ನೀವು ಬೇಡಾ ಅಂದ್ರೂ, ಸ್ಯಾಮ್‌ಸಂಗ್‌ನ ಈ ಫೋನಿಗೆ ಭಾರೀ ಡಿಸ್ಕೌಂಟ್!
ದಕ್ಷಿಣ ಕೊರಿಯಾ ಟೆಕ್ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್ ಮೊಬೈಲ್ ಕಂಪನಿಯು ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಅವುಗಳಲ್ಲಿ ಅಗ್ಗದ ಬೆಲೆಯಿಂದ ಹೈ ಎಂಡ್ ಬೆಲೆಯ ಫೋನ್‌ಗಳು ಇವೆ. ಆ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಮೊಬೈಲ್ ಬಜೆಟ್ ದರದಲ್ಲಿ ಕಾಣಿಸಿಕೊಂಡಿದ್ದು, ಫೀಚರ್ಸ್‌ಗಳಿಂದ ಆಕರ್ಷಕ ಎನಿಸಿದೆ. ಈ ಫೋನ್ ಇದೀಗ ಭರ್ಜರಿ ರಿಯಾಯಿತಿ ಪಡೆದಿದೆ.
ಹೌದು, ಪ್ರಮುಖ ಇ ಕಾಮರ್ಸ್ ತಾಣವಾದ ಅಮೆಜಾನ್ ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಮೊಬೈಲ್ ಫೋನ್ 28% ರಷ್ಟು ಡಿಸ್ಕೌಂಟ್ ಪಡೆದಿದೆ. ಈ ಫೋನಿನ 4GB RAM + 64GB ವೇರಿಯಂಟ್ ಬೆಲೆಯು 17,999ರೂ. ಆಗಿದ್ದು, ಆಫರ್‌ನಲ್ಲಿ ಈ ಫೋನ್ ಈಗ 12,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್ ಆಫರ್ ಸಹ ದೊರೆಯುತ್ತವೆ.

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಫೋನ್ ಎಕ್ಸಿನೋಸ್ 850 SoC ಪ್ರೊಸೆಸರ್ ಪವರ್ ಪಡೆದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಮತ್ತು ಪ್ರೊಸೆಸರ್ ಮಾಹಿತಿ ಇಲ್ಲಿದೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಮೊಬೈಲ್ 6.6 ಇಂಚಿನ ಫುಲ್ HD+ LCD ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 480 ನಿಟ್ಸ್ ಬ್ರೈಟ್‌ನೆಸ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದರ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಪಡೆದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ ಎಕ್ಸಿನೋಸ್ 850 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 12.0-ಆಧಾರಿತ ಒನ್ UI 4 ಸಪೋರ್ಟ್ ನೊಂದಿಗೆ ಕೆಲಸ ಮಾಡಲಿದೆ.
ಮೆಮೊರಿ ಆಯ್ಕೆ ಎಷ್ಟಿದೆ : ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಮೊಬೈಲ್ 6GB RAM ಮತ್ತು 128GB ಆಂತರೀಕ ಸ್ಟೋರೇಜ್ ಅನ್ನು ಪಡೆದಿದ್ದು, ಸ್ಯಾಮ್‌ಸಂಗ್ RAM ಪ್ಲಸ್ ಫೀಚರ್ಸ್ ಮೂಲಕ RAM ಅನ್ನು 12GB ವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಸ್ಟೋರೇಜ್ ಅನ್ನು ಹೆಚ್ಚಿಸುವ ಅವಕಾಶ ಸಹ ಪಡೆದಿದೆ.
ಕ್ಯಾಮೆರಾ ಸೆನ್ಸಾರ್ ವಿಶೇಷ ಏನು : ಇನ್ನು ಈ ಮೊಬೈಲ್ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಪಡೆದಿದೆ. ಜೊತೆಗೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.
ಬ್ಯಾಟರಿ ಬ್ಯಾಕ್‌ಅಪ್ ಮತ್ತು ಇತರೆ ಫೀಚರ್ಸ್ ಮಾಹಿತಿ : ಸ್ಯಾಮ್‌ಸಂಗ್ ಗ್ಯಾಲಕ್ಸಿ M13 ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 15W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಇದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, 4G LTE ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಈ ಫೋನ್ ಕೂಡ AI ಪವರ್ ಸೌಲಭ್ಯ ಇವೆ.


Click it and Unblock the Notifications








