ಸ್ಯಾಮ್‌ಸಂಗ್‌ನ ಎರಡು ಹೊಸ ಫಿಟ್ನೆಸ್ ಡಿವೈಸ್‌ಗಳ ಬಿಡುಗಡೆ!
ಸ್ಯಾಮ್‌ಸಂಗ್ ಕಂಪನಿಯು ಈಗಾಗಲೇ ಮಾರುಕಟ್ಟೆಗೆ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದ್ದು, ಇದೀಗ ಫಿಟ್ನೆಸ್ ಟ್ರಾಕಿಂಗ್ ಬ್ಯಾಂಡ್ ಡಿವೈಸ್‌ಗಳತ್ತ ಗಮನ ನೀಡಿದೆ. ಈ ನಿಟ್ಟಿನಲ್ಲಿ ಕಂಪನಿಯು 'ಗ್ಯಾಲ್ಯಾಕ್ಸಿ ಫಿಟ್' ಮತ್ತ 'ಗ್ಯಾಲ್ಯಾಕ್ಸಿ ಫಿಟ್ ಇ' ಹೆಸರಿನ ಎರಡು ಫಿಟ್ನೆಸ್ ಬ್ಯಾಂಡ್ ಡಿವೈಸ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಫಿಟ್ನೆಸ್ ಪ್ರಿಯರಿಗೆ ಖುಷಿ ನೀಡಿದೆ. ಇವು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿವೆ.

ಹೌದು, ಸ್ಯಾಮ್‌ಸಂಗ್ ದೇಶಿಯ ಮಾರುಕಟ್ಟೆಗೆ (Galaxy Fit ಮತ್ತು Galaxy Fit e) 'ಗ್ಯಾಲ್ಯಾಕ್ಸಿ ಫಿಟ್' ಮತ್ತು 'ಗ್ಯಾಲ್ಯಾಕ್ಸಿ ಫಿಟ್ ಇ' ಫಿಟ್ನೆಸ್ ಡಿವೈಸ್‌ಗಳನ್ನು ಲಾಂಚ್ ಮಾಡಿದೆ. ಈ ಡಿವೈಸ್‌ಗಳು ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಯಾಮ್‌ಸಂಗ್ ಹೆಲ್ತ್ ಆಪ್‌ಗೆ ಬೆಂಬಲ ನೀಡಲಿವೆ. ಗ್ಯಾಲ್ಯಾಕ್ಸಿ ಫಿಟ್ ಡಿವೈಸ್ ಬೆಲೆಯು 9,990ರೂ.ಗಳು ಮತ್ತು ಗ್ಯಾಲ್ಯಾಕ್ಸಿ ಫಿಟ್ ಇ' ಡಿವೈಸ್ ಬೆಲೆಯು 2,590ರೂ.ಗಳು ಆಗಿದೆ.

ಈ ಎರಡು ಡಿವೈಸ್‌ಗಳು ದೈನಂದಿನ ಆಕ್ಟಿವಿಟಿಗಳನ್ನು ಟ್ರಾಕ್ ಮಾಡಲಿದ್ದು, 5ATM ವಾಟರ್ ರೆಸಿಸ್ಟನ್ಸ್ ಆಯ್ಕೆಯನ್ನು ಪಡೆದುಕೊಂಡಿವೆ. ಸ್ಮಾರ್ಟ್‌ಫೋನಿನ ಮೆಸೆಜ್, ಅಲಾರಂ, ವೆದರ್ ಮತ್ತು ಕ್ಯಾಲೆಂಡರ್ ಅಲರ್ಟ್‌ಗಳನ್ನು ಪಡೆಯುವ ಸೌಲಭ್ಯಗಳನ್ನು ಹೊಂದಿವೆ. ಹಾಗಾದರೇ ಸ್ಯಾಮ್‌ಸಂಗ್ ಡಿವೈಸ್‌ಗಳ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗ್ಯಾಲ್ಯಾಕ್ಸಿ ಫಿಟ್ ಡಿಸ್‌ಪ್ಲೇ ಮತ್ತು ರಚನೆ
ಗ್ಯಾಲ್ಯಾಕ್ಸಿ ಫಿಟ್ ಡಿವೈಸ್ 0.95 ಇಂಚಿನ ಪೂರ್ಣ ಕಲರ್ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಬಳಕೆದಾರರು ಆಕ್ಟಿವಿಟಿಯಲ್ಲಿ ಇದ್ದಾಗಲೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಲಿದೆ. ಅತ್ಯುತ್ತಮ ಡಿಸೈನ್‌ನಲ್ಲಿರುವ ಈ ಡಿವೈಸ್ 18.3x45.1x11.2mm ಸುತ್ತಳತೆಯ ರಚನೆಯನ್ನು ಹೊಂದಿದ್ದು, ಇದರ ತೂಕವು ಕೇವಲ 23 ಗ್ರಾಂ ಆಗಿದೆ.

ಗ್ಯಾಲ್ಯಾಕ್ಸಿ ಫಿಟ್ ಮೆಮೊರಿ
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಫಿಟ್ ಸಾಧನವು FreeRTOS ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೂ 2MB RAM ಸಾಮರ್ಥ್ಯವನ್ನು ಒಳಗೊಂಡಿರುವ ಜೊತೆಗೆ 32MB ROM ಶಕ್ತಿಯನ್ನು ಪಡೆದುಕೊಂಡಿದೆ. ಸ್ಯಾಮ್‌ಸಂಗ್ ಹೆಲ್ತ್ ಆಪ್ ಅನ್ನು ಬೆಂಬಲಿಸಲಿದ್ದು, ಆಕ್ಟಿವಿಟಿಗಳನ್ನು ಟ್ರಾಕ್ ಮಾಡಬಹುದಾಗಿದೆ.

