Samsung: ಸ್ಯಾಮ್‌ಸಂಗ್‌ನ ಈ ಫೋನ್ ಕೇವಲ 7,499ರೂ.ಗೆ ಲಭ್ಯ! 5000mAh ಬ್ಯಾಟರಿ... 13MP ಕ್ಯಾಮೆರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy) ಫೋನ್‌ಗಳಿಗೆ ಭಾರತದಲ್ಲಿ ಬಹಳಷ್ಟು ಬೇಡಿಕೆ ಇದೆ. ಅದರಲ್ಲೂ ಕೆಲವು ತಿಂಗಳ ಹಿಂದೆಯಷ್ಟೇ ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಗ್ರಾಹಕರಿಗೆ ವಿವಿಧ ಆಯ್ಕೆಗಳನ್ನು ನೀಡುತ್ತಾ ಬರುತ್ತಿದೆ. ಈ ನಡುವೆ ಸ್ಯಾಮ್‌ಸಂಗ್‌ನ ಈ ಬಜೆಟ್ ಫೋನ್ ಇನ್ನೂ ಅಗ್ಗದ ದರದಲ್ಲಿ ಲಭ್ಯವಾಗಲಿದೆ.
ಹೌದು, ಭಾರತದಲ್ಲಿ ಬಹಳಷ್ಟು ಜನಪ್ರಿಯತೆ ಪಡೆದುಕೊಂಡ ಸ್ಯಾಮ್‌ಸಂಗ್ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ಗೆ (Samsung Galaxy M04 Smartphone) ಈಗ ಭರ್ಜರಿ ರಿಯಾಯಿತಿ ನೀಡಲಾಗಿದೆ. ಅಂದರೆ ಅಮೆಜಾನ್‌ನಲ್ಲಿ ಈ ಫೋನ್‌ಗೆ 44 % ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಅದರಲ್ಲೂ ಕ್ಯಾಮೆರಾ ಹಾಗೂ ಹೆಚ್ಚಿನ ಫೀಚರ್ಸ್ ಏನು ಬೇಡ ದೀರ್ಘ ಬಾಳಿಕೆ ಬರುವ ಸ್ಯಾಮ್‌ಸಂಗ್ ಫೋನ್ ಬೇಕು ಎನ್ನುವರಿಗೆ ಇದು ಉತ್ತಮ ಆಯ್ಕೆ ಆಗಿದೆ. ಹಾಗಿದ್ರೆ, ಇದರ ಆಫರ್ ವಿವರ ಹಾಗೂ ಪ್ರಮುಖ ಫೀಚರ್ಸ್ ಅನ್ನು ಗಮನಿಸೋಣ ಬನ್ನಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M04 ಆಫರ್ ವಿವರ: ಈ ಫೋನ್ ಅಮೆಜಾನ್‌ನಲ್ಲಿ (Amazon) 13,499 ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಆದರೆ ನೀವು ಇದನ್ನು ಕೇವಲ 7,499ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಇದಕ್ಕೆ 44% ಡಿಸ್ಕೌಂಟ್ ನೀಡಲಾಗಿದೆ. ಇಷ್ಟೇ ಅಲ್ಲದೆ ಈ ಫೋನ್ ಮೇಲೆ ಬ್ಯಾಂಕ್ ಆಫರ್, ವಿನಿಮಯ ಆಫರ್ ಅನ್ನೂ ಸಹ ನೀಡಲಾಗಿದೆ. ಇದರಿಂದ ನೀವು ಇನ್ನೂ ಕಡಿಮೆ ಬೆಲೆಗೆ ಇದನ್ನು ಖರೀದಿ ಮಾಡಬಹುದು.
