ಅಮೆಜಾನ್‌ನಲ್ಲಿ ಇಂದು ಅಗ್ಗದ ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಫೋನಿನ ಫಸ್ಟ್ ಸೇಲ್!
ಸ್ಯಾಮ್‌ಸಂಗ್ ಸಂಸ್ಥೆ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ನೂತನ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಮಾ.18) ಮಧ್ಯಾಹ್ನ 12ಕ್ಕೆ ಇ-ಕಾಮರ್ಸ್ ದೈತ್ಯ ಅಮೆಜಾನ್ ಹಾಗೂ ಅಧಿಕೃತ ಸ್ಯಾಮ್‌ಸಂಗ್ ವೆಬ್‌ಸೈಟ್ ಮೂಲಕ ಫಸ್ಟ್ ಸೇಲ್ ಪ್ರಾರಂಭಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ ಬೆಲೆಯು 10,999ರೂ.ಗೆ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಇಂದು ಮೊದಲ ಮಾರಾಟ ಪ್ರಾರಂಭಿಸಲಿದೆ. ಈ ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಕ್ರಮವಾಗಿ 64GB RAM + 64GB ಸ್ಟೋರೇಜ್ ಹಾಗೂ 6GB + 128GB ಸ್ಟೋರೇಜ್ ವೇರಿಯಂಟ್ ಹೊಂದಿವೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6,000mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಫೋನಿನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.

ಆಕರ್ಷಕ ಡಿಸ್‌ಪ್ಲೇ ರಚನೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, ಇದು TFT ಇನ್ಫಿನಿಟಿ-ವಿ-ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ ರೀಫ್ರೇಶ್ ರೇಟ್ 90Hz ಆಗಿದೆ. ವಿಡಿಯೋ ವೀಕ್ಷಣೆಗೆ ಹಾಗೂ ಗೇಮಿಂಗ್‌ಗೆ ಪೂರಕವಾಗಿದೆ.

ಪ್ರೊಸೆಸರ್ ಸಾಮರ್ಥ್ಯ ಎಷ್ಟು
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಎಕ್ಸಿನೋಸ್ 850SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ನಲ್ಲಿ ಒನ್ ಯುಐ ಕೋರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು ಡ್ಯುಯಲ್ ಸಿಮ್ (ನ್ಯಾನೋ) ಸ್ಲಾಟ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ 4GB RAM+64GB ಮತ್ತು 6GB RAM+128GB ವೇರಿಯೆಂಟ್ ಆಯ್ಕೆಯ ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಸ್‌ಡಿ ಕಾರ್ಡ್ ಮೂಲಕ 1TB ವರೆಗೂ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶವನ್ನು ಇದು ಒಳಗೊಂಡಿದೆ.

ಕ್ಯಾಮೆರಾ ಸೆನ್ಸಾರ್ ಸ್ಪೆಷಲ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ ನೊಂದಿಗೆ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾವು f/2.2 ಅಪರ್ಚರ್‌ನೊಂದಿಗೆ 5 ಮೆಗಾಪಿಕ್ಸೆಲ್ ಸೆನ್ಸಾರ್, ಅಲ್ಟ್ರಾ-ವೈಡ್-ಆಂಗಲ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರ್ ಇದ್ದು, f/2.2 ಅಪರ್ಚರ್ ಸಾಮರ್ಥ್ಯವನ್ನು ಒಳಗೊಂಡಿದೆ. ವಾಟರ್‌ಡ್ರಾಪ್ ಸ್ಕೈಲ್ ನಾಚ್ ಇದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 4G ನೆಟ್‌ವರ್ಕ್‌ನಲ್ಲಿ 58 ಗಂಟೆಗಳ ಟಾಕ್‌ಟೈಮ್ ಅನ್ನು ನೀಡಲಿದೆ. ಈ ಫೋನ್ 164.0x75.9x9.7mm ಸುತ್ತಳತೆಯನ್ನು ಪಡೆದಿದ್ದು, ಹಾಗೆಯೇ 221 ಗ್ರಾಂ ತೂಕವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ.

ಬೆಲೆ ಎಷ್ಟು, ಆಫರ್ ಹಾಗೂ ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಭಾರತದಲ್ಲಿ ಇಂದು ಬಿಡುಗಡೆ ಆಗಿದೆ. ಗ್ಯಾಲಕ್ಸಿ M12 4 ಜಿಬಿ + 64 ಜಿಬಿ ವೇರಿಯಂಟ್ ಸ್ಟೋರೇಜ್‌ನ ಬೆಲೆಯು 10,999ರೂ. ಆಗಿದೆ. ಹಾಗೆಯೇ 6 ಜಿಬಿ + 128 ಜಿಬಿ ಸ್ಟೋರೇಜ್‌ನ ವೇರಿಯಂಟ್ ಬೆಲೆಯು 13,499ರೂ. ಆಗಿದೆ. ಇನ್ನು ಗ್ಯಾಲಕ್ಸಿ M12 ಫೋನ್ ಅಟ್ರ್ಯಾಕ್ಟಿವ್ ಬ್ಲ್ಯಾಕ್, ಎಲಿಗಂಟ್ ಬ್ಲೂ ಮತ್ತು ಟ್ರೆಂಡಿ ಎಮರ್ಡ್ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ದೊರೆಯುತ್ತದೆ. ಅಂದಹಾಗೇ ಈ ಫೋನ್ ಇಂದು (ಮಾರ್ಚ್ 18 ರಂದು) ಫಸ್ಟ್ ಸೇಲ್ ಶುರು ಮಾಡಲಿದೆ.


Click it and Unblock the Notifications