ಗ್ಯಾಲ್ಯಾಕ್ಸಿ ಫಿಟ್ ವಿಶೇಷ ಫೀಚರ್ಸ್
ಈ ಫಿಟ್ನೆಸ್ ಡಿವೈಸ್ ಆಟೋ ವರ್ಕೌಟ್ ಟ್ರಾಕಿಂಗ್ ಆಯ್ಕೆಯನ್ನು ಹೊಂದಿದ್ದು, ವಾಕಿಂಗ್, ಡೈನಾಮಿಕ್ ವರ್ಕೌಟ್ ಮತ್ತು ರನ್ನಿಂಗ್ ಆಕ್ಟಿವಿಟಿಗಳನ್ನು ಆಟೋ ಡಿಟೆಕ್ಟ್ ಮಾಡಿ ಟ್ರಾಕ್ ಮಾಡಲಿದೆ. ಸ್ಲಿಪ್ ಟ್ರಾಕಿಂಗ್ ಸೌಲಭ್ಯವು ಇದ್ದು, ಇದರೊಂದಿಗೆ ನೋಟಿಫಿಕೇಶನ್, ಮೆಸ್ಸೆಜ್, ಕರೆಗಳು ಮತ್ತು ಕ್ಯಾಲೆಂಡರ್ ಇವೆಂಟ್ಸ್‌ಗಳನ್ನು ಆಯ್ಕೆಗಳಿಗೆ ಬೆಂಬಲ ನೀಡಲಿದೆ.

ಗ್ಯಾಲ್ಯಾಕ್ಸಿ ಫಿಟ್ ಬ್ಯಾಟರಿ ಶಕ್ತಿ
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಫಿಟ್ 120mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದ್ದು, ಹೆಚ್ಚು ಕಾಲ ಫಿಟ್ನೆಸ್ ಡಿವೈಸ್‌ಗೆ ಬ್ಯಾಟರಿ ಒದಗಿಸಲಿದೆ. ಇದರಲ್ಲಿ ಇತ್ತೀಚಿನ ಬ್ಲೂಟೂತ್ ವರ್ಷನ್ v5.0 ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ನೊಂದಿಗೆ ಅತ್ಯುತ್ತಮ ಕನೆಕ್ಟ್ ಸೌಲಭ್ಯ ಒದಗಿಸಲಿದೆ. ಇನ್‌ಬಿಲ್ಟ್ array ಟ್ರಾಕಿಂಗ್ ಸೆನ್ಸಾರ್‌ಗಳಿವೆ.

ಗ್ಯಾಲ್ಯಾಕ್ಸಿ ಫಿಟ್ e ಡಿಸ್‌ಪ್ಲೇ ಮತ್ತು ರಚನೆ
ಗ್ಯಾಲ್ಯಾಕ್ಸಿ ಫಿಟ್ e ಡಿವೈಸ್ 64x128 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ 0.74 ಇಂಚಿನ PMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಡಿವೈಸ್ 40.2x16mm ವಿನ್ಯಾಸದ ರಚನೆಯನ್ನು ಹೊಂದಿದ್ದು, ಇದರ ತೂಕವು 15 ಗ್ರಾಂ ಆಗಿದೆ. ಹಗುರವಾಗಿದ್ದು, ಧರಿಸಲು ಕಂಫರ್ಟ್ ಎನಿಸಲಿದೆ.

ಗ್ಯಾಲ್ಯಾಕ್ಸಿ ಫಿಟ್ e ಮೆಮೊರಿ ಮತ್ತು ಬ್ಯಾಟರಿ
ಗ್ಯಾಲ್ಯಾಕ್ಸಿ ಫಿಟ್ e ಡಿವೈಸ್ ಸಹ FreeRTOS ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 128KB RAM ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು 70mAh ಬ್ಯಾಟರಿ ಶಕ್ತಿಯನ್ನು ಒಳಗೊಂಡಿದ್ದು, ಒಮ್ಮೆ ಚಾರ್ಜ್ ಮಾಡಿದರೇ ಸುಮಾರು 13 ದಿನಗಳ ಕಾಲ ಬ್ಯಾಟರಿ ಬಾಳಿಕೆ ಒದಗಿಸಲಿದೆ. ಬ್ಲೂಟೂತ್ v5.0 ಬೆಂಬಲ ಇದೆ.

ಡಿವೈಸ್‌ಗಳ ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಫಿಟ್ ಡಿವೈಸ್ ಜನಪ್ರಿಯ ಇ ಕಾಮರ್ಸ್ ಜಾಲತಾಣಗಳಾದ ಫ್ಲಿಪ್‌ಕಾರ್ಟ್, ಮಂತ್ರಾ, ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್, ಸೇರಿದಂತೆ ಕಂಪನಿಯ ಅಧಿಕೃತ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ದೊರೆಯಲಿದೆ. ಗ್ಯಾಲ್ಯಾಕ್ಸಿ ಫಿಟ್ e ಡಿವೈಸ್ ಪ್ರೀ ಬುಕ್ಕಿಂಗ್ ಅನ್ನು ಫ್ಲಿಪ್‌ಕಾರ್ಟ್ ಇದೇ ಜುಲೈ 1ರಿಂದ ಆರಂಭಿಸಲಿದೆ.


Click it and Unblock the Notifications








