಡಲು ಸಜ್ಜಾಗಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಸದ್ಯದಲ್ಲೇ ಹೊಸದಾಗಿ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದ್ದು, ಈ ಫೋನ್ ಗ್ಯಾಲಕ್ಸಿ F54 5G ಫೋನಿನ ಅಪ್‌ಗ್ರೇಡ್‌ ಆವೃತ್ತಿ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಬರಲಿರುವ ನೂತನ ಫೋನಿನ ಮಾಡೆಲ್‌ ಸಂಖ್ಯೆ SM-E556B/DS ಆಗಿದೆ. ಈ ಫೋನ್‌ ಬಹುತೇಕ ಗ್ಯಾಲಕ್ಸಿ F54 5G ಮೊಬೈಲ್‌ ಫೀಚರ್ಸ್‌ ಹೋಲುತ್ತದೆ ಎನ್ನಲಾಗಿದೆ.

ಸ್ಯಾಮ್‌ಸಂಗ್‌ನಿಂದ ಬರಲಿದೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌!..ಹೇಗಿದೆ ಅಂತೀರಾ?

ಎಂಟ್ರಿ ಕೊಡಲಿರುವ ಗ್ಯಾಲಕ್ಸಿ F55 5G ಫೋನ್‌ ಮೀಡ್‌ರೇಂಜ್‌ ಪ್ರೈಸ್‌ ಟ್ಯಾಗ್‌ನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಈ ಫೋನ್‌ BIS ಪ್ರಮಾಣೀಕರಣದಲ್ಲಿ ಗುರುತಿಸಿಕೊಂಡಿದ್ದು, ಇದು Wi-Fi ಪ್ರಮಾಣೀಕರಣವನ್ನು ಕೂಡಾ ಪಡೆದುಕೊಂಡಿದೆ. ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F54 5G ಫೀಚರ್ಸ್

ಸ್ಯಾಮ್‌ಸಂಗ್‌ ಸಂಸ್ಥೆಯ ಈ ಮೊಬೈಲ್‌ ಹೆಚ್ಚಿನ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, 6.67 ಇಂಚಿನ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ ಸ್ಯಾಮ್‌ಸಂಗ್‌ನ Exynos 1380 ಪ್ರೊಸೆಸರ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು, ಇತ್ತೀಚಿಗಿನ 13 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಇದರ ಜೊತೆಗೆ ಇದು 8 GB RAM + 256 GB ಆಯ್ಕೆಗಳಲ್ಲಿ ಪಡೆದಿದೆ.

ಇನ್ನು ಗ್ಯಾಲಕ್ಸಿ F54 5G ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯ ಹೊಂದಿದ್ದು, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಇನ್ನು ಇದರ ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇದೆ.

ಇದು 6,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇದರೊಂದಿಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಹಾಗೆಯೇ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್ - C ಪೋರ್ಟ್ ಆಯ್ಕೆಗಳು ಕೂಡಾ ಇವೆ.

ಇನ್ನು ಸಂಸ್ಥೆಯ ಗ್ಯಾಲಕ್ಸಿ A54 5G ಮೊಬೈಲ್‌ 6.4 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಪಡೆದಿದೆ. ಇದರೊಂದಿಗೆ ಎಕ್ಸಿನೋಸ್ 1380 SoC ಪ್ರೊಸೆಸರ್‌ ಮೂಲಕ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆಧಾರಿತ ಒನ್‌ UI 5.1 ಸಪೋರ್ಟ್ ಇದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಈ ಫೋನ್‌ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಆಯ್ಕೆಯನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32 ಮೆಗಾ ಪಿಕ್ಸಲ್ ಕ್ಯಾಮೆರಾ ಸೆನ್ಸರ್‌ ಒಳಗೊಂಡಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 25W ವೇಗದ ಚಾರ್ಜಿಂಗ್‌ ಸಪೋರ್ಟ್ ಪಡೆದುಕೊಂಡಿದೆ.

Best Mobiles in India

English summary
Samsung Galaxy F55 5G support page is live in India. it soon launch. all other details check here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+