ಇಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ M11 ಮತ್ತು ಗ್ಯಾಲಕ್ಸಿ M01 ಫೋನ್‌ಗಳ ಸೇಲ್!
ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ಹೊಸ ಗ್ಯಾಲಕ್ಸಿ ಗ್ಯಾಲಕ್ಸಿ M11 ಹಾಗೂ ಗ್ಯಾಲಕ್ಸಿ M01 ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯಿಂದ ಗ್ರಾಹಕರನ್ನು ಸೆಳೆದಿವೆ. ಈ ಎರಡು ಫೋನ್‌ಗಳು ಇಂದು ಫ್ಲಿಪ್‌ಕಾರ್ಟ್ ತಾಣದಲ್ಲಿ ಮೊದಲ ಮಾರಾಟ ಆರಂಭಿಸಿವೆ. ಈ ಸ್ಮಾರ್ಟ್‌ಫೋನ್‌ಗಳ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತವೆ.

ಹೌದು, ಸ್ಯಾಮ್‌ಸಂಗ್‌ನ ಹೊಸ ಗ್ಯಾಲಕ್ಸಿ M11 ಹಾಗೂ ಗ್ಯಾಲಕ್ಸಿ M01 ಸ್ಮಾರ್ಟ್‌ಫೋನ್‌ಗಳ ಸೇಲ್ ಇಂದು (ಜೂ.9) ಫ್ಲಿಪ್‌ಕಾರ್ಟ್‌ನಲ್ಲಿ ಶುರುವಾಗಿದೆ. ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ 3GB RAM + 32GB ಮತ್ತು 4GB RAM + 64GB ವೇರಿಯಂಟ್ ಆಯ್ಕೆ ಹೊಂದಿದೆ. ಹಾಗೆಯೇ ಗ್ಯಾಲಕ್ಸಿ M01 3GB RAM + 32GB ಸ್ಟೋರೇಜ್‌ನ ಒಂದೇ ವೇರಿಯಂಟ್ ಆಯ್ಕೆ ಹೊಂದಿದೆ. ಇನ್ನು ಈ ಫೋನ್‌ಗಳು ಬ್ಲ್ಯಾಕ್, ಬ್ಲೂ ಮತ್ತು ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯಇವೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಗ್ಯಾಲಕ್ಸಿ M11 ಡಿಸ್‌ಪ್ಲೇ
ಸ್ಯಾಮ್‌ಸಂಗ್ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ 6.4 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಯನ್ನ ಹೊಂದಿದ್ದು, ಸ್ಕ್ರೀನ್ ಪಿಕ್ಸಲ್ ರೆಸಲ್ಯೂಶನ್ 720x1560 ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯು ಇನ್‌ಫಿನಿಟಿ ಮಾದರಿಯಲ್ಲಿದ್ದು, 19.5:9 ಅನುಪಾತವನ್ನು ಪಡೆದಿದೆ.

ಗ್ಯಾಲಕ್ಸಿ M11 ಪ್ರೊಸೆಸರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM + 32GB ಮತ್ತು 4GB RAM ಮತ್ತು 64GB ಆಂತರಿಕ ಸಂಗ್ರಹಣೆ ಸಾಮರ್ಥ್ಯದ ಆಯ್ಕೆಗಳಿವೆ.

ಗ್ಯಾಲಕ್ಸಿ M11 ಕ್ಯಾಮೆರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್, ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಗ್ಯಾಲಕ್ಸಿ M11 ಬ್ಯಾಟರಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದರೊಂದಿಗೆ 15 W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನ ಒಳಗೊಂಡಿದೆ. ಇದರೊಟ್ಟಿಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್, ವೈಫೈ, ಬ್ಲೂಟೂತ್, ಸೌಲಭ್ಯಗಳು ಸಹ ಇವೆ.

ಗ್ಯಾಲಕ್ಸಿ M01 ಫೀಚರ್ಸ್‌ಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ M01 720x1560 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.71 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ಇನ್ನು ಈ ಫೋನ್ ಸಹ ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಜೊತೆಗೆ 3GB RAM + 32GB ಸಾಮರ್ಥ್ಯದ ಒಂದೇ ವೇರಿಯಂಟ್ ಆಯ್ಕೆ ಪಡೆದಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಅವುಗಳು 13ಎಂಪಿ ಮ್ತು 2ಎಂಪಿ ಸೆನ್ಸಾರ್ ಬಲದಲ್ಲಿವೆ. ಇದರೊಂದಿಗೆ ಸೆಲ್ಫಿಗಾಗಿ 5ಎಂಪಿಯ ಕ್ಯಾಮೆರಾವನ್ನು ಒದಗಿಸಲಾಗಿದೆ. ಇನ್ನು ಈ ಫೋನ್ 4,000mAh ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿಲ್ಲ.

ಬೆಲೆ ಎಷ್ಟು?
ಸ್ಯಾಮ್‌ಸಂಗ್ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ 3GB/32GB ವೇರಿಯಂಟ್ ಬೆಲೆಯು 10,999ರೂ. ಆಗಿದೆ. ಹಾಗೆಯೇ 4GB/64GB ವೇರಿಯಂಟ್ ಬೆಲೆಯು 12,999ರೂ. ಆಗಿದೆ. ಇನ್ನೂ ಗ್ಯಾಲಕ್ಸಿ M01 ಫೋನ್ 3GB RAM ಮತ್ತು 32GB ವೇರಿಯಂಟ್ ಬೆಲೆಯು 8,999ರೂ. ಆಗಿದೆ.


Click it and Unblock the Notifications