ಈ ಫೋನ್ ಖರೀದಿ ಮೇಲೆ ಕ್ಯಾಶ್‌ಬ್ಯಾಕ್ ಆಯ್ಕೆಯನ್ನೂ ಸಹ ನೀಡಲಾಗಿದೆ. ಇದರೊಂದಿಗೆ ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್‌ನಲ್ಲಿ 3 ತಿಂಗಳ ಪ್ರಧಾನ ಸದಸ್ಯತ್ವ ಹಾಗೂ 2,000ರೂ.ಗಳ ವೆಲ್‌ಕಮ್ ಬಹುಮಾನಗಳು, ಶಾಪಿಂಗ್‌ನಲ್ಲಿ ಪ್ರೈಮ್ ಸದಸ್ಯರಿಗೆ 5% ಕ್ಯಾಶ್‌ಬ್ಯಾಕ್ ಸೇರಿದಂತೆ ಅನೇಕ ಪ್ರಯೋಜನಗಳು ಈ ಫೋನ್ ಖರೀದಿ ಮಾಡಿದ್ರೆ ಸಿಗಲಿವೆ. ಇದರೊಂದಿಗೆ ಯಾವುದೇ ಯುಪಿಐ ಪಾವತಿಗಳನ್ನು ಬಳಸಿಕೊಂಡು ಖರೀದಿ ಮಾಡಿದರೂ ಸಹ ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರೊಟ್ಟಿಗೆ ನೀವು ನೋ ಕಾಸ್ಟ್ ಇಎಮ್‌ಐ ಆಯ್ಕೆ ಮೂಲಕವೂ ಈ ಫೋನ್ ಖರೀದಿ ಮಾಡಬಹುದು.
ಸ್ಯಾಮ್‌ಸಂಗ್ ಗ್ಯಾಲಕ್ಸಿ M04 ಡಿಸ್‌ಪ್ಲೇ ವಿವರ: ಈ ಫೋನ್ ಇಷ್ಟು ಕಡಿಮೆ ಬೆಲೆಗೆ ಲಭ್ಯ ಇದೆ ಎಂದರೆ ಮೊದಲು ಇದರ ಪ್ರಮುಖ ಫೀಚರ್ಸ್ ಅನ್ನು ತಿಳಿದುಕೊಳ್ಳಿ. ಅಂದರೆ ಇದು 6.5 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ (LCD display) ಹೊಂದಿದ್ದು, ಇದು ವಾಟರ್‌ಡ್ರಾಪ್ ನಾಚ್ ಶೈಲಿ ಪಡೆದುಕೊಂಡಿದೆ. ಇದರೊಂದಿಗೆ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M04 ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ (MediaTek Helio P35 processor) ಬಲ ಪಡೆದುಕೊಂಡಿದ್ದು, ಯಾವುದೇ ಕಾರ್ಯಗಳನ್ನು ಹೆಚ್ಚು ವೇಗವಾಗಿ ಮಾಡಬಹುದಾಗಿದೆ. ಇದಕ್ಕೆ ಮತ್ತಷ್ಟು ಬಲ ಎಂಬಂತೆ 4GB RAM ಹಾಗೂ ಆಕ್ಟಾ-ಕೋರ್ ಡ್ಯುಯಲ್ ಕಾರ್ಟೆಕ್ಸ್ A53 ಸಿಪಿಯು ಅನ್ನು ಈ ಫೋನ್ ಪಡೆದುಕೊಂಡಿದೆ. ಉಳಿದಂತೆ ಫೋನ್‌ನ ಪವರ್ ವಿಆರ್ GE8320 ಜಿಪಿಯು ಬಳಕೆದಾರರಿಗೆ ಉತ್ತಮ ಗುಣಮಟ್ಟದ ಗ್ರಾಫಿಕ್ಸ್ ಅನ್ನು ಆನಂದಿಸಲು ಅನುಮತಿಸುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M04 ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಬ್ಯಾಕಪ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದ್ದು, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಈ ಫೋನ್‌ನಲ್ಲಿದೆ. ಮುಖ್ಯವಾಗಿ ಈ ಫೋನ್ ಎಲ್ಇಡಿ ಲೈಟ್ ಆಯ್ಕೆ ಪಡೆದುಕೊಂಡಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಬಹುದಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಈ ಫೋನ್‌ನಲ್ಲಿದೆ.


Click it and Unblock the Notifications








