Home
ಸುದ್ದಿಜಾಲ

ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಸ್ಯಾಮ್‌ಸಂಗ್‌ನ ಈ ಹೊಸ ಫೋನ್‌!

ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಈಗಾಗಲೇ ಗ್ಯಾಲಕ್ಸಿ F ಸರಣಿಯಲ್ಲಿ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಕಂಪನಿಯು ಇದೀಗ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆಸಿದ್ದು, ಈ ಫೋನಿನ ಕೆಲವು ಲೀಕ್ ಫೀಚರ್ಸ್‌ ಸದ್ದು ಮಾಡುತ್ತಿವೆ.

ಹೌದು, ಸ್ಯಾಮ್‌ಸಂಗ್‌ ಸಂಸ್ಥೆಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F55 5G ಸ್ಮಾರ್ಟ್‌ಫೋನ್‌ ಕುರಿತಾಗಿ ಹೊಸ ಅಪ್‌ಡೇಟ್‌ ಏನದಂರೆ, ಈ ಫೋನ್‌ ಮುಂದಿನ ವಾರವೇ (ಮೇ 17 ರಂದು) ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಇನ್ನು ಈ ಫೋನಿನ ಬೆಲೆಯು 30,000ರೂ. ಗಳ ಒಳಗೆ ಇರಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಸ್ಯಾಮ್‌ಸಂಗ್‌ನ ಈ ಹೊಸ ಫೋನ್‌!

ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್‌ ಸಪೋರ್ಟ್‌ ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಈ ಫೋನ್‌ 8GB RAM ವೇರಿಯಂಟ್‌ ಆಯ್ಕೆಯಲ್ಲಿ ಲಗ್ಗೆ ಇಡಲಿದೆ ಎಂದು ಹೇಳಲಾಗಿದೆ. ಹಾಗಾದರೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F55 5G ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ನಿರೀಕ್ಷಿತ ಫೀಚರ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಮೊಬೈಲ್‌ 6.7 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಪಡೆದಿರಲಿದೆ. ಹಾಗೆಯೇ ಈ ಫೋನ್‌ 1000 ನಿಟ್ಸ್ ಗರಿಷ್ಠ ಬ್ರೈಟ್ನೆಸ್‌ ಸೌಲಭ್ಯ ಪಡೆದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಅಲ್ಲದೇ ಈ ಮೊಬೈಲ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 7 ಜೆನ್‌ 1 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿರುವ ನಿರೀಕ್ಷೆಗಳು ಇವೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಇರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಫೋನ್‌ 8GB RAM ಹಾಗೂ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಅನ್ನು ಪಡೆದಿರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಮೊಬೈಲ್‌ ಹಿಂಭಾಗದಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಪಡೆದಿರಲಿದೆ. ಎರಡನೇ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಸೌಲಭ್ಯ ಆಗಿರಲಿದ್ದು, ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಪಡೆದಿರಲಿದೆ. ಇನ್ನು ಈ ಫೋನಿನ ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇರುವ ಸಾಧ್ಯತೆ.

ಮುಂದಿನ ವಾರ ಲಾಂಚ್‌ ಆಗಲಿರುವ ಈ ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದರ ಜೊತೆಗೆ 45W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿರಲಿದೆ. ಹಾಗೆಯೇ 5G, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್ - C ಪೋರ್ಟ್ ಆಯ್ಕೆಗಳು ಕೂಡಾ ಇರಲಿವೆ.

ಹಾಗೆಯೇ ಇತ್ತೀಚಿನ ಕೆಲವು ಲೀಕ್‌ ಮಾಹಿತಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ F55 5G ಫೋನಿನ ಬಗ್ಗೆ ಕೆಲವು ಫೀಚರ್ಸ್ ಅನ್ನು ಬಹಿರಂಗಪಡಿಸಿದೆ. ಅಂದಹಾಗೆ ಈ ಮೊಬೈಲ್‌ ಆರಂಭಿಕ ಬೆಲೆಯು 30,000ರೂ.ಗಳ ಒಳಗೆ ಇರಲಿದೆ ಎನ್ನಲಾಗಿದೆ.

Best Mobiles in India

English summary
Samsung Galaxy F55 5G will launch on May 17 in India. check price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+